ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

KSMSCL ಅಧಿಕಾರಿಗಳಿಂದ ಅಕ್ರಮ?: ಅಗತ್ಯ ವೈದ್ಯಕೀಯ ವಸ್ತುಗಳು ಬೇರೆಡೆಗೆ ಪೂರೈಕೆ ಆರೋಪ

KSMSCL ನ ಹಿರಿಯ ಔಷಧಿಕಾರ ಸೇರಿದಂತೆ ಅಧಿಕಾರಿಗಳು, ನಿರ್ಣಾಯಕ ವೈದ್ಯಕೀಯ ಸರಬರಾಜುಗಳನ್ನು ತಡೆಹಿಡಿದು ಅವುಗಳನ್ನು ಗೋದಾಮಿನಲ್ಲಿ ಸಂಗ್ರಹಿಸಿ ಹೊಸ ಖರೀದಿಗೆ ಪ್ರಕ್ರಿಯೆ ಆರಂಭಿಸುತ್ತಾರೆ.
Published on

ಮೈಸೂರು: ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ (KSMSCL) ಅಧಿಕಾರಿಗಳು ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಅದರಲ್ಲೂ ವಿಶೇಷವಾಗಿ ಗ್ಲೌಸ್ ಗಳನ್ನು ಅಕ್ರಮವಾಗಿ ದಾಸ್ತಾನು ಇಟ್ಟುಕೊಂಡು ಕೊರತೆ ತೋರಿಸುತ್ತಿದ್ದು, ಇದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ವೈದ್ಯಕೀಯ ವಸ್ತುಗಳ ಪೂರೈಕೆ ಕೊರತೆಯಾಗುತ್ತಿದೆ ಎಂದು ತೋರಿಸಿ ಜನರನ್ನು ತಪ್ಪುಹಾದಿಗೆಳೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕೆಎಸ್ ಎಂಎಸ್ ಸಿಎಲ್ ನ ಹಿರಿಯ ಔಷಧಿಕಾರ ಸೇರಿದಂತೆ ಅಧಿಕಾರಿಗಳು, ನಿರ್ಣಾಯಕ ವೈದ್ಯಕೀಯ ಸರಬರಾಜುಗಳನ್ನು ತಡೆಹಿಡಿದು ಅವುಗಳನ್ನು ಗೋದಾಮಿನಲ್ಲಿ ಸಂಗ್ರಹಿಸಿ ಹೊಸ ಖರೀದಿಗೆ ಪ್ರಕ್ರಿಯೆ ಆರಂಭಿಸುತ್ತಾರೆ. ತಮ್ಮ ಏಜೆಂಟರ ಮೂಲಕ ತಡೆಹಿಡಿಯಲಾದ ದಾಸ್ತಾನುಗಳನ್ನು ವಿಲೇವಾರಿ ಮಾಡಿ ಹಣ ಮಾಡಿಕೊಳ್ಳುತ್ತಾರೆ ಎಂದು ಅಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಮೂಲಗಳಿಂದ ತಿಳಿದುಬಂದಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರತಿನಿಧಿಗಳಿಗೆ ಉನ್ನತ ಮೂಲಗಳು ಮಾಹಿತಿ ನೀಡಿ, ಅಧಿಕಾರಿಗಳು ಅಗತ್ಯ ವೈದ್ಯಕೀಯ ವಸ್ತುಗಳ ಸಂಗ್ರಹವಿಲ್ಲ ಅಥವಾ ಕಡಿಮೆ ಸಂಗ್ರಹವಿದೆ, ಕೊರತೆಯಾಗಿದೆ ಎಂದು ತೋರಿಸುತ್ತಾರೆ. ಗೋದಾಮಿಯಲ್ಲಿ ಅಕ್ರಮವಾಗಿ ದಾಸ್ತಾನಿಟ್ಟ ವಸ್ತುಗಳನ್ನು ಸರ್ಕಾರಿ ಆಸ್ಪತ್ರೆಗಳು ಸರಬರಾಜು ಕೊರತೆಯಿಂದ ಬಳಲುತ್ತಿರುವಾಗಲೂ ಈ ದಾಸ್ತಾನುಗಳನ್ನು ಗೋದಾಮಿನಲ್ಲಿ ಇರಿಸಲಾಗುತ್ತದೆ ಎಂದು ಆರೋಪಿಸುತ್ತಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಕೈಗವಸುಗಳ ಕೊರತೆಯಿದೆ ಎಂದು ನಂಬುವಂತೆ ತಪ್ಪುದಾರಿಗೆಳೆಯಲಾಗುತ್ತದೆ, ಸಾರ್ವಜನಿಕರಿಗೆ ದಣಿವರಿಯಿಲ್ಲದೆ ಸೇವೆ ಸಲ್ಲಿಸುತ್ತಿರುವ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರ ಮೇಲೆ ಇದರಿಂದ ನೇರವಾಗಿ ಪರಿಣಾಮ ಬೀರುತ್ತದೆ. ಈ ಅನೈತಿಕ ಅಭ್ಯಾಸವನ್ನು ತೊಡೆದುಹಾಕಲು ಮತ್ತು ಸರಬರಾಜುಗಳನ್ನು ಬೇರೆ ಕಡೆಗೆ ಕಳುಹಿಸಿ ಔಷಧ ದಾಸ್ತಾನು ಪಟ್ಟಿಗಳನ್ನು ನಾಜೂಕುತನದಿಂದ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಸ್ಟೇಟ್ ಮೆಡಿಕಲ್ ಸಪ್ಲೈಸ್ ಕಾರ್ಪೊರೇಷನ್ ಲಿಮಿಟೆಡ್ ದಾಖಲೆಗಳಿಗೆ ಪ್ರವೇಶವು ಮೇ ಮತ್ತು ಜೂನ್‌ ತಿಂಗಳಲ್ಲಿ 19 ಬಾಕ್ಸ್ ಶಸ್ತ್ರಚಿಕಿತ್ಸಾ ಕೈಗವಸುಗಳನ್ನು (NA 6.5) ವಿತರಣೆಗಾಗಿ ಸಂಗ್ರಹ ಪಟ್ಟಿಯಲ್ಲಿ ಬಹಿರಂಗಪಡಿಸಿದೆ, ಆದರೆ 90 ಕ್ಕೂ ಹೆಚ್ಚು ಕೈಗವಸುಗಳ ಪೆಟ್ಟಿಗೆಗಳನ್ನು ಗೋದಾಮಿನಲ್ಲಿ ಸಂಗ್ರಹಿಸಿಟ್ಟು ಮುಚ್ಚಿಡಲಾಗಿದೆ.

ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಕೆಎಸ್‌ಎಂಎಸ್‌ಸಿಎಲ್‌ ಕಚೇರಿಯಲ್ಲಿ ಗೋದಾಮಿನ ಅಧಿಕೃತ ಉಸ್ತುವಾರಿ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಲು ಟಿಎನ್‌ಐಇ ಪ್ರಯತ್ನಿಸಿದಾಗ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಎಂಡಿಗೆ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ: ಉದ್ಯೋಗಿ

ಇದು ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆಯಾಗುವ ಗ್ಲೌಸ್ ಗೆ ಮಾತ್ರ ಸಂಬಂಧಪಟ್ಟ ವಿಷಯವಲ್ಲ. ಅನೇಕ ಅಗತ್ಯ ಔಷಧಗಳು ಮತ್ತು ಇತರ ಸರಬರಾಜುಗಳನ್ನು ಸಹ ಬೇರೆ ಕಡೆಗೆ ಕಳುಹಿಸಲಾಗುತ್ತದೆ. ದಾಸ್ತಾನು ಮಟ್ಟವನ್ನು ಕುಶಲತೆಯಿಂದ ನಕಲಿ ದಾಖಲೆಗಳನ್ನು ರಚಿಸಲಾಗುತ್ತದೆ. ನಾವು ವ್ಯವಸ್ಥಾಪಕರಿಗೆ ಹಲವಾರು ಪತ್ರಗಳನ್ನು ಬರೆದಿದ್ದೇವೆ.

ಕೆಲವು ತಿಂಗಳ ಹಿಂದೆ ಈ ನಿಟ್ಟಿನಲ್ಲಿ ನಿರ್ದೇಶಕರಿಗೆ ಪತ್ರ ಬರೆದಿದ್ದೆವು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ನೌಕರರೊಬ್ಬರು ತಿಳಿಸಿದರು.

ಈ ಅಕ್ರಮಗಳ ಹೊರತಾಗಿ ಹಲವು ಅಧಿಕಾರಿಗಳು ‘ದೀರ್ಘ ರಜೆ’ ಮೇಲೆ ತೆರಳುತ್ತಾರೆ. ಅವರು ಹಿಂದಿರುಗಿದ ನಂತರ ಹಾಜರಾತಿ ರಿಜಿಸ್ಟರ್‌ಗೆ ಸಹಿ ಹಾಕುತ್ತಾರೆ. ಕೆಲವರು ನಕಲಿ ಬಿಲ್‌ಗಳನ್ನು ತಯಾರಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಗಳನ್ನು ಪೂರೈಸಲು ಇಂಧನ ವೆಚ್ಚವನ್ನು ಸಹ ಪಡೆದುಕೊಳ್ಳುತ್ತಾರೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com