ನಕ್ಸಲ್ ದಾಳಿ ಪ್ಲಾನ್ ಮಾಡಿರಲಿಲ್ಲ, ಶರಣಾಗಲು ಅವಕಾಶ ನೀಡಿದ್ದೇವು, ಆತ ನಮ್ಮ ಮಾತು ಕೇಳಲಿಲ್ಲ: DGP ಪ್ರಣಬ್ ಮೊಹಂತಿ

ಎನ್‌ಕೌಂಟರ್‌ ಫೇಕ್‌ ಅಲ್ಲ, ಈ ಬಗ್ಗೆ ಪ್ಲ್ಯಾನ್‌ ಕೂಡ ಮಾಡಿರಲಿಲ್ಲ ಎಂದು ಮೊಹಂತಿ ತಿಳಿಸಿದರು. ವಿಕ್ರಮ್ ಗೌಡನಿಗೆ ಶರಣಾಗಲು ಎಲ್ಲಾ ಅವಕಾಶ ನೀಡಿದ್ದೇವು, ಆದರೆ ಆತ ಮಾತು ಕೇಳಲಿಲ್ಲ.
Pronab Mohanty
ಪ್ರಣಬ್ ಮೊಹಾಂತಿ
Updated on

ಉಡುಪಿ: ಶರಣಾಗತಿಯೊಂದೇ ನಿಮಗಿರುವ ಒಂದೇ ಒಂದು ದಾರಿ ಎಂಬ ಸಂದೇಶವನ್ನು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ಹೇಳಿದ್ದಾರೆ.

ಉಡುಪಿ ಜಿಲ್ಲೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕ್ಸಲ್ ಹಾಗೂ ಎಎನ್‌ಎಫ್ (ನಕ್ಸಲ್‌ ನಿಗ್ರಹದಳ) ನಡುವಿನ ಮುಖಾಮುಖಿಯಲ್ಲಿ ಮೋಸ್ಟ್‌ ವಾಂಟೆಡ್‌ ನಕ್ಸಲ್ ವಿಕ್ರಂ ಗೌಡನ ಎನ್‌ಕೌಂಟರ್ ನಡೆದಿದೆ. ಎನ್‌ಕೌಂಟರ್‌ ಫೇಕ್‌ ಅಲ್ಲ, ಈ ಬಗ್ಗೆ ಪ್ಲ್ಯಾನ್‌ ಕೂಡ ಮಾಡಿರಲಿಲ್ಲ ಎಂದು ಮೊಹಂತಿ ತಿಳಿಸಿದರು. ವಿಕ್ರಮ್ ಗೌಡನಿಗೆ ಶರಣಾಗಲು ಎಲ್ಲಾ ಅವಕಾಶ ನೀಡಿದ್ದೇವು, ಆದರೆ ಆತ ಮಾತು ಕೇಳಲಿಲ್ಲ, ಆತನ ಆಯುಧಕ್ಕೆ ಪೊಲೀಸರು ಬಲಿಯಾಗುವುದನ್ನು ತಪ್ಪಿಸಲು ಎನ್ ಕೌಂಟರ್ ಮಾಡಲಾಯಿತು ಎಂದು ತಿಳಿಸಿದ್ದಾರೆ.

ಎಎನ್‌ಎಫ್‌ನವರು ಈ ಪ್ರದೇಶದಲ್ಲಿ ಕೂಂಬಿಂಗ್ ನಡೆಸುತ್ತಿದ್ದರಿಂದ ಈ ಅವಕಾಶ ಸಿಕ್ಕಿತು. ಎನ್‌ಕೌಂಟರ್ ಎಂದು ಹೇಳಿದರು ಮತ್ತು ವಿಕ್ರಮ್ ಗೌಡ ಮತ್ತು ಅವರ ತಂಡವು ಮನೆಯಿಂದ ಪಡಿತರ ಸಂಗ್ರಹಿಸಲು ಹೆಬ್ರಿ ತಾಲೂಕಿನ ಪಿತ್ತುಬೈಲ್, ನಾಡ್‌ಪಾಲ್ ಗ್ರಾಮಕ್ಕೆ ಆಗಮಿಸಿತು. ಎಎನ್‌ಎಫ್ ತಂಡವು ಹೊಂಚು ಹಾಕಿ ದಾಳಿ ನಡೆಸಿದೆ ಎಂಬ ಸಿದ್ಧಾಂತವನ್ನು ಡಿಜಿ ತಿರಸ್ಕರಿಸಿದರು. ಸೋಮವಾರ ಸಂಜೆ ಸುಮಾರು 6 ಗಂಟೆ ಹೊತ್ತಿನಲ್ಲಿ ಹೆಬ್ರಿ ತಾಲೂಕಿನ ನಾಡ್ಪಾಲಿನ ಪೀತಾಬೈಲು ಎಂಬಲ್ಲಿನ ಮನೆ ಬಳಿ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ, ಆತನ ಬಳಿ ಮೆಷಿನ್ ಗನ್, ಪಿಸ್ತೂಲ್‌, ಚಾಕು ದೊರಕಿದೆ. ಕಾರ್ಯಾಚರಣೆ ವೇಳೆ ಎಷ್ಟು ನಕ್ಸಲರು ಇದ್ದರು ಎಂದು ಎಎನ್‌ಎಫ್‌ಗೆ ಮಾಹಿತಿ ಇಲ್ಲ. ಎನ್‌ಕೌಂಟರ್‌ ಫೇಕ್‌ ಅಲ್ಲ, ಈ ಬಗ್ಗೆ ಪ್ಲ್ಯಾನ್‌ ಕೂಡ ಮಾಡಿರಲಿಲ್ಲ. ಈ ವಿಷಯದಲ್ಲಿ ಯಾವುದೇ ಸಂಶಯ ಬೇಡ. ನಕ್ಸಲ್ ಪ್ರತಿದಾಳಿ ಸಾಧ್ಯತೆ ಬಗ್ಗೆ ಅಲರ್ಟ್ ಆಗಿದ್ದೇವೆ. ಅದನ್ನು ತಡೆಯುತ್ತೇವೆ ಎಂದು ತಿಳಿಸಿದರು.

ವಿಕ್ರಮ ಗೌಡ ಹಳೆಯ ಫೋಟೋ ಬಗ್ಗೆ ಪ್ರತಿಕ್ರಿಯಿಸಿದ ಡಿಜಿ, ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಎಎನ್‌ಎಫ್ ಈ ಪ್ರಕರಣದಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು. “ನಮ್ಮ ಬಳಿ ಗೌಡ ಮಾತ್ರವಲ್ಲದೇ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿರುವವರ ಇತ್ತೀಚಿನ ಚಿತ್ರಗಳೂ ಇವೆ. ಕುಟುಂಬದವರು ಕೂಡ ಖಚಿತಪಡಿಸಿದ್ದು, ಅಗತ್ಯ ವಿಧಿವಿಧಾನಗಳ ನಂತರ ವಿಕ್ರಮ್ ಗೌಡ ಅವರ ದೇಹವನ್ನು ಹಸ್ತಾಂತರಿಸಲಾಗಿದೆ ಎಂದು ಡಿಜಿ ಹೇಳಿದರು. ಸೋಮವಾರದ ಎನ್‌ಕೌಂಟರ್ ನಂತರ, ಪರಾರಿಯಾಗಿರುವ ಇತರ ಇಬ್ಬರು ಅಥವಾ ಮೂವರು ನಕ್ಸಲೀಯರನ್ನು ಹಿಡಿಯಲು ಕಾಡಿನಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಡಿಜಿ ತಿಳಿಸಿದ್ದಾರೆ. “ನಾವು ಸ್ಥಳೀಯ ಜನರಲ್ಲಿ ಎಎನ್‌ಎಫ್ ಅವರನ್ನು ರಕ್ಷಿಸುತ್ತದೆ ಮತ್ತು ಆತಂಕಪಡುವ ಅಗತ್ಯವಿಲ್ಲ ಎಂಬ ವಿಶ್ವಾಸವನ್ನು ಮೂಡಿಸುತ್ತೇವೆ. ಸ್ಥಳೀಯ ಸಹಾನುಭೂತಿ ಹೊಂದಿರುವವರ ಬಗ್ಗೆ ನಮಗೆ ಗುಪ್ತಚರ ಮಾಹಿತಿ ಇದೆ ಮತ್ತು ಅದನ್ನು ಸಹ ನಿರ್ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.

Pronab Mohanty
ನಕ್ಸಲ್ ವಿಕ್ರಮ್ ಗೌಡ ಹತ್ಯೆ ಮಾಡುವ ತುರ್ತು ಏನಿತ್ತು? ಬಂದೂಕುಗಳಿವೆ ಎಂಬ ಕಾರಣಕ್ಕೆ ಯಾರನ್ನಾದರೂ ಕೊಲ್ಲಬಹುದೇ?

2024 ರಲ್ಲಿ ಕರ್ನಾಟಕ ಸರ್ಕಾರ ಘೋಷಿಸಿದ ವಿಶೇಷ ಶರಣಾಗತಿ ನೀತಿಯು ತೀವ್ರವಾದ ವಿಚಾರವಾದಿಗಳಿಗೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಲು ಎಲ್ಲಾ ಅವಕಾಶಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಶರಣಾಗಲು ಬಯಸುವವರಿಗೆ ವಿಶೇಷ ಪ್ಯಾಕೇಜ್ ಕೊಡುಗೆಯಾಗಿದೆ, ಆದರೆ ನಕ್ಸಲಿಸಂ ನಿಗ್ರಹ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಅವರು ಪುನರುಚ್ಚರಿಸಿದರು. ನಕ್ಸಲ್ ವಿಕ್ರಮ್ ಗೌಡ ವಿರುದ್ಧ ಹಲವಾರು ಸುಲಿಗೆ, ಕೊಲೆ ಮತ್ತು ಇತರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮೊಹಾಂತಿ ಹೇಳಿದರು ಮತ್ತು ಪಿತ್ತುಬೈಲ್‌ನಲ್ಲಿ ನಡೆದ ಎನ್‌ಕೌಂಟರ್ ಸಂದರ್ಭದಲ್ಲಿ ಎಎನ್‌ಎಫ್ ತಂಡವು ವಿಕ್ರಮ್ ಗೌಡ ಬಳಿಯಿಂದ 9 ಎಂಎಂ ಕಾರ್ಬೈನ್ ಗನ್ ಅನ್ನು ವಶಪಡಿಸಿಕೊಂಡಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com