15 ಕೆ.ಜಿ ತೂಕ ಕಳೆದುಕೊಂಡ 'ದಾಸ'ನಿಗೆ ಕಾಡುತ್ತಿದೆ ಬೆನ್ನುನೋವು: ದರ್ಶನ್ ಗೆ ಜೈಲಿನ ವೈದ್ಯರಿಂದ ಚಿಕಿತ್ಸೆ

ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ಬಂಧನವಾಗಿ ಮೂರು ತಿಂಗಳಾಗುತ್ತಾ ಬಂದಿದೆ. ಹೊರಗೆ ಸ್ವಚ್ಛಂದವಾಗಿ ಪಾರ್ಟಿ, ಗೆಳೆಯರು, ಅಭಿಮಾನಿಗಳು, ಸಿನಿಮಾ ಚಿತ್ರೀಕರಣ ಎಂದು ಖುಷಿಯಿಂದ ಓಡಾಡುತ್ತಿದ್ದ ದಾಸ ಈಗ ಬಳ್ಳಾರಿ ಜೈಲಿನಲ್ಲಿ ಕಷ್ಟಪಡುತ್ತಿದ್ದಾರೆ.
15 ಕೆ.ಜಿ ತೂಕ ಕಳೆದುಕೊಂಡ 'ದಾಸ'ನಿಗೆ ಕಾಡುತ್ತಿದೆ ಬೆನ್ನುನೋವು: ದರ್ಶನ್ ಗೆ ಜೈಲಿನ ವೈದ್ಯರಿಂದ ಚಿಕಿತ್ಸೆ
Updated on

ಬಳ್ಳಾರಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿದ್ದ ಆರೋಪದ ಮೇಲೆ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಳೆದ ಮೂರು ತಿಂಗಳಿನಿಂದ ಜೈಲಿನಲ್ಲಿ ಕಳೆದು ಸೊರಗಿ ಹೋಗಿದ್ದಾರೆ ಅಲ್ಲದೆ ಈಗ ದಾಸನಿಗೆ ಬೆನ್ನುನೋವು ಕಾಡುತ್ತಿದೆ ಎಂದು ಅವರು ತೂಕದಲ್ಲಿ ಇಳಿಕೆಯಾಗಿರುವುದು ಸೂಚಿಸುತ್ತದೆ.

ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ಬಂಧನವಾಗಿ ಮೂರು ತಿಂಗಳಾಗುತ್ತಾ ಬಂದಿದೆ. ಹೊರಗೆ ಸ್ವಚ್ಛಂದವಾಗಿ ಪಾರ್ಟಿ, ಗೆಳೆಯರು, ಅಭಿಮಾನಿಗಳು, ಸಿನಿಮಾ ಚಿತ್ರೀಕರಣ ಎಂದು ಖುಷಿಯಿಂದ ಓಡಾಡುತ್ತಿದ್ದ ದಾಸ ಈಗ ಬಳ್ಳಾರಿ ಜೈಲಿನಲ್ಲಿ ಕಷ್ಟಪಡುತ್ತಿದ್ದಾರೆ. ಜೈಲು ಸೇರಿದಾಗಿನಿಂದ ಸುಮಾರು 15 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ಜೈಲಿನ ಸಿಬ್ಬಂದಿ ತೂಕ ಮಾಡಿದಾಗ ತಿಳಿದುಬಂದಿದೆ.

15 ಕೆ.ಜಿ ತೂಕ ಕಳೆದುಕೊಂಡ 'ದಾಸ'ನಿಗೆ ಕಾಡುತ್ತಿದೆ ಬೆನ್ನುನೋವು: ದರ್ಶನ್ ಗೆ ಜೈಲಿನ ವೈದ್ಯರಿಂದ ಚಿಕಿತ್ಸೆ
ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ

ಜೈಲಿನ ಊಟ, ಏಕಾಂಗಿತನ, ಕಟ್ಟುನಿಟ್ಟು ಕ್ರಮ ದರ್ಶನ್ ದೇಹತೂಕ ಕಳೆದುಕೊಂಡಿದ್ದಾರೆ. ಮೊಮ್ಮೆ ಬಳ್ಳಾರಿ ಜೈಲಿಗೆ ಬಂದಾಗ ಸಿಬ್ಬಂದಿ ಅವರ ಆರೋಗ್ಯ ತಪಾಸಣೆ ಮಾಡಿ ತೂಕ ಮಾಡಿ ನೋಡಿದಾಗ 15 ತೂಕ ಕಳೆದುಕೊಂಡಿದ್ದಾರೆ,

ಬೆನ್ನು ನೋವಿನಿಂದ ಬಳಲುತ್ತಿರುವ ಕಾಟೇರ: ಬಳ್ಳಾರಿ ಜೈಲಿನಲ್ಲಿ ದಾಸನಿಗೆ ಬೆಂಬಿಡದೆ ಬೆನ್ನು ನೋವು ಕಾಡುತ್ತಿದೆ. ಇದರ ಬಗ್ಗೆ ಜೈಲು ಅಧಿಕಾರಿಗಳ ಬಳಿ ಚಿಕಿತ್ಸೆ ಹಾಗೂ ಕೆಲವು ಸೌಲಭ್ಯಗಳಿಗೆ ಮನವಿ ಮಾಡಿದ್ದಾರೆ. ಬೆನ್ನು ನೋವಿರುವ ಕಾರಣ, ಭಾರತೀಯ ಶೈಲಿಯ ಶೌಚಾಲಯ ಬಳಸಲಾಗುತ್ತಿಲ್ಲ, ಪಾಶ್ಚಾತ್ಯ ಶೈಲಿಯ ಟಾಯ್ಲೆಟ್ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಐಜಿ ಶೇಷಾ, ಬೆನ್ನು ನೋವಿಗೆ ಜೈಲು ವೈದ್ಯರೇ ಚಿಕಿತ್ಸೆ ನೀಡಲಿದ್ದಾರೆ. ಅವರಿಗೆ ಮೊದಲೇ ಬೆನ್ನು ನೋವು ಇತ್ತು, ಹಿಂದೆ ನೀಡುತ್ತಿದ್ದ ಚಿಕಿತ್ಸೆ ನೋಡಿಕೊಂಡು ಪರಿಶೀಲಿಸಿ ಜೈಲಿನ ವೈದ್ಯರೇ ಚಿಕಿತ್ಸೆ ನೀಡಲಿದ್ದಾರೆ . ಪಾಶ್ಚಾತ್ಯ ಟಾಯ್ಲೆಟ್​ಗೆ ಅಥವಾ ಸರ್ಜಿಕಲ್ ಚೇರ್ ವ್ಯವಸ್ಥೆ ಮಾಡಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com