
ಮೈಸೂರು: ಕಲೆಕ್ಷನ್ ವಿಚಾರವಾಗಿ ಮಂಗಳ ಮುಖಿಯರ ಎರಡು ಗುಂಪಿನ ನಡುವೆ ಜಗಳವಾಗಿದ್ದು, ನಡು ಬೀದಿಯಲ್ಲೇ ಹೊಡೆದಾಡಿಕೊಂಡ ಘಟನೆ ಮೈಸೂರಿನಲ್ಲಿ ವರದಿಯಾಗಿದೆ.
ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಾರಾ ಮಾರಿ ನಡೆದಿರುವ ಬಗ್ಗೆ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಗನ್ಮೋಹನ ಅರಮನೆಯ ಹತ್ತಿರ ಇರುವ ಬಸ್ ನಿಲ್ದಾಣದ ಬಳಿ ಈ ಮಾರಾಮಾರಿ ನಡೆದಿದೆ. ತಮ್ಮ Area ಗೆ ಬಂದಿದ್ದ ಮಂಗಳಮುಖಿಯರ ಗುಂಪು ಅಲ್ಲಿ ಕಲೆಕ್ಷನ್ ಮಾಡುತ್ತಿರುವುದನ್ನು ಮತ್ತೊಂದು ಗುಂಪು ವಿರೋಧಿಸಿದ ಹಿನ್ನೆಲೆಯಲ್ಲಿ ಈ ಗಲಾಟೆ ನಡೆದಿದೆ.
ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಓರ್ವ ಮಂಗಳ ಮುಖಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವುದೂ ಬಹಿರಂಗವಾಗಿದೆ. ಈ ಗಲಾಟೆಯನ್ನು ಕಂಡ ಜನರು ಕೆಲಕಾಲ ಭಯಗೊಂಡಿದ್ದರು. ಸಾರ್ವಜನಿಕರು ಮಧ್ಯಪ್ರವೇಶಿಸಿದರೂ ಇವರ ಹೊಡೆದಾಟ ನಿಲ್ಲಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರೂ ಸಹ ಅಸಹಾಯಕ ಸ್ಥಿತಿಯಲ್ಲಿ ನಿಂತಿದ್ದರು. ಘಟನೆಯ ದೃಶ್ಯ ಸೆರೆಯಾಗಿದ್ದು, ವೈರಲ್ ಆಗಿದೆ.
ಸಾರ್ವಜನಿಕ ಪ್ರದೇಶದಲ್ಲಿ ದುರ್ವತನೆ ತೋರಿದ ಹಿನ್ನೆಲೆಯಲ್ಲಿ ಪೊಲೀಸರು ಐವರು ಮಂಗಳಮುಖಿಯರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Advertisement