ಕೋಚ್ ಗಳ ಪೂರೈಕೆಯಲ್ಲಿ ವಿಳಂಬ: ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋ ರೈಲು ಸಂಚಾರ ಮತ್ತಷ್ಟು ತಡ!

ವಿತರಣೆಯಲ್ಲಿ ವಿಳಂಬದ ಕಾರಣ ಉದ್ದೇಶಿತ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡುವಂತೆ ಮಾಡಿತು. ಹೊಸ ರೈಲಿನ ಪರೀಕ್ಷೆಯನ್ನು ಒಂದು ವಾರ ಮಾಡಬೇಕಾಗಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ RV ರಸ್ತೆ-ಬೊಮ್ಮಸಂದ್ರ ಲೈನ್‌ನಲ್ಲಿ ಮೆಟ್ರೋ ರೈಲು ಕಾರ್ಯಾಚರಣೆಗೆ ನೀಡಿದ್ದ ಹಲವು ಗಡುವುಗಳು ತಪ್ಪಿದ ನಂತರ 2025 ರ ಜನವರಿ ವೇಳೆಗೆ ರೈಲು ಕಾರ್ಯಾಚರಣೆ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ತಿಳಿಸಿದೆ.

ಎರಡನೇ ಚಾಲಕ ರಹಿತ ರೈಲು ಸೆಟ್ ಕಳುಹಿಸಬೇಕಾಗಿತ್ತು, ಆದರೆ ಕೋಲ್ಕತ್ತಾ ಮೂಲದ ಟಿಟಾಘಡ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ ಚೀನಾದಿಂದ ಕಳುಹಿಸಲಾದ ಕೋಚ್‌ಗಳನ್ನು ಸಿದ್ಧಪಡಿಸುವಲ್ಲಿ ಭಾರಿ ವಿಳಂಬವಾಗಿದೆ, ಹೀಗಾಗಿ ರೈಲು ಮಾರ್ಗ ಉದ್ಘಾಟನೆಯ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಒಂದೆರಡು ರೈಲು ಸೆಟ್‌ಗಳು ಬರಬೇಕಾಗಿರುವುದರಿಂದ ಮೈಟ್ರೆೋ ರೈಲು ಸಂಚಾರ ಮಾರ್ಚ್ ಅಥವಾ ಏಪ್ರಿಲ್‌ ಗೆ ಮುಂದೂಡುವ ಬಗ್ಗೆ ಆಲೋಚಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಚೀನಾ ರೈಲ್ವೇ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (CRCC) ಕಾರ್ಖಾನೆಯು ಈ ವರ್ಷ ಫೆಬ್ರವರಿ 14 ರಂದು ಕಳುಹಿಸಿದ ರೈಲು ಸೆಟ್ ಚೆನ್ನೈ ಮೂಲಕ ಬೆಂಗಳೂರು ತಲುಪಿತು,ಇದರ ಪ್ರತಿ ಕೋಚ್‌ನಲ್ಲಿ ಅಳವಡಿಸಲಾದ ಬಹು ಘಟಕಗಳು ಮೂಲಮಾದರಿಯ ರೈಲು ಸೆಟ್ ಸಂಪೂರ್ಣವಾಗಿ ಸಿದ್ಧಪಡಿಸಿದೆ.

ಎರಡನೇ ರೈಲು ಸೆಟ್‌ ಕೋಚ್‌ಗಳ ಶೆಲ್ ಅನ್ನು ಮುಂಬೈ ಬಂದರಿನ ಮೂಲಕ ಅದರ ಕೋಲ್ಕತ್ತಾ ಪಾಲುದಾರರಿಗೆ ಕಳುಹಿಸಲಾಗಿದೆ. ಅವುಗಳನ್ನು ಹೊಂದಿಸಲು ಮತ್ತು ಅವುಗಳನ್ನು ಬೆಂಗಳೂರಿನ ಹೆಬ್ಬಗೋಡಿಗೆ ಕಳುಹಿಸುವ ಮೊದಲು ಪರೀಕ್ಷಿಸುವ ಅಗತ್ಯವಿದೆ, ಟಿಟಘಡ್ ಪ್ರತಿ ತಿಂಗಳು ವಿತರಣಾ ದಿನಾಂಕದ ಗಡುವನ್ನು ಮುಂದೂಡುತ್ತಲೇ ಇತ್ತು. ಈಗ ಡಿಸೆಂಬರ್ ಮೊದಲ ವಾರದ ಗಡುವು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿತರಣೆಯಲ್ಲಿ ವಿಳಂಬದ ಕಾರಣ ಉದ್ದೇಶಿತ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡುವಂತೆ ಮಾಡಿತು. ಹೊಸ ರೈಲಿನ ಪರೀಕ್ಷೆಯನ್ನು ಒಂದು ವಾರ ಮಾಡಬೇಕಾಗಿದೆ. ಅದರ ನಂತರ, ಎರಡು ರೈಲುಗಳ ಏಕಕಾಲಿಕ ಚಾಲನೆಯೊಂದಿಗೆ ಹಲವು ಪರೀಕ್ಷೆ ಕೈಗೊಳ್ಳಬೇಕಾಗುತ್ತದೆ. ಇದಕ್ಕಾಗಿ ಎರಡು ವಾರಗಳಸಮಯ ಬೇಕಾಗುತ್ತದೆ. ನಮ್ಮ ಬಳಿ ಕೇವಲ ಒಂದೇ ಒಂದು ರೈಲು ಇದೆ, ಹೀಗಾಗಿ ಇದನ್ನು ಮಾಡಲು ಸಾಧ್ಯವಿಲ್ಲ. ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ಪರಿಶೀಲನೆ ಮತ್ತು ಅನುಮೋದನೆ ಕೂಡ ಪಡೆಯಬೇಕಾಗಿದೆ ಎಂದು ತಿಳಿಸಿದೆ.

Representational image
Namma Metro: BMRCL ಸಮಿತಿಯಿಂದ ಸಿಂಗಾಪುರ-ಹಾಂಗ್‌ಕಾಂಗ್‌ನಲ್ಲಿ ರೈಲು ಜಾಲ, ದರ ನಿಗದಿ ಬಗ್ಗೆ ಪರಾಮರ್ಶನೆ!

ಇನ್ನೊಂದು ವಿಷಯವೆಂದರೆ ಕೇವಲ ಎರಡು ರೈಲುಗಳು, 16 ನಿಲ್ದಾಣಗಳೊಂದಿಗೆ 19.15 ಕಿಮೀ ವ್ಯಾಪ್ತಿಯನ್ನು ಪ್ರತಿ 40 ನಿಮಿಷಗಳಿಗೊಮ್ಮೆ ರೈಲು ಮೂಲಕ ಕ್ರಮಿಸಬಹುದು, ಏಕೆಂದರೆ ಕಾರ್ಯಾಚರಣೆಯ ವೇಗವು ಕೇವಲ 32-34 ಕಿಮೀ.ಇರುತ್ತದೆ "ಪ್ರತಿ 40 ನಿಮಿಷಗಳಿಗೊಮ್ಮೆ ರೈಲು ಸಂಚಾರ ನಡೆಸುವುದರಿಂದ ಅಪಾರ ಟೀಕೆ ಎದುರಿಸಬೇಕಾಗತ್ತದೆ. ಮತ್ತು ರೈಲುಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಬಹುದು" ಎಂದು ಮತ್ತೊಂದು ಮೂಲವು ವಿವರಿಸಿದೆ.

ಟಿಟಾಗಢ್ ಮಾರ್ಚ್ ವೇಳೆಗೆ ಇನ್ನೂ ಎರಡು ರೈಲುಗಳನ್ನು ಪೂರೈಸುತ್ತದೆ. ಆ ಸಮಯದಲ್ಲಿ ನಾಲ್ಕು ರೈಲುಗಳೊಂದಿಗೆ, BMRCL ಪ್ರತಿ 20 ನಿಮಿಷಗಳಿಗೊಮ್ಮೆ ಟ್ರಿಪ್ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ನಾವು ಕನಿಷ್ಠ 30 ನಿಮಿಷಗಳಿಗೊಮ್ಮೆ ರೈಲು ಓಡಿಸಬೇಕಾಗಿದೆ. ಹೀಗಾಗಿ ನಾವು ಬೊಮ್ಮಸಂದ್ರ ರೈಲು ಸಂಚಾರ ಕಾರ್ಯಾಚರಣೆಗಳನ್ನು ಕಿಕ್‌ಸ್ಟಾರ್ಟ್ ಮಾಡಲು ಬಯಸುತ್ತೇವೆ. ಮುಂದಿನ ತಿಂಗಳು ಟಿಟಾಘರ್‌ನಿಂದ ಎರಡನೇ ರೈಲು ಸೆಟ್ ಪಡೆದರೆ, ನಾವು ಕೆಲವು ನಿಲ್ದಾಣಗಳನ್ನು ಬೈಪಾಸ್ ಮಾಡುವ ಮೂಲಕ ಮತ್ತು ಕೆಲವು ನಿಲ್ದಾಣಗಳಲ್ಲಿ ಮಾತ್ರ ನಿಲ್ಲಿಸುವ ಮೂಲಕ ರೈಲನ್ನು ನಿರ್ವಹಿಸಬಹುದು ಎಂದು BMRCL ವ್ಯವಸ್ಥಾಪಕ ನಿರ್ದೇಶಕ ಎಂ ಮಹೇಶ್ವರ್ ರಾವ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು, “ನಾವು ಎಲ್ಲವನ್ನೂ ವೇಗಗೊಳಿಸಲು ಟಿಟಾಗಢ್ ಮತ್ತು ಸಿಆರ್‌ಆರ್‌ಸಿಯನ್ನು ಕೇಳಿದ್ದೇವೆ. ತ್ವರಿತ ವಿತರಣೆಗಾಗಿ ಮೆಟ್ರೋ ಅಧಿಕಾರಿಗಳು ಕಾರ್ಖಾನೆಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಆದಷ್ಟು ಬೇಗ ಕೋಚ್ ಗಳನ್ನು ತಲುಪಿಸುವಂತೆ ನಾವು ಕೇಳಿದ್ದೇವೆ. 2019 ರಲ್ಲಿ CRRC ಯೊಂದಿಗೆ BMRCL 216 ಕೋಚ್‌ಗಳ ಪೂರೈಕೆಗಾಗಿ ರೂ 1,578 ಕೋಟಿ ರು ಒಪ್ಪಂದವು ಮಾಡಿಕೊಂಡಿದೆ. ಉಳಿದ 204 ಕೋಚ್‌ಗಳನ್ನು ಟಿಟಾಘಡ್ ನಲ್ಲಿ ಮಾತ್ರ ಉತ್ಪಾದಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com