ರಾಜ್ಯದಲ್ಲಿ ವಾಹನ ಸ್ಕ್ರ್ಯಾಪಿಂಗ್ ಗೆ ನೀರಸ ಪ್ರತಿಕ್ರಿಯೆ: ಇಲ್ಲಿಯವರೆಗೆ ರದ್ದಿಗೆ ಬಿದ್ದ ವಾಹನಗಳ ಸಂಖ್ಯೆ ಕೇವಲ 3 ಸಾವಿರ!

ಕರ್ನಾಟಕದ ನೋಂದಾಯಿತ ವಾಹನ ಸ್ಕ್ರ್ಯಾಪೇಜ್ ನೀತಿ 2022 ರ ಪ್ರಕಾರ, 15 ವರ್ಷ ಹಳೆಯದಾದ ಎಲ್ಲಾ ಸರ್ಕಾರಿ ವಾಹನಗಳು ಮತ್ತು 15 ವರ್ಷಗಳನ್ನು ಪೂರೈಸಿದ ಮತ್ತು ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಖಾಸಗಿ ವಾಹನಗಳನ್ನು ಸ್ಕ್ರಾಪ್ ಗೆ ಹಾಕಬೇಕಾಗುತ್ತದೆ.
Representational image
ರದ್ದಿಗೆ ಬಿದ್ದ ವಾಹನಗಳು
Updated on

ಬೆಂಗಳೂರು: ರಾಜ್ಯದಲ್ಲಿ ಎರಡು ನೋಂದಾಯಿತ ವಾಹನ ಸ್ಕ್ರಾಪಿಂಗ್ ಸೌಲಭ್ಯಗಳು (RVSF) ಕಾರ್ಯಾರಂಭ ಮಾಡಿ ಸುಮಾರು ಒಂದು ವರ್ಷವಾಗಿದೆ. ಆದಾಗ್ಯೂ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ RVSF ಡ್ಯಾಶ್‌ಬೋರ್ಡ್‌ನ ಮಾಹಿತಿಯ ಪ್ರಕಾರ, ಈ ಸೌಲಭ್ಯಗಳು ರಾಜ್ಯ ಸಾರಿಗೆ ಇಲಾಖೆಯಿಂದ ಸರಿಯಾಗಿ ಕಾರ್ಯಾಚರಣೆ ಆರಂಭಿಸಿಲ್ಲ. ಕೇವಲ 3 ಸಾವಿರ ವಾಹನಗಳು (ಸರ್ಕಾರಿ ಮತ್ತು ಖಾಸಗಿ ಎರಡೂ) ಇಲ್ಲಿಯವರೆಗೆ ರದ್ದಿಗೆ ಹಾಕಲಾಗಿದೆ.

ಅನೇಕ ಖಾಸಗಿ ವಾಹನ ಬಳಕೆದಾರರು 15 ವರ್ಷ ಮೇಲ್ಪಟ್ಟ ತಮ್ಮ ಹಳೆಯ ವಾಹನಗಳನ್ನು ಬಳಸುವುದನ್ನು ಮುಂದುವರಿಸಲು ಬಯಸುತ್ತಾರೆ. ಕರ್ನಾಟಕದ ನೋಂದಾಯಿತ ವಾಹನ ಸ್ಕ್ರ್ಯಾಪೇಜ್ ನೀತಿ 2022 ರ ಪ್ರಕಾರ, 15 ವರ್ಷ ಹಳೆಯದಾದ ಎಲ್ಲಾ ಸರ್ಕಾರಿ ವಾಹನಗಳು ಮತ್ತು 15 ವರ್ಷಗಳನ್ನು ಪೂರೈಸಿದ ಮತ್ತು ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಖಾಸಗಿ ವಾಹನಗಳನ್ನು ಸ್ಕ್ರಾಪ್ ಗೆ ಹಾಕಬೇಕಾಗುತ್ತದೆ.

ಪ್ರತಿ ವರ್ಷ ತಮ್ಮ ಫಿಟ್‌ನೆಸ್ ಪ್ರಮಾಣಪತ್ರಗಳನ್ನು ನವೀಕರಿಸಬೇಕಾದ ಕಮರ್ಷಿಯಲ್ ವಾಹನಗಳು ಪರೀಕ್ಷೆಯಲ್ಲಿ ವಿಫಲವಾದರೆ ಸ್ಕ್ರ್ಯಾಪಿಂಗ್‌ಗೆ ಒಳಪಡುತ್ತವೆ. ಆರ್ ವಿಎಸ್ ಎಫ್ ಸೌಲಭ್ಯಗಳನ್ನು ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ವೈಜ್ಞಾನಿಕವಾಗಿ ಸ್ಕ್ರಾಪಿಂಗ್ ನಡೆಸಲು ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಸ್ಕ್ರ್ಯಾಪ್ ಮಾಡಿದ ವಸ್ತುಗಳನ್ನು ಮರುಬಳಕೆ ಮಾಡಲಾಗುತ್ತದೆ.

ಹೆಚ್ಚುವರಿ ಸಾರಿಗೆ ಆಯುಕ್ತ (ಜಾರಿ) ಸಿ ಮಲ್ಲಿಕಾರ್ಜುನ, ರಾಜ್ಯ ಸಾರಿಗೆ ಇಲಾಖೆಯಲ್ಲಿ ಲಭ್ಯವಿರುವ ಅಂಕಿಅಂಶಗಳ ಪ್ರಕಾರ ಇದುವರೆಗೆ ಸುಮಾರು 10,000 ಸರ್ಕಾರಿ ಮತ್ತು ಖಾಸಗಿ ವಾಹನಗಳನ್ನು ಸ್ಕ್ರ್ಯಾಪ್ ಮಾಡಲಾಗಿದೆ. ಆದಾಗ್ಯೂ, ಸಂಖ್ಯೆಗಳು MRTH RVSF ಡ್ಯಾಶ್‌ಬೋರ್ಡ್‌ನಲ್ಲಿ ತೋರಿಸಲು ಸಮಯ ಹಿಡಿಯುತ್ತದೆ. 15 ವರ್ಷ ಪೂರೈಸಿದ ಸರ್ಕಾರಿ ವಾಹನಗಳನ್ನು ರದ್ದುಗೊಳಿಸುವುದು ಕಡ್ಡಾಯವಾಗಿದ್ದು, ಖಾಸಗಿ ವಾಹನ ಮಾಲೀಕರು ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ತಮ್ಮ ವಾಹನಗಳನ್ನು ಇಟ್ಟುಕೊಳ್ಳಲು ಅವಕಾಶವಿದೆ ಎಂದು ಅವರು ಒತ್ತಿ ಹೇಳಿದರು.

ಖಾಸಗಿ ವಾಹನಗಳು ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸ್ ಆಗುವವರೆಗೆ ಹಳೆಯ ವಾಹನಗಳನ್ನು ಓಡಿಸಬೇಡಿ ಎಂದು ನಾವು ಅವರನ್ನು ಒತ್ತಾಯಿಸಲು ಸಾಧ್ಯವಿಲ್ಲ. ಹಳೆಯ ವಾಹನಗಳನ್ನು ರದ್ದುಗೊಳಿಸಿದರೆ, ಅವು ಠೇವಣಿ ಪ್ರಮಾಣಪತ್ರವನ್ನು ಪಡೆಯುತ್ತವೆ, ಅದು ಮೋಟಾರು ವಾಹನ ತೆರಿಗೆಯಲ್ಲಿ ರಿಯಾಯಿತಿ ನೀಡುತ್ತದೆ ಎಂದು ಮಲ್ಲಿಕಾರ್ಜುನ ಹೇಳಿದರು.

Representational image
ಕರ್ನಾಟಕದ ಮೊದಲ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯ ಕೇಂದ್ರ ದೇವನಹಳ್ಳಿಯಲ್ಲಿ ಆರಂಭ: 15 ವರ್ಷಕ್ಕಿಂತ ಹಳೆಯ ವಾಹನಗಳು ರದ್ದಿಗೆ

ಇದೇ ವೇಳೆ ಜನರಿಗೆ ವಾಹನ ಸ್ಕ್ರಾಪಿಂಗ್ ನೀತಿಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ ಪರಿಸರ ಮಾಲಿನ್ಯವಾಗದಂತೆ ವಾಹನಗಳನ್ನು ಸ್ಕ್ರಾಪ್ ಮಾಡಲು ಮುಂದಾಗಬೇಕು ಎಂದರು. ಹಳೆಯ ವಾಹನವನ್ನು ಹೇಗೆ ವೈಜ್ಞಾನಿಕವಾಗಿ ಸ್ಕ್ರಾಪ್ ಮಾಡಲಾಗಿದೆ ಮತ್ತು ಮಾಲಿನ್ಯವನ್ನು ತಡೆಯಲು ಇದು ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ವಿಡಿಯೊಗಳನ್ನು ಪ್ರದರ್ಶಿಸುವ ಮೂಲಕ ರಾಜ್ಯ ಸಾರಿಗೆ ಇಲಾಖೆ ಸಾಮೂಹಿಕ ಅಭಿಯಾನವನ್ನು ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.

ಹಳೆಯ ವಾಹನಗಳನ್ನು ಸ್ಕ್ರಾಪ್ ಮಾಡಲು ಜನರನ್ನು ಉತ್ತೇಜಿಸಲು ಇಲಾಖೆ ಪ್ರಯತ್ನ ಹೆಚ್ಚಿಸುತ್ತದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com