ಬೆಂಗಳೂರಿನಲ್ಲಿ 13 ವರ್ಷದ ಬಾಲಕಿ ಹತ್ಯೆ ಮಾಡಿದ್ದು ಯಾರು?: ಸಾವಿಗೆ ಕಾರಣ ಇನ್ನೂ ನಿಗೂಢ!

ಬಾಲಕಿಯ ಅನುಮಾನಾಸ್ಪದ ಸಾವು ಸಂಭವಿಸಿ ನಾಲ್ಕು ತಿಂಗಳು ಕಳೆದರೂ, ಪೊಲೀಸರು ಇನ್ನೂ ಪ್ರಕರಣವನ್ನು ಭೇದಿಸಿಲ್ಲ.
ಬೆಂಗಳೂರಿನಲ್ಲಿ 13 ವರ್ಷದ ಬಾಲಕಿ ಹತ್ಯೆ ಮಾಡಿದ್ದು ಯಾರು?: ಸಾವಿಗೆ ಕಾರಣ ಇನ್ನೂ ನಿಗೂಢ!
Updated on

ಬೆಂಗಳೂರು: ಬೆಂಗಳೂರಿನ ಜಯನಗರದಲ್ಲಿ 13 ವರ್ಷದ ಶಾಲಾ ಬಾಲಕಿಯ ಸಾವಿನ ಪ್ರಕರಣ ನಿಗೂಢವಾಗಿದ್ದು, ಶವಪರೀಕ್ಷೆಯಲ್ಲಿ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ.

ಕಳೆದ ಮೂರು ತಿಂಗಳ ಹಿಂದೆ ಪ್ರಕರಣ ದಾಖಲಾಗಿದ್ದು ಪೊಲೀಸರು ಇನ್ನೂ ಬೇಧಿಸಿಲ್ಲ.

ನಡೆದ ಘಟನೆಯೇನು?: ಜಯನಗರ 4 'ಟಿ' ಬ್ಲಾಕ್‌ನ 16ನೇ ಮುಖ್ಯರಸ್ತೆಯ ಉಷಾಸ್ ಅಪಾರ್ಟ್‌ಮೆಂಟ್‌ನ ನಿವಾಸಿ ಬಾಲಕಿ ಗಾರ್ಗಿ ಮುರುಳೀಧರ್ ಶವ ಮೇ 23ರಂದು ಅಪಾರ್ಟ್ ಮೆಂಟ್ ನ ಕೋಣೆಯಲ್ಲಿ ಪತ್ತೆಯಾಗಿತ್ತು. ಬೆಳಗ್ಗೆ ಮಗಳನ್ನು ಎಬ್ಬಿಸಲು ತಾಯಿ ಶೃತಿ ದೇಶಪಾಂಡೆ ಹೋಗಿದ್ದಾಗ ಮಗಳು ಪ್ರಜ್ಞೆತಪ್ಪಿ ಬಿದ್ದವಳಂತೆ ಕಂಡು ಆಘಾತಕ್ಕೊಳಗಾದರು. ಗಾರ್ಗಿ ಮಲಗಿದ್ದ ಹಾಸಿಗೆ ಒದ್ದೆಯಾಗಿದ್ದು, ಸಾಯುವ ಸಮಯದಲ್ಲಿ ಮೂತ್ರ ವಿಸರ್ಜಿಸಿದ್ದಳು ಎಂದು ಗೊತ್ತಾಗಿತ್ತು.

ಶೃತಿಯ ಕಿರುಚಾಟವನ್ನು ಕೇಳಿದ ಗಾರ್ಗಿಯ ತಂದೆ ಮುರುಳೀಧರ್ ಅದೇ ಅಪಾರ್ಟ್ಮೆಂಟ್ನಲ್ಲಿ ವಾಸಿಸುವ ಇಬ್ಬರು ವೈದ್ಯರ ಸಹಾಯವನ್ನು ಕೇಳಿದರು. ಗಾರ್ಗಿಯನ್ನು ಪರೀಕ್ಷಿಸಿದ ವೈದ್ಯರು ಆಸ್ಪತ್ರೆಗೆ ದಾಖಲಿಸುವಂತೆ ಹೇಳಿದರು. ನಂತರ ದಂಪತಿ ಗಾರ್ಗಿಯನ್ನು ಜಯನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಮೃತಪಟ್ಟಿದ್ದಾಳೆಂದು ಘೋಷಿಸಲಾಯಿತು.

ಮಗಳ ಸಾವಿನಲ್ಲಿ ದುಷ್ಕೃತ್ಯದ ಶಂಕೆ ವ್ಯಕ್ತಪಡಿಸಿದ ಮುರುಳೀಧರ್ ಅವರು ತಿಲಕ್ ನಗರ ಪೊಲೀಸರಿಗೆ ದೂರು ನೀಡಿದ್ದರು. ಅಸ್ವಾಭಾವಿಕ ಸಾವಿನ ವರದಿಯನ್ನು ದಾಖಲಿಸಿಕೊಂಡ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದರು.

ಉಸಿರುಕಟ್ಟುವಿಕೆಯಿಂದ ಸಾವು: ವಿಧಿವಿಜ್ಞಾನ ವರದಿ

ಜುಲೈ 18 ರಂದು, ಆಸ್ಪತ್ರೆಯ ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥರು ಉಸಿರುಗಟ್ಟುವಿಕೆಯಿಂದ ಸಾವು ಸಂಭವಿಸಿದೆ ಎಂದು ತಿಳಿಯಿತು ಎಂದು ಹೇಳಿದ್ದಾರೆ.

ವರದಿಯ ಆಧಾರದ ಮೇಲೆ ಪೊಲೀಸರು ಜುಲೈ 18 ರಂದು ಕೊಲೆ ಪ್ರಕರಣವನ್ನು ದಾಖಲಿಸಿದ್ದರು. ಬಾಲಕಿಯ ಅನುಮಾನಾಸ್ಪದ ಸಾವು ಸಂಭವಿಸಿ ನಾಲ್ಕು ತಿಂಗಳು ಕಳೆದರೂ, ಪೊಲೀಸರು ಇನ್ನೂ ಪ್ರಕರಣವನ್ನು ಭೇದಿಸಿಲ್ಲ. ಆದಾಗ್ಯೂ, ಆರೋಪಿಯು ಸಂತ್ರಸ್ತೆಗೆ ತಿಳಿದಿದ್ದಿರಬಹುದು ಎಂದು ಶಂಕಿಸಿದ್ದಾರೆ.

ಗಾರ್ಗಿಯ ತಂದೆ ಖಾಸಗಿ ಕಂಪನಿಯಲ್ಲಿ ಡೆಲಿವರಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಾರೆ. ತಾಯಿ ಶಿಕ್ಷಕಿ. ಗಾರ್ಗಿಗೆ ಬೇಸಿಗೆ ರಜೆ ಇತ್ತು. ಮೇ 22 ರಂದು ಅಶೋಕ್ ನಗರದಲ್ಲಿರುವ ತನ್ನ ಅಜ್ಜಿ ಮನೆಗೆ ಹೋಗಿದ್ದಳು.

ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ?

ಶೃತಿ ತಮ್ಮ ಕೆಲಸ ಮುಗಿಸಿ ಮಗಳನ್ನು ಮನೆಗೆ ಕರೆತಂದಿದ್ದರು. ಗಾರ್ಗಿಯ ತಾಯಿ ಮತ್ತು ಆಕೆಯ ಚಿಕ್ಕಮ್ಮ ಅವಳನ್ನು ಬನಶಂಕರಿಯಲ್ಲಿರುವ ಬಿಡಿಎ ಕಾಂಪ್ಲೆಕ್ಸ್‌ಗೆ ಸಂಜೆ ಕರೆದೊಯ್ದಿದ್ದರು. ಮನೆಗೆ ಹಿಂದಿರುಗಿದ ನಂತರ, ಗಾರ್ಗಿ ರಾತ್ರಿ 10.30 ರ ಸುಮಾರಿಗೆ ಮಲಗಲು ಹೋಗಿದ್ದಳು. ರಾತ್ರಿ ಕಚೇರಿಯಿಂದ ಮನೆಗೆ ಮರಳಿದ ಮುರುಳೀಧರ್ ಮೇ 23ರ ಮಧ್ಯರಾತ್ರಿ 1.30ರ ಸುಮಾರಿಗೆ ಮಲಗಿದ್ದರು.

ಬೆಳಗ್ಗೆ 6.15ರ ಸುಮಾರಿಗೆ ಮಗಳನ್ನು ಎಬ್ಬಿಸಲು ತಾಯಿ ಶೃತಿ ಪ್ರಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದುದರಿಂದ ಮಗಳು ಮಲಗಿರಬೇಕು ಎಂದುಕೊಂಡಿದ್ದರು. ಬೆಳಿಗ್ಗೆ 7 ಗಂಟೆಗೆ ಆಕೆಯ ತಾಯಿ ಮತ್ತೆ ಎಬ್ಬಿಸಲು ಪ್ರಯತ್ನಿಸಿದಾಗ ಗಾರ್ಗಿ ಪ್ರತಿಕ್ರಿಯಿಸಲಿಲ್ಲ.

ಪ್ರಕರಣವನ್ನು ನ್ಯಾಯವ್ಯಾಪ್ತಿಯ ಸಹಾಯಕ ಪೊಲೀಸ್ ಆಯುಕ್ತರಿಗೆ (ACP) ಹಸ್ತಾಂತರಿಸಲಾಗಿದೆ. ಬಾಲಕಿಯನ್ನು ಉಸಿರುಗಟ್ಟಿಸಿ ಸಾಯಿಸಲು ದಿಂಬು ಬಳಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com