ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಇಂದು ಬೆಂಗಳೂರಿನಲ್ಲಿ ದೇವಿ ಅವಾರ್ಡ್ಸ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಬಾರಿ 12 ಮಹಿಳಾ ಸಾಧಕಿಯರಿಗೆ ದೇವಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಉದ್ಯಮದಿಂದ ಹಿಡಿದು ಕೈಮಗ್ಗ ವಲಯದ ಪುನರುಜ್ಜೀವನಕ್ಕೆ ನೆರವಾದ; ಒಲಿಂಪಿಕ್ ಕ್ರೀಡೆಯಿಂದ ರಂಗಭೂಮಿ ವ್ಯಕ್ತಿತ್ವದವರೆಗೆ; ವಿಜ್ಞಾನ ಮತ್ತು ತಂತ್ರಜ್ಞಾನದ ಇತಿಹಾಸಕಾರರನ್ನು ಒಳಗೊಂಡ ದೇವಿ ಅವಾರ್ಡ್ಸ್, ಕರ್ನಾಟಕ ಮತ್ತು ಅದರಾಚೆಗೂ ಪ್ರಭಾವ ಬೀರಿದ ಮಹಿಳೆಯರನ್ನು ಗುರುತಿಸುತ್ತದೆ. 2015 ರ ನಂತರ ಅಂದರೆ ಒಂಬತ್ತು ವರ್ಷಗಳ ನಂತರ ದೇವಿ ಅವಾರ್ಡ್ಸ್ ಬೆಂಗಳೂರಿನಲ್ಲಿ ಮತ್ತೆ ನಡೆಯುತ್ತಿದೆ. 2014 ರಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಸ್ಥಾಪಿಸಿದ ದೇವಿ ಅವಾರ್ಡ್ಸ್, ವೃತ್ತಿಪರ ಮಹಿಳೆಯರನ್ನು ಗುರುತಿಸಲು ಮತ್ತು ಗೌರವಿಸುವ ಧ್ಯೇಯವನ್ನು ಹೊಂದಿದೆ.
ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಜೈದ್ ಖಾನ್ ಅಭಿನಯದ 'ಕಲ್ಟ್' ಚಿತ್ರ ವಿವಾದಕ್ಕೆ ಸಿಲುಕಿದೆ. ಚಿತ್ರ ತಂಡದವರು ಮಾಡಿದ ತಪ್ಪಿಗೆ ಡ್ರೋನ್ ಟೆಕ್ನಿಷಿಯನ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ನಟ ಜೈದ್ ಖಾನ್ ಸೇರಿದಂತೆ ಚಿತ್ರತಂಡದ ವಿರುದ್ಧ ದೂರು ದಾಖಲಾಗಿದೆ. ಮೂಲಗಳ ಪ್ರಕಾರ ಸಿನಿಮಾದಲ್ಲಿ ಸಂತೋಷ್ ಎಂಬುವವರು ಡ್ರೋನ್ ಉಸ್ತುವಾರಿ ವಹಿಸಿಕೊಂಡಿದ್ದರು. ನ.25ರಂದು ಚಿತ್ರದುರ್ಗದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಒಂದು ದಿನಕ್ಕೆ 25 ಸಾವಿರ ರೂಪಾಯಿ ನಿಗದಿ ಮಾಡಿ ಅವರು ಶೂಟ್ ಮಾಡುತ್ತಿದ್ದರು. ಶೂಟಿಂಗ್ ವೇಳೆ ವಿಂಡ್ ಫ್ಯಾನ್ಗೆ ಟಚ್ ಆಗಿ ಡ್ರೋನ್ ಹಾಳಾಗಿತ್ತು. ಇದಾದ ಬಳಿಕ ಸಂತೋಷ್ಗೆ ಚಿತ್ರತಂಡ ಕೊಂಚವೂ ನಷ್ಟ ತುಂಬಿ ಕೊಟ್ಟಿರಲಿಲ್ಲ. ಈ ಬಗ್ಗೆ ಅವರು ಚಿತ್ರ ತಂಡದ ಬಳಿ ಕೇಳಿಕೊಂಡಿದ್ದರು. ಈ ವೇಳೆ ನಷ್ಟ ಪರಿಹಾರ ಮಾಡದೆ ಒಂದೂವರೆ ಲಕ್ಷ ರೂಪಾಯಿ ಬೆಲೆಯ ಮೆಮೊರಿ ಕಾರ್ಡ್ ಕಿತ್ತುಕೊಂಡಿರುವ ಆರೋಪವನ್ನು ಸಂತೋಷ್ ಮಾಡಿದ್ದಾರೆ. ಇದರಿಂದ ಮನನೊಂದು ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಸದ್ಯ ಮಾಗಡಿ ರೋಡ್ ಠಾಣೆಗೆ ಸಂತೋಷ್ ಸಹೋದರಿ ದೂರು ನೀಡಿದ್ದಾರೆ. ಮಂಗಳವಾರ (ಡಿಸೆಂಬರ್ 3) ವಿಚಾರಣೆಗೆ ಬರುವಂತೆ ಚಿತ್ರತಂಡಕ್ಕೆ ಪೊಲೀಸರು ಸೂಚನೆ ನೀಡಿದ್ದು, ವಿಚಾರಣೆಯ ಬಳಿಕ ಪೊಲೀಸರು ಮುಂದಿನ ಕ್ರಮದ ಬಗ್ಗೆ ನಿರ್ಧಾರ ಮಾಡಲಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಿಂದುತ್ವದ ಮುಖವಾಡ ಧರಿಸಿದ್ದಾರೆ. ಅವರ ಹರಕು ಬಾಯಿಯಿಂದ ಬಿಜೆಪಿಗೆ ಚುನಾವಣೆಯಲ್ಲಿ ಸೋಲಾಯಿತು. ಉಪ ಚುನಾವಣೆ ಸೋಲಿಗೆ ಅವರೇ ಕಾರಣ. ವಿಜಯಪುರದ ಪ್ರಭಾವಿ ಸಚಿವರ ಜೊತೆಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಆರೋಪಿಸಿದ್ದಾರೆ. ಮೈಸೂರಿನಲ್ಲಿಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣದಿಂದ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್‌ನಿಂದ ಸುಪಾರಿ ಪಡೆದು ಬಿಜೆಪಿ ವಿರುದ್ಧವೇ ಹೋರಾಟ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಯತ್ನಾಳ ವಿರುದ್ಧ ಮಾತನಾಡಿದ್ದಕ್ಕೆ ನಿನ್ನೆಯಿಂದ ಬೆದರಿಕೆಗಳು ಬರುತ್ತಿವೆ. ಆದರೆ ನಾನು ಯಾವುದಕ್ಕೂ ಹೆದರುವುದಿಲ್ಲ' ಎಂದರು.
ಕರ್ನಾಟಕ ಕಾಂಗ್ರೆಸ್ ನಾಯಕ ಬಿ ಗುರಪ್ಪ ನಾಯ್ಡು ಅವರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಮಹಿಳೆಯೊಬ್ಬರ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಅವಧಿಗೆ ಶನಿವಾರ ಉಚ್ಚಾಟಿಸಲಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ), ಶಿಸ್ತು ಕ್ರಮ ಸಮಿತಿ ಅಧ್ಯಕ್ಷ ಕೆ ರೆಹಮಾನ್ ಖಾನ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಈ ವಿಷಯ ತಿಳಿಸಿದ್ದಾರೆ. ಗುರಪ್ಪ ನಾಯ್ಡು ಅಧ್ಯಕ್ಷರಾಗಿರುವ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ 38 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ನವೆಂಬರ್ 26 ರಂದು ಎಫ್ಐಆರ್ ದಾಖಲಿಸಲಾಗಿದೆ.
Advertisement