ಎಲ್ಲಾ ವೆಚ್ಚಗಳಿಗೆ ಹಣಕಾಸು ಇಲಾಖೆಯ ಅನುಮೋದನೆ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ

ಈ ಅಭೂತಪೂರ್ವ ಕ್ರಮ ವಿದ್ಯುತ್ ಬಿಲ್‌ಗಳು ಮತ್ತು ಬಾಡಿಗೆ ಪಾವತಿಗಳಂತಹ ದಿನನಿತ್ಯದ ವೆಚ್ಚಗಳನ್ನು ಸಹ ಒಳಗೊಂಡಿರುತ್ತದೆ. ರಾಜ್ಯದಲ್ಲಿ ಸಾರ್ವಜನಿಕ ಹಣವನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದನ್ನು ಈ ಆದೇಶ ಮರು ವ್ಯಾಖ್ಯಾನಿಸುತ್ತದೆ.
file pic
ಸಂಗ್ರಹ ಚಿತ್ರonline desk
Updated on

ಬೆಂಗಳೂರು: ಆರ್ಥಿಕತೆಗೆ ಸಂಬಂಧಿಸಿದಂತೆ ಕೆಲವು ಕಠಿಣ ನಿರ್ಧಾರಗಳನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ.

ಇನ್ನು ಮುಂದೆ ಎಲ್ಲಾ ಖರ್ಚುಗಳಿಗೂ ಹಣಕಾಸು ಇಲಾಖೆಯ ಅನುಮೋದನೆ ಪಡೆಯುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಎಲ್ಲಾ ವೆಚ್ಚಗಳು, ಎಷ್ಟೇ ಚಿಕ್ಕದಾಗಿದ್ದರೂ, ಈಗ ಹಣಕಾಸು ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕಾಗುತ್ತದೆ.

ಈ ಅಭೂತಪೂರ್ವ ಕ್ರಮ ವಿದ್ಯುತ್ ಬಿಲ್‌ಗಳು ಮತ್ತು ಬಾಡಿಗೆ ಪಾವತಿಗಳಂತಹ ದಿನನಿತ್ಯದ ವೆಚ್ಚಗಳನ್ನು ಸಹ ಒಳಗೊಂಡಿರುತ್ತದೆ. ರಾಜ್ಯದಲ್ಲಿ ಸಾರ್ವಜನಿಕ ಹಣವನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದನ್ನು ಈ ಆದೇಶ ಮರು ವ್ಯಾಖ್ಯಾನಿಸುತ್ತದೆ.

ವಾಲ್ಮೀಕಿ ಕಾರ್ಪೊರೇಷನ್ ಹಗರಣದ ನೆರಳಿನಲ್ಲೇ ಈ ಪ್ರಕಟಣೆ ಬಂದಿದೆ. ಇದು ಭ್ರಷ್ಟಾಚಾರದ ಜಾಲವನ್ನು ಬಹಿರಂಗಪಡಿಸಿದೆ. ಅಲ್ಲಿ ದೊಡ್ಡ ಮೊತ್ತದ ತೆರಿಗೆದಾರರ ಹಣವನ್ನು ಭ್ರಷ್ಟ ಅಧಿಕಾರಿಗಳು ವೈಯಕ್ತಿಕ ಲಾಭಕ್ಕಾಗಿ ಬೇರೆಡೆಗೆ ವರ್ಗಾಯಿಸಿದ್ದಾರೆ. ಹಗರಣ ವ್ಯಾಪಕವಾದ ಹಣಕಾಸಿನ ಅಕ್ರಮಗಳಿಗೆ ಅವಕಾಶ ನೀಡುವ ವ್ಯವಸ್ಥೆಯಲ್ಲಿನ ಗಂಭೀರ ದೋಷಗಳನ್ನು ಬಹಿರಂಗಪಡಿಸಿದೆ. ಸಾರ್ವಜನಿಕ ಆಕ್ರೋಶವನ್ನು ಎದುರಿಸಿದ ಸರ್ಕಾರ ಅಂತಿಮವಾಗಿ ಜನರ ವಿಶ್ವಾಸವನ್ನು ಪುನಃಸ್ಥಾಪಿಸಲು ಭ್ರಷ್ಟಾಚಾರವನ್ನು ತಡೆಯಲು ನಿರ್ಧರಿಸಿ ಈ ಕ್ರಮ ತೆಗೆದುಕೊಂಡಿದೆ.

ಸಣ್ಣ ಪಾವತಿಗಳನ್ನು ಸಹ ಹಣಕಾಸು ಇಲಾಖೆಯಿಂದ ಪರಿಶೀಲಿಸಬೇಕು ಮತ್ತು ತೆರವುಗೊಳಿಸಬೇಕು ಎಂಬ ನಿಯಮ ರೂಪಿಸುವ ಮೂಲಕ ಸರ್ಕಾರ ಯಾರೂ ಹೊಣೆಗಾರಿಕೆಯಿಂದ ಹೊರತಾಗಿಲ್ಲ ಎಂಬ ಸಂದೇಶವನ್ನು ರವಾನಿಸುತ್ತಿದೆ ಮತ್ತು ರಾಜ್ಯ ಮಂಡಳಿಗಳು ಮತ್ತು ನಿಗಮಗಳು ಖರ್ಚು ಮಾಡುವ ಪ್ರತಿ ರೂಪಾಯಿಗೆ ಲೆಕ್ಕ ನೀಡಬೇಕಾಗುತ್ತದೆ.

file pic
ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ 46 ಸಾವಿರ ಕೋಟಿ ರೂ ಹೂಡಿಕೆ: ಸಿದ್ದರಾಮಯ್ಯ

ಈ ಪ್ರಕಟಣೆ ಸಾರ್ವಜನಿಕ ಅಸಮಾಧಾನವನ್ನು ತಣಿಸುವ ಮತ್ತು ಹಣಕಾಸು ನಿರ್ವಹಣಾ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಮರುಸ್ಥಾಪಿಸುವ ಗುರಿಯನ್ನು ಹೊಂದಿದೆ. "ಇಂತಹ ಹಣಕಾಸಿನ ದುಷ್ಕೃತ್ಯಗಳು ಪುನರಾವರ್ತನೆಯಾಗದಂತೆ ಖಚಿತಪಡಿಸಿಕೊಳ್ಳಲು ಇದು ಅವಶ್ಯಕವಾಗಿದೆ" ಎಂದು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿರುವ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com