8 ದೇಶಗಳ 1,500 ವಿದ್ಯಾರ್ಥಿಗಳಿಗೆ ಆರ್ಥಿಕ ಶಿಕ್ಷಣ ನೆರವು; ಬೆಂಗಳೂರು ಹುಡುಗಿ ಸಾಧನೆ!

ಪಿ. ವೇದಿಕಾ ರಚಿಸಿರುವ ಈ ಉಚಿತ ಆನ್‌ಲೈನ್ ವೆಬ್‌ನಾರ್ ಸರಣಿಯು ಯುವಜನರಿಗೆ ಬಜೆಟ್, ಉಳಿತಾಯ, ಹೂಡಿಕೆ ಮತ್ತು ಉದ್ಯಮಶೀಲತೆಯನ್ನು ಅರ್ಥಮಾಡಿಕೊಳ್ಳುವಂತಹ ಪ್ರಮುಖ ಆರ್ಥಿಕ ಕೌಶಲ್ಯ ಕಲಿಸುವತ್ತ ಗಮನ ಕೇಂದ್ರೀಕರಿಸಿದೆ.
Casual Images
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರಿನ 12ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಗ್ಲೋಬಲ್ ಯೂತ್ ಎಕನಾಮಿಕ್ ಎಂಪವರ್‌ಮೆಂಟ್ ಪ್ರೋಗ್ರಾಂ (GYEEP) ಮೂಲಕ ಎಂಟು ದೇಶಗಳ 1,500 ವಿದ್ಯಾರ್ಥಿಗಳಿಗೆ ಆರ್ಥಿಕ ಶಿಕ್ಷಣ ಬಗ್ಗೆ ಕಲಿಯಲು ನೆರವಾಗಿದ್ದಾರೆ.

ಪಿ. ವೇದಿಕಾ ರಚಿಸಿರುವ ಈ ಉಚಿತ ಆನ್‌ಲೈನ್ ವೆಬ್‌ನಾರ್ ಸರಣಿಯು ಯುವಜನರಿಗೆ ಬಜೆಟ್, ಉಳಿತಾಯ, ಹೂಡಿಕೆ ಮತ್ತು ಉದ್ಯಮಶೀಲತೆಯನ್ನು ಅರ್ಥಮಾಡಿಕೊಳ್ಳುವಂತಹ ಪ್ರಮುಖ ಆರ್ಥಿಕ ಕೌಶಲ್ಯ ಕಲಿಸುವುದು ಮತ್ತು ಕಡೆಗಣಿಸಲ್ಪಟ್ಟ ಅನೇಕ ಶಾಲೆಗಳ ನಡುವಿನ ಅಂತರವನ್ನು ಸರಿದೂರಿಗಿಸುವುದರತ್ತ ಗಮನ ಕೇಂದ್ರೀಕರಿಸಿದೆ.

ಯೂಟ್ಯೂಬ್‌ನಲ್ಲಿ ಲಭ್ಯವಿರುವ GYEEP ಆವೃತ್ತಿಗಳನ್ನು ಕೆನಡಿಯನ್ ಇಂಟರ್‌ನ್ಯಾಶನಲ್ ಸ್ಕೂಲ್‌ನ IB2 ವಿದ್ಯಾರ್ಥಿ ವೇದಿಕಾ ರಚಿಸಿದ್ದಾರೆ ಮತ್ತು ನಡೆಸುತ್ತಿದ್ದಾರೆ. ಈ ಕಾರ್ಯಕ್ರಮವು ಈಜಿಪ್ಟ್‌ನ ನೈಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಲೆಬನಾನ್‌ನ ಅರ್ಥಶಾಸ್ತ್ರಜ್ಞರು ಮತ್ತು ಭಾರತದ ಶಿಕ್ಷಣ ತಜ್ಞರನ್ನು ಒಳಗೊಂಡಂತೆ ಪ್ರಪಂಚದಾದ್ಯಂತದ ತಜ್ಞರನ್ನು ಒಟ್ಟುಗೂಡಿಸುತ್ತದೆ. ಈ ತಜ್ಞರು ಉಪನ್ಯಾಸ ನೀಡುತ್ತಾರೆ. ಕಾರ್ಯಾಗಾರ ನಡೆಸುತ್ತಾರೆ. ನೇರ ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.

ದೇಶಾದ್ಯಂತ ವಿದ್ಯಾರ್ಥಿಗಳಿಗೆ ಹಣಕಾಸು ನಿರ್ವಹಣೆ ಮತ್ತು ಉದ್ಯಮಶೀಲತೆ ಶಿಕ್ಷಣದಲ್ಲಿನ ಅಂತರವನ್ನು ಗುರುತಿಸಿ ವೇದಿಕಾ 2021 ರಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಸುರಕ್ಷಿತ ಭವಿಷ್ಯವನ್ನು ನಿರ್ಮಿಸಲು ನಿರ್ಣಾಯಕವಾಗಿರುವ ಹಣಕಾಸು ನಿರ್ವಹಣೆ ಮತ್ತು ಉದ್ಯಮಶೀಲತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಜ್ಞಾನ ಲಭ್ಯವಿದೆ ಎಂಬುದುನ್ನು ಖಾತ್ರಿಪಡಿಸಲು ಬಯಸುತ್ತೇನೆ. ಅದೇ ರೀತಿಯಲ್ಲಿ GYEEP ಪ್ರಾರಂಭವಾಯಿತು" ಎಂದು ಅವರು TNIE ಗೆ ತಿಳಿಸಿದರು.

Casual Images
ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಗಮನ ಸೆಳೆದ ಫ್ಲೈಯಿಂಗ್ ಮ್ಯಾನ್

ಮೂಲತಃ 7 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು, ಈ ಕಾರ್ಯಕ್ರಮ ತ್ವರಿತಗತಿಯಲ್ಲಿ ಜನಪ್ರಿಯತೆ ಪಡೆಯಿತು. ವಯಸ್ಕರು ಸೇರಿದಂತೆ ವಿವಿಧ ವಯೋಮಾನದವರಿಂದ ಭಾಗವಹಿಸುವಿಕೆ ಆಕರ್ಷಿಸಿತು. ವೇದಿಕಾ ಅವರು ಗೂಗಲ್ ಫಾರ್ಮ್‌ಗಳ ಮೂಲಕ ಸಂಗ್ರಹಿಸಿದ ಡೇಟಾವನ್ನು ಬಳಸಿಕೊಂಡು ವಿವಿಧ ಸಮಯ, ವಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸೆಷನ್ ದೊರೆಯುವಂತೆ ಅವಕಾಶ ಮಾಡಿದರು. ಅವರು ವಿವಿಧ ದೇಶಗಳಲ್ಲಿ ರೋಟರಿ ಇಂಟರ್‌ನ್ಯಾಶನಲ್ ಅಡಿಯಲ್ಲಿ 16 ಕ್ಲಬ್‌ಗಳೊಂದಿಗೆ ಪಾಲುದಾರರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com