ಉಡುಪಿ: ಸೋಮವಾರ ರಾತ್ರಿ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಪಿತ್ತುಬೈಲ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸ್ಥಳೀಯ ಮಾಹಿತಿದಾರರ ಮೂಲಕ ಕರ್ನಾಟಕದ ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಮ್ ಗೌಡ (44) ನನ್ನು ಎಎನ್‌ಎಫ್ ತಂಡ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದೆ.
ಸೋಮವಾರ ರಾತ್ರಿ ವಿಕ್ರಮ್ ಗೌಡ ಮತ್ತಿತರರು ಭೇಟಿ ನೀಡಿದ್ದ ಮೂರು ಮನೆಗಳಲ್ಲಿ ಎನ್‌ಕೌಂಟರ್ ನಡೆದಿದೆ. ಈ ಮನೆಗಳ ನಿವಾಸಿಗಳನ್ನು ನಾಡ್ಪಾಲು ಪಶ್ಚಿಮ ಘಟ್ಟಗಳ ಇಳಿಜಾರಿನ ಪ್ರದೇಶಗಳಲ್ಲಿರುವ ತಮ್ಮ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸುವಂತೆ ಪೊಲೀಸರು ಸೂಚಿಸಿದ್ದರು. ವಿಕ್ರಮ್ ಗೌಡ ಪಡಿತರ ಸಾಮಗ್ರಿ ಮತ್ತು ಹಣವನ್ನು ಸಂಗ್ರಹಿಸಲು ಮೊದಲ ಮನೆಗೆ ಪ್ರವೇಶಿಸುತ್ತಿದ್ದಂತೆ, ಎನ್‌ಕೌಂಟರ್ ಕಾರ್ಯಗತಗೊಳಿಸಲಾಯಿತು. ಇಬ್ಬರು ಮಹಿಳೆಯರು ಸೇರಿದಂತೆ ಇತರ ಮೂವರು ನಕ್ಸಲೀಯರು ಸುರಕ್ಷತೆ ಖಚಿತಪಡಿಸಿಕೊಳ್ಳಲು ಹಾಗೂ ಎಎನ್‌ಎಫ್ ತಂಡದಿಂದ ತಪ್ಪಿಸಿಕೊಳ್ಳಲು ಹಿಂದೆ ನಿಂತಿದ್ದರು, ಗುಂಡಿನ ಸದ್ದು ಕೇಳಿ ದಟ್ಟ ಅರಣ್ಯಕ್ಕೆ ಪರಾರಿಯಾಗಿದ್ದಾರೆ ಎಂದು ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ.
ವಿಕ್ರಮ್ ಗೌಡ ಅವರ ಕಾಲಿನಲ್ಲಿ ನೋವಿತ್ತು ಎಂದು ವರದಿಯಾಗಿದೆ. ಆತನ ಗುರುತನ್ನು ದೃಢಪಡಿಸಿದೊಂಡ ತಕ್ಷಣ ಎಎನ್‌ಎಫ್ ಸಿಬ್ಬಂದಿ ಆತನ ಮೇಲೆ ಗುಂಡು ಹಾರಿಸಿದರು. ಆದರೆ ಮಂಗಳವಾರ ಬೆಳಿಗ್ಗೆ ಎಎನ್‌ಎಫ್ ತಂಡವು ಸ್ಥಳ ಪರಿಶೀಲನೆ ನಡೆಸಲು ಸಹಾಯ ಬಯಸಿದಾಗ ನಾಡ್ಪಾಲುವಿನ ಯಾವುದೇ ಸ್ಥಳೀಯ ಜನರು ಸ್ಥಳಕ್ಕೆ ಬರಲಿಲ್ಲ. ವಿಕ್ರಮ್ ಗೌಡನಿಗೆ ಸ್ಥಳೀಯರಿಂದ ಯಾವುದೇ ಬೆಂಬಲವಿರಲಿಲ್ಲ ಎಂದು ಪಶ್ಚಿಮ ಘಟ್ಟದ ಇಳಿಜಾರು ಗ್ರಾಮವಾದ ಮುದ್ರಾಡಿಯಲ್ಲಿ ವ್ಯಾಪಾರಿ ಹಾಗೂ ಸ್ಥಳೀಯ ನಿವಾಸಿಯೊಬ್ಬರು ಟಿಎನ್‌ಐಇಗೆ ತಿಳಿಸಿದರು. ಆದರೆ, ಪಶ್ಚಿಮ ಘಟ್ಟದ ಏರು ಪ್ರದೇಶಗಳಲ್ಲಿ ತನ್ನ ಬಗ್ಗೆ ಸಹಾನುಭೂತಿ ಹೊಂದಿರುವ ಕೆಲವರನ್ನು ಗುರುತಿಸಿ, ಬಲವಂತವಾಗಿ ಅವರಿಂದ ಪಡಿತರ ಮತ್ತು ಹಣವನ್ನು ತೆಗೆದುಕೊಂಡು ಹೋಗುತ್ತಿದ್ದ ಎಂದು ತಿಳಿದು ಬಂದಿದೆ.
4 ನೇ ತರಗತಿಯವರೆಗೆ ಓದಿದ ನಂತರ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಸ್ಥಳೀಯ ನಿವಾಸಿಗಳನ್ನು ಹೊರಹಾಕುವುದನ್ನು ವಿರೋಧಿಸಿ ಕರ್ನಾಟಕ ವಿಮೋಚನಾ ರಂಗಕ್ಕೆ ಸೇರಿದಾಗ ವಿಕ್ರಮ್ ಗೌಡ ಆರಂಭದಲ್ಲಿ ಬೆಂಬಲವನ್ನು ಗಳಿಸಿದರು. ನಂತರ ಅವರು ಕರ್ನಾಟಕ-ಕಬಿನಿ ದಳಂ-2ನೇ ನಕ್ಸಲ್ ತಂಡ ಮುನ್ನಡೆಸುತ್ತಿದ್ದ ಎಂದು ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಮಾಜಿ ಅಧ್ಯಕ್ಷ ಹಾಗೂ ವಿಕ್ರಮ್ ಗೌಡ ಅವರ ಸಂಬಂಧಿಯಾಗಿದ್ದರೂ ಆತನಿಂದ ಅಂತರ ಕಾಯ್ದುಕೊಂಡಿದ್ದ ಸುಧಾಕರ ಗೌಡ ನಾಡ್ಪಾಲು ಅವರು ಟಿಎನ್‌ಐಇಗೆ ತಿಳಿಸಿದ್ದಾರೆ. ಆರಂಭದಲ್ಲಿ ಜನರು ಅವರನ್ನು ಬೆಂಬಲಿಸಿದರು, ಆದರೆ ಹಿಂಸಾಚಾರದ ಮೂಲಕ ನ್ಯಾಯ ಕೇಳುವ ಅವರ ಮಾರ್ಗವನ್ನು ಒಪ್ಪಿಕೊಳ್ಳಲಿಲ್ಲ. “ಕರ್ನಾಟಕ ವಿಮೋಚನಾ ರಂಗದಿಂದ ಅನೇಕರು ಹೊರಬಂದರು. ಅವನು ನಕ್ಸಲೀಯನಾದ ನಂತರ ನಾನು ಅವನನ್ನು ನೋಡಿಲ್ಲ. ಆತ ಅವರು ಮೃದು ಸ್ವಭಾವದವರಾಗಿದ್ದ, ವಿಕ್ರಮ್ ಗೌಡ ಅವರ ಪೋಷಕರು ಕೂಡ ಇಲ್ಲ ಎಂದು ತಿಳಿಸಿದ್ದಾರೆ.
Advertisement