
ಬೆಂಗಳೂರು: ಅಕ್ಟೋಬರ್ 4 ರಿಂದ ಎಲ್ಲಾ ಇಂಜಿನಿಯರ್‌ಗಳು ಮತ್ತು ಉನ್ನತ ಅಧಿಕಾರಿಗಳು ಪ್ರತಿದಿನ ತಾವು ಮಾಡಿದ ಕೆಲಸದ ವಿವರಗಳನ್ನು ತಮಗೆ ರಿಪೋರ್ಟ್ ಎಂದು ಬಿಡಿಎ ಆಯುಕ್ತ ಎನ್ ಜಯರಾಮ್ ಆದೇಶಿಸಿದ್ದಾರೆ.
ಕಚೇರಿಯಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಸದೆ ಸದಾ ವಿಶ್ರಾಂತಿ ಮೋಡ್ ನಲ್ಲಿದ್ದು ಕಾಲ ಕಳೆಯುವ ಸಿಬ್ಬಂದಿಗೆ ಚುರುಕು ಮುಟ್ಟಿಸಲು ಮುಂದಾಗಿರುವ ಆಯುಕ್ತರು ದೈನಂದಿನ ವರದಿಯನ್ನು ತಮ್ಮ ಕೈಬರಹದಲ್ಲಿ ಕಚೇರಿಗೆ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ. ಗುರುವಾರ ಸಭೆ ನಡೆಸಿದ ಆಯುಕ್ತರು, ಪ್ರತಿಯೊಬ್ಬ ಅಧಿಕಾರಿಯ ಕಾರ್ಯನಿರ್ವಹಣೆಯ ಮೇಲೆ ಕಟ್ಟುನಿಟ್ಟಿನ ನಿಗಾ ಇಡಾಲಾಗುವುದು ಎಂದು ತಿಳಿಸಿದ್ದಾರೆ. ನಿರ್ದಿಷ್ಟವಾಗಿ ಎಂಜಿನಿಯರ್‌ಗಳ ಮೇಲೆ ವಿಶೇಷ ಗಮನ ಇಡಲಾಗುತ್ತಿದೆ ಎಂದು ಗೌಪ್ಯ ಮೂಲವೊಂದು ತಿಳಿಸಿದೆ.
ಸಿಬ್ಬಂದಿಯಲ್ಲಿ ಕೆಲರು ತಾವು ಕೆಲವು ತಪಾಸಣೆಯಲ್ಲಿದ್ದೇವೆ ಅಥವಾ ಅತಿಕ್ರಮಣಗಳನ್ನು ಗುರುತಿಸುವಲ್ಲಿ ಅಥವಾ ತೆರವುಗೊಳಿಸುವಲ್ಲಿ ತೊಡಗಿಸಿಕೊಂಡಿದ್ದೇವೆ, ಕೆಲಸದಿಂದ ವಿರಾಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿಕೊಳ್ಳುತ್ತಾರೆ. ಅಂತಹ ಜನರನ್ನು ನಿಯಂತ್ರಿಸುವುದು ಮತ್ತು ಕೆಲಸದ ಸಮಯದಲ್ಲಿ ಅವರನ್ನು ಹೊಣೆಗಾರರನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ. ಇಂಜಿನಿಯರ್‌ಗಳು, ಭೂಸ್ವಾಧೀನ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಮತ್ತು ಪ್ರಾಧಿಕಾರದ ವಿಶೇಷ ಕಾರ್ಯಪಡೆ (STF) 100 ಸಿಬ್ಬಂದಿಗೆ ಅನ್ವಯಿಸುತ್ತದೆ. ಇದುವರೆಗೆ ಕರ್ತವ್ಯದ ಬಗ್ಗೆ ಮಾಸಿಕ ವರದಿಯನ್ನು ಮಾತ್ರ ರವಾನಿಸಲಾಗುತ್ತಿದೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು. "ನಾವು ದೈನಂದಿನ ವರದಿಯನ್ನು ಸಲ್ಲಿಸುವಂತೆ ಮಾಡುವುದರಿಂದ ಪ್ರತಿಯೊಬ್ಬರು ತಾವು ಮಾಡುತ್ತಿರುವ ಕೆಲಸಕ್ಕೆ ನ್ಯಾಯ ಒದಗಿಸಲು ಸಹಾಯ ಮಾಡುವಂತೆ ಮಾಡುತ್ತದೆ" ಎಂದು ಅವರು ಹೇಳಿದರು. ಜನರು ಭೇಟಿಯಾಗಲು ಬಂದರೆ ಸಿಬ್ಬಂದಿ ಲಭ್ಯ ವಿರುವುದಿಲ್ಲ. ಇದರಿಂದ ಗಂಟೆಗಟ್ಟಲೆ ಕಾಯುವಂತಾಗುತ್ತಿದೆ ಎಂಬುದು ಅರಮನೆ ರಸ್ತೆಯಲ್ಲಿರುವ ಗುಟಹಳ್ಳಿಯ ಬಿಡಿಎ ಕೇಂದ್ರ ಕಚೇರಿಯಲ್ಲಿ ಕೇಳಿ ಬರುವ ಸಾಮಾನ್ಯ ದೂರಾಗಿದೆ.
Advertisement