ಕೊಡಗು: ಹಸು ಹುಡುಕುತ್ತಾ ಕಾಡಿಗೆ ಹೋಗಿದ್ದಾಗ ಕಾಡಾನೆ ದಾಳಿ, ವ್ಯಕ್ತಿ ಬಲಿ!

ಕಾಣೆಯಾದ ಹಸುವನ್ನು ಹುಡುಕುತ್ತಾ ಚರಣ್ ಮತ್ತು ರಂಜು ಎಂಬುವರ ಜೊತೆ ತರುಣೇಶ್ ಕಾಡಿಗೆ ಹೋಗಿದ್ದರು. ಈ ವೇಳೆ ಕಾಡಾನೆಯೊಂದು ಎದುರಾಗಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರTNIE
Updated on

ಮಡಿಕೇರಿ: ಕೊಡಗಿನ ಭಾಗಮಂಡಲ ಬಳಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಭಾಗಮಂಡಲ ಸಮೀಪದ ಚೇರಂಗಾಲ ಗ್ರಾಮದ 38 ವರ್ಷದ ತರುಣೇಶ್ ಕಾಡಾನೆ ದಾಳಿಗೆ ಬಲಿಯಾದ ವ್ಯಕ್ತಿ. ಕಾಣೆಯಾದ ಹಸುವನ್ನು ಹುಡುಕುತ್ತಾ ಚರಣ್ ಮತ್ತು ರಂಜು ಎಂಬುವರ ಜೊತೆ ತರುಣೇಶ್ ಕಾಡಿಗೆ ಹೋಗಿದ್ದರು. ಈ ವೇಳೆ ಕಾಡಾನೆಯೊಂದು ಎದುರಾಗಿತ್ತು. ಆಗ ಚರಣ್ ಮತ್ತು ರಂಜು ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡಿದ್ದರೆ, ತರುಣೇಶ್ ಮೇಲೆ ಕಾಡಾನೆ ದಾಳಿ ಮಾಡಿ ತುಳಿದು ಸಾಯಿಸಿದೆ. ತರುಣೇಶ್ ಗೆ ಇಬ್ಬರು ಮಕ್ಕಳಿದ್ದರು. ಘಟನೆ ಕುರಿತು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪತ್ನಿ ನಯನಾ ದೂರು ದಾಖಲಿಸಿದ್ದಾರೆ. ಸಾರ್ವಜನಿಕ ನಿಷೇಧಿತ ಪ್ರದೇಶವಾಗಿರುವ ತಲಕಾವೇರಿ ವನ್ಯಜೀವಿಧಾಮದಲ್ಲಿ ಘಟನೆ ನಡೆದಿರುವುದರಿಂದ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಮಡಿಕೇರಿ ವನ್ಯಜೀವಿ ಡಿಸಿಎಫ್ ನೆಹರು ತಿಳಿಸಿದ್ದಾರೆ.

ಸಂಗ್ರಹ ಚಿತ್ರ
Video: ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಢಿಕ್ಕಿ; ನರಳಿ, ನರಳಿ ಹಳಿ ಮೇಲೆಯೇ ಪ್ರಾಣ ಬಿಟ್ಟ ಕಾಡಾನೆ!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com