ಬೆಂಗಳೂರು: ಮಾಕಳಿಯ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ನವೀಕರಣಗೊಳಿಸಲಾಗಿದೆ. ಶಾಲೆಯಲ್ಲಿ ಈಗ ಡಿಜಿಟಲ್ ತರಗತಿ ಕೊಠಡಿಗಳು ಮತ್ತು ನೀರಿನ ಶುದ್ಧೀಕರಣ ವ್ಯವಸ್ಥೆಯನ್ನು ಒಳಗೊಂಡಂತೆ ಆಧುನಿಕ ಸೌಕರ್ಯಗಳನ್ನು ಹೊಂದಿದೆ, ವಿದ್ಯಾರ್ಥಿಗಳಿಗೆ ಆರೋಗ್ಯಕರ ಮತ್ತು ಹೆಚ್ಚು ತಾಂತ್ರಿಕವಾಗಿ-ಸುಧಾರಿತ ಕಲಿಕೆಯ ವಾತಾವರಣವನ್ನು ಒದಗಿಸುತ್ತದೆ.
ಹೊಸದಾಗಿ ನಿರ್ಮಿಸಲಾದ ಮೂರು ಅಂತಸ್ತಿನ ಕಟ್ಟಡವು ವಿಶಾಲವಾದ ತರಗತಿ ಕೊಠಡಿಗಳನ್ನು ಹೊಂದಿದೆ ಮತ್ತು ಮಾಡ್ಯುಲರ್ ಪೀಠೋಪಕರಣಗಳಿಂದ ಸುಸಜ್ಜಿತವಾದ ಕೊಠಡಿಯನ್ನು ಹೊಂದಿದೆ. ಯೋಜನೆಯು ಸುಸ್ಥಿರ ಅಭಿವೃದ್ಧಿ ಗುರಿ (SDG) 4ರೊಂದಿಗೆ ಹೊಂದಿಕೆಯಾಗುತ್ತದೆ, ಇದು ಎಲ್ಲರಿಗೂ ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸುವ ಗುರಿಯನ್ನು ಹೊಂದಿದೆ. ಹಿಮಾಲಯ ವೆಲ್ನೆಸ್ ಮೂರು ವರ್ಷಗಳ ಕಾಲ ಶಾಲೆಯನ್ನು ನಿರ್ವಹಿಸಲು ಬದ್ಧವಾಗಿದೆ. ಕಂಪನಿಯು ಸರ್ಕಾರದ ಅನುಮೋದನೆಗಳು ಮತ್ತು ನಿರ್ಮಾಣ ಪಾಲುದಾರಿಕೆಗಳ ಬೆಂಬಲದೊಂದಿಗೆ, ಪ್ರಾಥಮಿಕ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಕಲಿಕೆಯ ವಾತಾವರಣವನ್ನು ಸೃಷ್ಟಿಸಲು ಆಧುನಿಕ ಸೌಕರ್ಯಗಳನ್ನು ಒದಗಿಸಿದೆ. ಹೆಚ್ಚುವರಿಯಾಗಿ, ಶಾಲೆಯಲ್ಲಿ ಪ್ರಾಂಶುಪಾಲರ ಕಚೇರಿ, ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳು, ಅಡುಗೆಮನೆ, ಊಟದ ಹಾಲ್, ಮೂರು ತರಗತಿ ಕೊಠಡಿಗಳು, ಸಮುದಾಯ ಭವನ, ಮತ್ತು ಹೆಚ್ಚಿನ ಡಿಜಿಟಲ್ ಕಲಿಕೆಗಾಗಿ ಅವಕಾಶ ಒದಗಿಸುತ್ತದೆ.
ಹಿಮಾಲಯ ವೆಲ್‌ನೆಸ್ ಕಂಪನಿಯ ಮಾನವ ಸಂಪನ್ಮೂಲ ನಿರ್ದೇಶಕ ಕೆ.ಜಿ.ಉಮೇಶ್ ಮಾತನಾಡಿ, ಸಮಾಜದಲ್ಲಿ ಸಕಾರಾತ್ಮಕ ಪರಿಣಾಮ ಬೀರಲು ಬದ್ಧವಾಗಿರುವ ಸಾಮಾಜಿಕ ಪ್ರಜ್ಞೆಯುಳ್ಳ ಕಂಪನಿಯಾಗಿ, ಬದಲಾವಣೆ ತರುವ ಉದ್ದೇಶದಿಂದ ಜೀವನವನ್ನು ಶ್ರೀಮಂತಗೊಳಿಸಬೇಕೆಂದು ನಮ್ಮ ಉದ್ದೇಶ. ಮಾಕಳಿಯಲ್ಲಿ ರೂಪಾಂತರಗೊಂಡ ಸರ್ಕಾರಿ ಪ್ರಾಥಮಿಕ ಶಾಲೆಯು ಗುಣಮಟ್ಟದ ಶಿಕ್ಷಣ ಮತ್ತು ಸುಸ್ಥಿರ ಸಮುದಾಯ ಅಭಿವೃದ್ಧಿಯನ್ನು ಬೆಂಬಲಿಸುವುದು ನಮ್ಮ ಉದ್ದೇಶವಾಗಿದೆ. ಕಲಿಕೆಗೆ ಪೂರಕವಾದ ವಾತಾವರಣವನ್ನು ಒದಗಿಸುವ ಮೂಲಕ, ಸ್ವಯಂ-ಅಭಿವೃದ್ಧಿ ಮತ್ತು ಭವಿಷ್ಯದ ಉದ್ಯೋಗಾವಕಾಶಕ್ಕಾಗಿ ಯುವ ಮನಸ್ಸುಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದ್ದಾರೆ.
Advertisement