ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ: 'ಕೈ' ಶಾಸಕ ಸತೀಶ್ ಸೈಲ್ ಗೆ 7 ವರ್ಷ ಕಠಿಣ ಜೈಲು ಶಿಕ್ಷೆ; ಒಟ್ಟಾರೆ 44 ಕೋಟಿ ರೂ. ದಂಡ!

ಎರಡು ಬಾರಿ ಎಂಎಲ್ಎ ಆಗಿರುವ ಸೈಲ್ ಶಿಕ್ಷೆಗೆ ಗುರಿಯಾಗಿರುವುದರಿಂದ ವಿಧಾನಸಭೆ ಸದಸ್ಯತ್ವ ಕಳೆದುಕೊಳ್ಳುವ ಭೀತಿ ಇದೆ.
Satish Krishna Sail
ಸತೀಶ್ ಕೃಷ್ಣ ಸೈಲ್
Updated on

ಬೆಂಗಳೂರು: 2009-10ರ ಅವಧಿಯಲ್ಲಿ ಬೇಲೆಕೇರಿ ಬಂದರಿನಿಂದ ವಶಪಡಿಸಿಕೊಂಡ ಕಬ್ಬಿಣದ ಅದಿರನ್ನು ಕಳ್ಳತನ ಮಾಡಿ ಅಕ್ರಮವಾಗಿ ರಫ್ತು ಮಾಡಿದ್ದಕ್ಕಾಗಿ ಇಲ್ಲಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ಭಾರಿ ಮೊತ್ತದ ದಂಡವನ್ನು ವಿಧಿಸಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಕ್ಟೋಬರ್ 24 ರಂದು ಕಾರವಾರದ 58 ವರ್ಷದ ಶಾಸಕ ಮತ್ತು ಇತರ ಆರು ಆರೋಪಿಗಳನ್ನು ದೋಷಿ ಎಂದು ಘೋಷಿಸಿತ್ತು.

ಎರಡು ಬಾರಿ ಎಂಎಲ್ಎ ಆಗಿರುವ ಸೈಲ್ ಶಿಕ್ಷೆಗೆ ಗುರಿಯಾಗಿರುವುದರಿಂದ ವಿಧಾನಸಭೆ ಸದಸ್ಯತ್ವ ಕಳೆದುಕೊಳ್ಳುವ ಭೀತಿ ಇದೆ.

ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ, ಸೈಲ್ ಕಳ್ಳತನ, ಕ್ರಿಮಿನಲ್ ಪಿತೂರಿ ಮತ್ತು ವಂಚನೆ ಆರೋಪದ ಮೇಲೆ ಶಿಕ್ಷೆಗೊಳಗಾದರು.

ಬಳ್ಳಾರಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ 11,312 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು 2010ರಲ್ಲಿ ಬೇಲೇಕೇರಿ ಬಂದರಿನಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಆದರೆ, ಆರೋಪಿಗಳು ಅಧಿಕಾರಿಗಳೊಂದಿಗೆ ಶಾಮೀಲಾಗಿ ಚೀನಾಗೆ ಕಳ್ಳಸಾಗಣೆ ಮಾಡಿದ್ದಾರೆ.

ಬಂದರುಗಳ ಉಪ ಸಂರಕ್ಷಣಾಧಿಕಾರಿ ಮಹೇಶ್ ಜೆ ಬಿಳಿಯೆ, ಆಶಾಪುರ ಮಿನೆಚೆಮ್ ಎಂಡಿ ಚೇತನ್ ಶಾ, ಕೆವಿ ನಾಗರಾಜ್ ಅಲಿಯಾಸ್ ಸ್ವಸ್ತಿಕ್ ನಾಗರಾಜ್, ಕೆವಿಎನ್ ಗೋವಿಂದರಾಜ್, ವೆಂಕಟೇಶ್ವರ ಮಿನರಲ್ಸ್ ಪಾಲುದಾರ ಕರಪುಡಿ ಮಹೇಶ್ ಕುಮಾರ್ ಮತ್ತು ಲಾಲ್ ಮಹಲ್ ಲಿಮಿಟೆಡ್ ಎಂಡಿ ಪ್ರೇಮ್ ಚಂದ್ ಗಾರ್ಗ್ ಅವರು ಪ್ರಕರಣದ ಇತರ ಅಪರಾಧಿಗಳಾಗಿದ್ದಾರೆ.

ವಿಶ್ವಾಸ ದ್ರೋಹ ಮತ್ತು ಪಿತೂರಿಗಾಗಿ ತಪ್ಪಿತಸ್ಥನೆಂದು ಕಂಡುಬಂದ ಬಿಳಿಯೆಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು, ಪ್ರಾಥಮಿಕ ಪ್ರಕರಣದಲ್ಲಿ ನ್ಯಾಯಾಲಯವು ಆರು ಕೋಟಿ ರೂಪಾಯಿ ದಂಡವನ್ನು ವಿಧಿಸಿತು.

ಸಂಬಂಧಿತ ಕಳ್ಳತನ ಪ್ರಕರಣದಲ್ಲಿ, ಅಪರಾಧಿಗಳಿಗೆ ಹೆಚ್ಚುವರಿ ಮೂರು ವರ್ಷಗಳ ಶಿಕ್ಷೆ ವಿಧಿಸಲಾಯಿತು ಮತ್ತು ನ್ಯಾಯಾಲಯವು ದಂಡದ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸರ್ಕಾರಕ್ಕೆ ಆದೇಶಿಸಿತು.

ಎರಡನೇ ಪ್ರಕರಣದಲ್ಲಿ, ನ್ಯಾಯಾಲಯವು ಸೈಲ್‌ಗೆ ಇನ್ನೂ ಏಳು ವರ್ಷಗಳ ಶಿಕ್ಷೆ ಮತ್ತು ಆರು ಕೋಟಿ ರೂಪಾಯಿ ದಂಡವನ್ನು ವಿಧಿಸಿತು.

ಮೂರನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳಿಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ.ಗಳ ದಂಡದ ಜೊತೆಗೆ ವಂಚನೆ ಮಾಡಿದ್ದಕ್ಕಾಗಿ ಒಟ್ಟು 9.36 ಕೋಟಿ ರೂ. ದಂಡವನ್ನು ವಿಧಿಸಿತು.

ನಾಲ್ಕನೇ ಪ್ರಕರಣದಲ್ಲಿ ಸೈಲ್, ಬಿಳಿಯೆ ಮತ್ತು ನಾಗರಾಜ್ ಅವರಿಗೆ ವಂಚನೆಗಾಗಿ ಐದು ವರ್ಷ ಮತ್ತು ಏಳು ವರ್ಷಗಳ ಶಿಕ್ಷೆ ವಿಧಿಸಲಾಗಿದ್ದು, ಹೆಚ್ಚುವರಿ 9.54 ಕೋಟಿ ರೂ. ದಂಡವನ್ನು ವಿಧಿಸಿತು. ಒಟ್ಟಾರೆ 44 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ದಂಡವನ್ನು ಕೋರ್ಟ್ ವಿಧಿಸಿದೆ.

ತೀರ್ಪು ಪ್ರಕಟಿಸಿದ ನಂತರ, ಪ್ರಕರಣದ ತನಿಖೆ ನಡೆಸಿದ ಸಿಬಿಐ ಅವರನ್ನು ಮತ್ತು ಇತರ ಇಬ್ಬರನ್ನು ಬಂಧಿಸಿತ್ತು.

Satish Krishna Sail
ಕಾಂಗ್ರೆಸ್ ಭ್ರಷ್ಟರೆಲ್ಲರೂ ಸತೀಶ್ ಸೈಲ್ ಹಾದಿ ಹಿಡಿಯಬೇಕಾದ ಸ್ಥಿತಿ ಬರಲಿದೆ: ವಿಜಯೇಂದ್ರ

ಸತೀಶ್ ಸೈಲ್ ಶಾಸಕ ಸ್ಥಾನಕ್ಕೆ ಕುತ್ತು!

ನಿಯಮಗಳ ಪ್ರಕಾರ ಎರಡು ವರ್ಷಗಳಿಗಿಂತ ಹೆಚ್ಚಿನ ಜೈಲು ಶಿಕ್ಷೆಯಾದರೆ ಶಾಸಕ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ. ಅಂತಹದರಲ್ಲಿ ಸತೀಶ್ ಸೈಲ್ ಗೆ 7 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಹೀಗಾಗಿ ಅವರ ಶಾಸಕ ಸ್ಥಾನ ಅನರ್ಹಗೊಳ್ಳಲಿದೆ.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ''ಅಪರಾಧಿಯಾಗಿರುವ ಶಾಸಕರನ್ನು ಅನರ್ಹಗೊಳಿಸುವಂತೆ ನಾನು ಕರ್ನಾಟಕ ವಿಧಾನಸಭಾ ಸ್ಪೀಕರ್‌ಗೆ ಮನವಿ ಮಾಡುತ್ತೇನೆ." ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com