ಬ್ರಿಟನ್ ರಾಜ ಕಿಂಗ್ ಚಾರ್ಲ್ಸ್-3 ದಂಪತಿ ಬೆಂಗಳೂರಿಗೆ ರಹಸ್ಯ ಭೇಟಿ; ಪ್ರಕೃತಿ ಚಿಕಿತ್ಸೆಗಾಗಿ ವಾಸ್ತವ್ಯ!

ರಾಜನಾಗಿ ಇದು ಅವರ ಮೊದಲ ಭೇಟಿಯಾಗಿದ್ದರೂ, ಚಾರ್ಲ್ಸ್ ಈ ಹಿಂದೆ ಹಲವು ಬಾರಿ ಕೇಂದ್ರಕ್ಕೆ ಭೇಟಿ ನೀಡಿದ್ದರು, ಇಲ್ಲಿ ದೀಪಾವಳಿ ಕೂಡ ಆಚರಿಸಿದ್ದರು.
Charles and Camilla in one of their previous visits for wellness treatment
ಚಾರ್ಲ್ಸ್ ಮತ್ತು ಕ್ಯಾಮಿಲ್ಲಾ ಸೌಖ್ಯ ಕ್ಷೇಮ ಕೇಂದ್ರಕ್ಕೆ ಹಿಂದೆ ಭೇಟಿ ನೀಡಿದ್ದ ವೇಳೆ
Updated on

ಬೆಂಗಳೂರು: ಇಂಗ್ಲೆಂಡಿನ ರಾಜ ಕಿಂಗ್ ಚಾರ್ಲ್ಸ್ 3 ಅವರು ಬೆಂಗಳೂರಿಗೆ ರಹಸ್ಯ ಭೇಟಿ ನೀಡಿದ್ದಾರೆ. ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ಮೇ 6, 2023ರಂದು ಇಂಗ್ಲೆಂಡಿನ ರಾಜರಾಗಿ ಪಟ್ಟಾಭಿಷೇಕ ಮಾಡಿಕೊಂಡ ನಂತರ ಕಿಂಗ್ ಚಾರ್ಲ್ಸ್ 3 ಅವರು ಬೆಂಗಳೂರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಅವರು ಮೊನ್ನೆ ಅಕ್ಟೋಬರ್ 27 ರಂದು ಬೆಂಗಳೂರಿಗೆ ಆಗಮಿಸಿದ್ದು, ಪ್ರಕೃತಿ ಚಿಕಿತ್ಸೆ ಪಡೆಯುವುದಕ್ಕಾಗಿ ಇಂದು ರಾತ್ರಿಯವರೆಗೆ ವೈಟ್‌ಫೀಲ್ಡ್‌ನಲ್ಲಿರುವ ಸೌಖ್ಯ ಇಂಟರ್‌ನ್ಯಾಷನಲ್ ಹೋಲಿಸ್ಟಿಕ್ ಹೆಲ್ತ್ ಸೆಂಟರ್‌ನಲ್ಲಿ (SIHHC) ವಾಸ್ತವ್ಯ ಮಾಡಲಿದ್ದಾರೆ.

ಅಕ್ಟೋಬರ್ 21ರಿಂದ 26 ರವರೆಗೆ 2024 ರ ಕಾಮನ್‌ವೆಲ್ತ್ ಮುಖ್ಯಸ್ಥರ ಸಭೆಯಲ್ಲಿ ಭಾಗವಹಿಸಿದ ಕಿಂಗ್ ಚಾರ್ಲ್ಸ್ ಸಮೋವಾದಿಂದ ನೇರವಾಗಿ ಬೆಂಗಳೂರಿಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿಗೆ ಅವರ ಆಗಮನವನ್ನು ರಹಸ್ಯವಾಗಿ ಇಡಲಾಗಿತ್ತು. ಅವರನ್ನು ನೇರವಾಗಿ ಹೆಲ್ತ್ ಸೆಂಟರ್ ಗೆ ಕರೆದೊಯ್ದಿದ್ದು, ಅವರ ಪತ್ನಿ ರಾಣಿ ಕ್ಯಾಮಿಲ್ಲಾ ಕೂಡ ಅಲ್ಲಿ ಅವರ ಜೊತೆಯಾಗಿದ್ದಾರೆ.

ಯೋಗ, ಧ್ಯಾನ ಮೂಲಕ ಕಿಂಗ್ ಚಾರ್ಲ್ಸ್ 3 ದಂಪತಿ ದಿನಚರಿ ಆರಂಭಿಸಿದ್ದಾರೆ. ನಂತರ ಉಪಹಾರ ಮತ್ತು ಊಟ ಮಾಡುತ್ತಾರೆ. ಸ್ವಲ್ಪ ವಿರಾಮ ನಂತರ, ಎರಡನೇ ಸುತ್ತಿನ ಚಿಕಿತ್ಸೆಗಳು ಶುರುವಾಗುತ್ತವೆ. ರಾತ್ರಿ 9 ಗಂಟೆಗೆ ಊಟ ಮತ್ತು ಧ್ಯಾನದೊಂದಿಗೆ ಮುಕ್ತಾಯವಾಗುತ್ತದೆ. ಈಮಧ್ಯೆ ಕ್ಯಾಂಪಸ್‌ ಸುತ್ತಲೂ ಸುದೀರ್ಘ ನಡಿಗೆ, ಸಾವಯವ ಕೃಷಿ ಮತ್ತು ದನದ ಕೊಟ್ಟಿಗೆಗೆ ಭೇಟಿ ನೀಡುತ್ತಾರೆ.

ರಾಜರ ರಹಸ್ಯ ಭೇಟಿಯಿಂದಾಗಿ ಸೌಖ್ಯ ಹೆಲ್ತ್ ಸೆಂಟರ್ ಸುತ್ತ ಹೆಚ್ಚಿನ ಭದ್ರತೆಯನ್ನು ಮಾಡಲಾಗಿದೆ.

Charles and Camilla in one of their previous visits for wellness treatment
ವೆಸ್ಟ್‌ಮಿನಿಸ್ಟರ್ ನಲ್ಲಿ ಕಿಂಗ್ ಚಾರ್ಲ್ಸ್ III ಐತಿಹಾಸಿಕ ಪಟ್ಟಾಭಿಷೇಕ; ಫೋಟೋಗಳು

ಡಾ ಇಸಾಕ್ ಮಥಾಯ್ ಅವರು ಸ್ಥಾಪಿಸಿದ ಆರೋಗ್ಯ ಕೇಂದ್ರವು ಬೆಂಗಳೂರಿನ ಹೊರವಲಯದಲ್ಲಿರುವ ವೈಟ್‌ಫೀಲ್ಡ್‌ನ ಸಮೇತನಹಳ್ಳಿಯಲ್ಲಿದೆ. ಈ ಸಮಗ್ರ ವೈದ್ಯಕೀಯ ಸೌಲಭ್ಯವು ಆಯುರ್ವೇದ, ಹೋಮಿಯೋಪತಿ, ಯೋಗ ಮತ್ತು ನ್ಯಾಚುರೋಪತಿ ಸೇರಿದಂತೆ 30 ಕ್ಕೂ ಹೆಚ್ಚು ಪೂರಕ ಚಿಕಿತ್ಸೆಗಳೊಂದಿಗೆ ರಿಫ್ಲೆಕ್ಸೋಲಜಿ, ಆಕ್ಯುಪ್ರೆಶರ್, ಅಕ್ಯುಪಂಕ್ಚರ್ ಮತ್ತು ಡಯೆಟಿಕ್ಸ್ ಸೇರಿದಂತೆ ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಗಳನ್ನು ಹೊಂದಿದೆ.

ರಾಜನಾಗಿ ಇದು ಅವರ ಮೊದಲ ಭೇಟಿಯಾಗಿದ್ದರೂ, ಚಾರ್ಲ್ಸ್ ಈ ಹಿಂದೆ ಹಲವು ಬಾರಿ ಕೇಂದ್ರಕ್ಕೆ ಭೇಟಿ ನೀಡಿದ್ದರು, ಇಲ್ಲಿ ದೀಪಾವಳಿ ಕೂಡ ಆಚರಿಸಿದ್ದರು. ಪುನರ್ಚೈತನ್ಯ, ನಿರ್ಜಲೀಕರಣ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಚಿಕಿತ್ಸೆಗಳನ್ನು ಪಡೆದಿದ್ದಾರೆ.

ನವೆಂಬರ್ 14, 2019 ರಂದು, ದಂಪತಿ ಆಗಿನ ಪ್ರಿನ್ಸ್ ಚಾರ್ಲ್ಸ್ ಅವರ 71 ನೇ ಹುಟ್ಟುಹಬ್ಬವನ್ನು SIHHC ನಲ್ಲಿ ಆಚರಿಸಿಕೊಂಡಿದ್ದರು. ಪ್ರಿನ್ಸ್ ಆಫ್ ವೇಲ್ಸ್, ಚಾರ್ಲ್ಸ್ ಸೆಪ್ಟೆಂಬರ್ 8, 2022 ರಂದು ಅವರ ತಾಯಿ ರಾಣಿ ಎಲಿಜಬೆತ್ II ರ ಮರಣದ ನಂತರ ಇಂಗ್ಲೆಂಡ್ ರಾಜರಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com