
ಗದಗ: ನಟ ದರ್ಶನ್ ಜನ್ಮದಿನಾಚರಣೆ ಸಂದರ್ಭದಲ್ಲಿ ಅವರ ಅಭಿಮಾನಿಗಳು ಸಿಡಿಸಿದ ಪಟಾಕಿ ಸದ್ದಿನಿಂದ ನನ್ನ ಶ್ರವಣಶಕ್ತಿ ಹೋಯಿತು ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ನೊಂದು ನುಡಿದಿದ್ದಾರೆ.
ಸೋಮವಾರ ನಡೆದ ಸಿದ್ಧಲಿಂಗ ಶ್ರೀಗಳ ಆರನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ‘ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ನಮ್ಮ ಮನೆಯ ಪಕ್ಕದಲ್ಲಿ ನಟ ದರ್ಶನ್ ಅವರ ಮನೆ ಇದೆ’ ಎಂದರು. ದರ್ಶನ್ ಜನ್ಮದಿನಾಚರಣೆ ಸಂದರ್ಭದಲ್ಲಿ ಅವರ ಮನೆ ಎದುರು ಸಾವಿರಾರು ಅಭಿಮಾನಿಗಳು ಸೇರಿ, ಸಿಡಿಮದ್ದು ಸಿಡಿಸಿದರು. ಅದರ ಸದ್ದಿನಿಂದ ನನ್ನ ಶ್ರವಣಶಕ್ತಿ ಹೋಯಿತು ಎಂದರು.
97ರ ವಯಸ್ಸಿನಲ್ಲೂ ಸ್ಪಷ್ಟವಾಗಿ ಮಾತನಾಡುತ್ತೇನೆ, ಯಾವುದೇ ತೊಂದರೆ ಇಲ್ಲದೆ ನಡೆದಾಡುತ್ತೇನೆ. ಆದರೆ, ಇಂದಿನ ಕಾರ್ಯಕ್ರಮದಲ್ಲಿ ತಾವೆಲ್ಲರೂ ಮಾತನಾಡುವ ಪದಗಳನ್ನು ಕೇಳಿಸಿಕೊಳ್ಳಲಾಗದಷ್ಟು ಶ್ರವಣದೋಷವನ್ನು ಅನುಭವಿಸುತ್ತಿದ್ದೇನೆ ಎಂದರು.
Advertisement