Waqf board ಗೆ ಅಕ್ಬರ್, ಔರಂಗಜೇಬ್, ಜಿನ್ನಾ ಅಥವಾ ಸೌದಿಯ ಮುಲ್ಲಾಗಳು ಜಮೀನು ಕೊಟ್ಟಿದ್ದಾರೆಯೇ?

ವಿಜಯಪುರದಲ್ಲಿ ರೈತರಿಗೆ ಸೇರಿದ ಜಮೀನು ತನ್ನದೆಂದು ವಕ್ಫ್ ಬೋರ್ಡ್ ಹೇಳಿದೆ. ಈ ವಕ್ಫ್ ಎಂದರೆ ಏನು? ಇವರಿಗೆ ಜಮೀನು ಬಳುವಳಿ ಆಗಿ ಕೊಟ್ಟಿದ್ದು ಯಾರು? ಇದೇನು ಜಿನ್ನಾ ಕೊಟ್ಟ ಭೂಮಿಯೇ? ಎಂದು ಪ್ರಶ್ನಿಸಿದರು.
former BJP MP Pratap Simha
ಮಾಜಿ ಸಂಸದ ಪ್ರತಾಪ್ ಸಿಂಹ
Updated on

ಮೈಸೂರು: ಮುಸ್ಲಿಮರು ವಕ್ಫ್ ಆಸ್ತಿ ಅಂತಾರಲ್ಲ ಅದು ಅವರಿಗೆ ಯಾರಿಂದ ಬಂತು? ಅಕ್ಬರ್, ಔರಂಗಜೇಬ್ ಜಿನ್ನಾ ಅಥವಾ ಯಾರಾದರೂ ಸೌದಿಯ ಮುಲ್ಲಾಗಳು ಕೊಟ್ಟ ಆಸ್ತಿನಾ ಇದು? ಪ್ರತ್ಯೇಕ ಆಸ್ತಿ ಮುಸ್ಲಿಂರಿಗೆ ಎಲ್ಲಿಂದ ಬಂತು? ಯಾರಿಂದ ಅವರಿಗೆ ಬಳುವಳಿ ಬಂದಿದ್ದು? ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು ವಿಜಯಪುರದಲ್ಲಿ ರೈತರಿಗೆ ಸೇರಿದ ಜಮೀನು ತನ್ನದೆಂದು ವಕ್ಫ್ ಬೋರ್ಡ್ ಹೇಳಿದೆ. ಈ ವಕ್ಫ್ ಎಂದರೆ ಏನು? ಇವರಿಗೆ ಜಮೀನು ಬಳುವಳಿ ಆಗಿ ಕೊಟ್ಟಿದ್ದು ಯಾರು? ಇದೇನು ಜಿನ್ನಾ ಕೊಟ್ಟ ಭೂಮಿಯೇ? ಎಂದು ಪ್ರಶ್ನಿಸಿದರು.

ಕೇವಲ ವಿಜಯಪುರ ಮಾತ್ರವಲ್ಲ ಅಲ್ಲ. ಹುಣಸೂರಿನ ಗಣೇಶ ದೇವಸ್ಥಾನ, ಚಿಕ್ಕಮಗಳೂರಿನಲ್ಲಿ ಖಾಸಗಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಹೇಳಿ ಕಬಳಿಸುವ ಪ್ರಯತ್ನ ನಡೆದಿದೆ. ರಾಜ್ಯದಲ್ಲಿನ 1.25 ಲಕ್ಷ ಎಕರೆ ಜಮೀನು ತಮಗೆ ಸೇರಿದ್ದು ಎಂದು ವಕ್ಫ್ ಮಂಡಳಿ ವಾದಿಸುತ್ತಿದೆ. ಚಿಕ್ಕಮಗಳೂರು ಇದೇ ಕಥೆ ಆಗಿದೆ. ಕಂಡವರ ಜಮೀನಿಗೆಲ್ಲಾ ಮುಲ್ಲಾಗಳು ನೋಟಿಸ್ ಕೊಡ್ತಾರೆ, ಇದು ನಮ್ಮದು ಅಂತಿದ್ದಾರೆ. ವಕ್ಫ್ ಬೋರ್ಡ್ ಜಮೀನಿನಲ್ಲಿ ಮುಸ್ಲಿಂರಿಗೆ ಉಳುಮೆ ಮಾಡಲು ಅವಕಾಶ ಕೊಟ್ಟಿದ್ದಿರಾ? ಯಾವ ಮುಸಲ್ಮಾನರಿಗೂ ಕೃಷಿಗೆ ಜಮೀನು ಬಿಟ್ಟುಕೊಟ್ಟಿಲ್ಲ. ಬದಲಾಗಿ ರಿಯಲ್ ಎಸ್ಟೇಟ್ ದಂದೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ವಕ್ಫ್ ಕಾಯ್ದೆ ಅನ್ನು ವಜಾ‌ ಮಾಡಬೇಕು ಎಂದು ಆಗ್ರಹಿಸಿದರು. ನಮ್ಮ ದೇವಾಲಯ, ಮಠಗಳಲ್ಲಿ ಹಾಕುವಂತೆ ಯಾವತ್ತಾದರೂ ಮಸೀದಿ ಚರ್ಚ್ ಗಳಲ್ಲಿ ಹಿಡಿ ಅನ್ನ ಯಾರಿಗಾದ್ರೂ ಹಾಕಿದ್ದಿರಾ? ಎಂದು ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮುಡಾ ಪ್ರಕರಣ ನಂತರ ಚಾಮುಂಡೇಶ್ವರಿ, ಹಾಸನಾಂಬೆ ಸೇರಿದಂತೆ ಹಿಂದೂ ದೇವತೆಗಳ ಮೇಲೆ ನಂಬಿಕೆ ಬಂದಿದೆ. ಹೀಗಾಗಿ ವಿಜಯಪುರ ವಿಚಾರದಲ್ಲಿ ಹಿಂದೂಗಳ ಪರ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಪ್ರತಾಪ‌ ಸಿಂಹ ಹೇಳಿದರು.

former BJP MP Pratap Simha
ವಕ್ಫ್ ಬೋರ್ಡ್ ನೋಟಿಸ್: ರೈತರ ಅಹವಾಲು ಸ್ವೀಕರಿಸಲು ಬಿಜೆಪಿ ತಂಡ ರಚನೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com