ಗಣೇಶ ಪೆಂಡಾಲ್, ಗಣೇಶೋತ್ಸವಗಳಲ್ಲಿ ಪ್ರಸಾದ ವಿನಿಯೋಗ: FSSAI ನಿಂದ ಆದೇಶ

ಗಣೇಶೋತ್ಸವ ವೇಳೆ ಪ್ರಸಾದ ವಿನಿಯೋಗ ಇದ್ದರೆ ಅಲ್ಲಿ ಶುಚಿತ್ವ ಮತ್ತು ಗುಣಮಟ್ಟ ಸುರಕ್ಷತೆ ಪತ್ರ ಕಡ್ಡಾಯ ಹಾಗೆ ಬಿಬಿಎಂಪಿ ಅನುಮತಿ ಜೊತೆಗೆ ಆಹಾರ ವಿತರಣೆಗೂ ಅನುಮತಿ ಪತ್ರ ಇರಲೇಬೇಕಿದೆ.
ಸಾರ್ವಜನಿಕ ಗಣೇಶ ಉತ್ಸವ
ಸಾರ್ವಜನಿಕ ಗಣೇಶ ಉತ್ಸವ
Updated on

ಬೆಂಗಳೂರು : ಗಣಪತಿ ಉತ್ಸವಕ್ಕೆ ಇನ್ನೇನು ಮೂರೇ ದಿನ ಬಾಕಿ ಹಿನ್ನೆಲೆಯಲ್ಲಿ ಉತ್ಸವ ಮಾಡುವ ಆಯೋಜಕರಿಗೆ ಎಚ್ಚರಿಕೆ ಕೊಟ್ಟ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ FSSAI ಈ ಬಗ್ಗೆ ಬಿಬಿಎಂಪಿಗೆ ಪತ್ರ ಬರೆದಿದೆ.

ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಪೆಂಡಾಲ್ ಗಳು, ಸಾರ್ವಜನಿಕ ಗಣೇಶೋತ್ಸವಗಳಲ್ಲಿ ವಿತರಿಸಲಾಗುವ ಆಹಾರ ಪದಾರ್ಥಗಳ ಶುಚಿತ್ವ, ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಫ್ ಎಸ್ ಎಸ್ ಎಐ ಪರವಾನಗಿ ಪಡೆದಿರುವ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಮಾತ್ರ ಪ್ರಸಾದ ಸಿದ್ಧಪಡಿಸುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶಿಸಿದೆ.

ಗಣೇಶೋತ್ಸವ ವೇಳೆ ಪ್ರಸಾದ ವಿನಿಯೋಗ ಇದ್ದರೆ ಅಲ್ಲಿ ಶುಚಿತ್ವ ಮತ್ತು ಗುಣಮಟ್ಟ ಸುರಕ್ಷತೆ ಪತ್ರ ಕಡ್ಡಾಯ ಹಾಗೆ ಬಿಬಿಎಂಪಿ ಅನುಮತಿ ಜೊತೆಗೆ ಆಹಾರ ವಿತರಣೆಗೂ ಅನುಮತಿ ಪತ್ರ ಇರಲೇಬೇಕಿದೆ. ಗಣಪತಿ ಉತ್ಸವದ ವೇಳೆ ಪ್ರಸಾದ, ಆಹಾರ ಪದಾರ್ಥಗಳು ವಿತರಣೆ ಮಾಡುವವರು ಪರವಾನಗಿ ಇದೆಯೇ ಎಂಬುದನ್ನು ಪರಿಶೀಲಿಸಲು ಸೂಚನೆ ನೀಡಲಾಗಿದೆ.

ಸಾರ್ವಜನಿಕ ಗಣೇಶ ಉತ್ಸವ
ಗಣೇಶೋತ್ಸವಕ್ಕೆ ಬೆಸ್ಕಾಂನಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ; ಗಣಪತಿ ಮೆರವಣಿಗೆ, ವಿಸರ್ಜನೆಗೆ ಮಾರ್ಗಸೂಚಿ ಪ್ರಕಟ

ಜನರ ಆರೋಗ್ಯ ದೃಷ್ಟಿಯಿಂದ ಪಾಲಿಕೆಗೆ ಪತ್ರದ ಮೂಲಕ ಸಂದೇಶ ಹಾಗೆ ಎಫ್ ಎಸ್ ಎಸ್ ಎಐನಿಂದ ಅನುಮತಿ ಪಡೆಯದೇ ಇದ್ದವರು ಆಹಾರ ನೀಡಿದರೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ಅನುಮತಿ ಕಡ್ಡಾಯ ಎಂದು ಸ್ಪಷ್ಟಪಡಿಸಿರುವ ನಗರ ಪೊಲೀಸರು, ಬಲವಂತವಾಗಿ ವಂತಿಗೆ ಸ್ವೀಕರಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com