
ಮೈಸೂರು: ಮೈಸೂರಿನಲ್ಲಿ ನವರಾತ್ರಿ, ದಸರಾ ಆಚರಣೆ ಎಲ್ಲರನ್ನೂ ಆಕರ್ಷಿಸುತ್ತಿದೆ. ದಸರಾ ಜಂಬೂಸವಾರಿಗೆ ಆಗಮಿಸಿರುವ ಆನೆಗಳು ತಾಲೀಮಿನಲ್ಲಿ ನಿರತವಾಗಿದ್ದು, ಅವುಗಳಿಗೆ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ.
ಆನೆಗಳ ತೂಕ ಪರೀಕ್ಷಿಸಲಾಗಿದ್ದು, ಈ ಪೈಕಿ ಅಂಬಾರಿ ಹೊರುವ ಆನೆ ಅಭಿಮನ್ಯು ತೂಕ 5560 ಕೆಜಿ ಯಿಂದ 5820ಗೆ ಏರಿಕೆಯಾಗಿದೆ. ಒಂದೂವರೆ ತಿಂಗಳ ಅಂತರದಲ್ಲಿ 260 ಕೆಜಿ ತೂಕ ಹೆಚ್ಚಿಸಿಕೊಂಡಿರುವ ಅಭಿಮನ್ಯು ಬಲಶಾಲಿಯಾಗಿದ್ದಾನೆ.
ದಸರಾ ಆನೆಗಳು ಮೈಸೂರಿಗೆ ಬಂದಾಗಿನಿಂದ ಇದು ಮೂರನೇ ಬಾರಿಯ ತೂಕ ಪರೀಕ್ಷೆಯಾಗಿದ್ದು 14 ಆನೆಗಳು ಭಾಗಿಯಾಗಿದ್ದವು.
ಆನೆಗಳ ತೂಕದ ವಿವರ ಹೀಗಿದೆ..
ಅಭಿಮನ್ಯು: 5820 ಕೆಜಿ ತೂಕ
ಸುಗ್ರೀವ : 5540 ಕೆಜಿ
ಭೀಮ : 5380 ಕೆಜಿ
ಗೋಪಿ : 5280 ಕೆಜಿ
ಧನಂಜಯ : 5255 ಕೆಜಿ
ಪ್ರಶಾಂತ : 5240 ಕೆಜಿ
ಮಹೇಂದ್ರ : 5150 ಕೆಜಿ
ಏಕಲವ್ಯ : 5095 ಕೆಜಿ
ಕಂಜನ್ : 4725 ಕೆಜಿ
ರೋಹಿತ : 3930 ಕೆಜಿ
ಹಿರಣ್ಯ. : 3160 ಕೆಜಿ
ದೊಡ್ಡ ಹರವೆ ಲಕ್ಷ್ಮಿ : 3570 ಕೆಜಿ
ವರಲಕ್ಷ್ಮಿ : 3555 ಕೆಜಿ
ಲಕ್ಷ್ಮಿ : 2625 ಕೆಜಿ
Advertisement