ಹಿಜಾಬ್ ವಿವಾದ: ಕುಂದಾಪುರದ ಪ್ರಾಂಶುಪಾಲರಿಗೆ 'ಅತ್ಯುತ್ತಮ ಶಿಕ್ಷಕ' ಪ್ರಶಸ್ತಿಗೆ ತಡೆ; ಸರ್ಕಾರದ ನಡೆಗೆ ಖಂಡನೆ

ಎರಡು ವರ್ಷಗಳ ಹಿಂದೆ ನಡೆದ ಹಿಜಾಬ್ ವಿವಾದ ಇದಕ್ಕೆ ಪ್ರಮುಖ ಕಾರಣವಾಗಿದೆ. ಸರ್ಕಾರಿ ಆದೇಶದೊಂದಿಗೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ತರಗತಿ ಕೊಠಡಿ ಪ್ರವೇಶಿಸಲು ಪ್ರಾಂಶುಪಾಲ ಬಿಜಿ ರಾಮಕೃಷ್ಣ ನಿರಾಕರಿಸಿದ್ದರು.
ಕುಂದಾಪುರದ ಪ್ರಾಂಶುಪಾಲ ಬಿಜಿ ರಾಮಕೃಷ್ಣ
ಕುಂದಾಪುರದ ಪ್ರಾಂಶುಪಾಲ ಬಿಜಿ ರಾಮಕೃಷ್ಣ
Updated on

ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ ಜಿ ರಾಮಕೃಷ್ಣ ಅವರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡುವುದನ್ನು ಕರ್ನಾಟಕ ಸರ್ಕಾರ ತಡೆಹಿಡಿದಿದೆ.

ಇಂದು ಶಿಕ್ಷಕರ ದಿನಾಚರಣೆ ನಿಮಿತ್ತ ರಾಮಕೃಷ್ಣ ಅವರಿಗೆ ಪ್ರಶಸ್ತಿ ಘೋಷಣೆಯಾಗಿತ್ತು. ಆದರೆ ಮುಸ್ಲಿಂ ಸಮುದಾಯದ ಕೆಲ ಕಾರ್ಯಕರ್ತರು ಹಾಗೂ ಮುಖಂಡರಿಂದ ತೀವ್ರ ಆಕ್ರೋಶ ವ್ಯಕ್ತವಾದ್ದರಿಂದ ಸರ್ಕಾರ ಪ್ರಶಸ್ತಿ ನೀಡದಿರಲು ನಿರ್ಧರಿಸಿದೆ.

ಎರಡು ವರ್ಷಗಳ ಹಿಂದೆ ನಡೆದ ಹಿಜಾಬ್ ವಿವಾದ ಇದಕ್ಕೆ ಪ್ರಮುಖ ಕಾರಣವಾಗಿದೆ. ಸರ್ಕಾರಿ ಆದೇಶದೊಂದಿಗೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ತರಗತಿ ಕೊಠಡಿ ಪ್ರವೇಶಿಸಲು ಪ್ರಾಂಶುಪಾಲ ಬಿಜಿ ರಾಮಕೃಷ್ಣ ನಿರಾಕರಿಸಿದ್ದರು. ಇದು ಮಂಗಳೂರು, ಮಂಡ್ಯ, ಉಡುಪಿ ಸೇರಿದಂತೆ ರಾಜ್ಯದ ಹಲವೆಡೆ ಪ್ರತಿಭಟನೆ ನಡೆದಿತ್ತು.

ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ, ಕೆಲ ಪ್ರಗತಿಪರ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದವು. ಇದಕ್ಕೆ ಪ್ರತಿಕ್ರಿಯೆಯಾಗಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡದಿರಲು ನಿರ್ಧರಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಈ ಹಿಜಾಬ್ ಸಮಸ್ಯೆಯನ್ನು ಸಮಿತಿ ಕಡೆಗಣಿಸಿದ್ದಾರೆ ಎಂದು ಭಾವಿಸುತ್ತೇನೆ. ಸಮಸ್ಯೆ ಇದೆ ಎಂಬುದು ನಿನ್ನೆ ಗೊತ್ತಾದಾಗ ಪ್ರಶಸ್ತಿ ನೀಡುವುದನ್ನು ಸದ್ಯಕ್ಕೆ ತಡೆಹಿಡಿದಿದ್ದೇವೆ. ಪರಿಶೀಲಿಸಿ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

ಮತ್ತೆ ಪರಿಶೀಲನೆ ನಡೆಸಿ ಮಾಹಿತಿ ನೀಡುವಂತೆ ಸಮಿತಿಗೆ ಸೂಚಿಸಿದ್ದೇನೆ. ಮಕ್ಕಳನ್ನು ಶಿಕ್ಷಕ ನಡೆಸಿಕೊಂಡ ರೀತಿ ಇದಾಗಿದ್ದು, ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದರು. ಮತ್ತೊಂದೆಡೆ ಸಿದ್ದರಾಮಯ್ಯ ಸರ್ಕಾರ ತುಷ್ಟೀಕರಣದಲ್ಲಿ ತೊಡಗಿದೆ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿದ್ದು, ಸರ್ಕಾರದ ಕ್ರಮವನ್ನು ಖಂಡಿಸಿವೆ.

ಕುಂದಾಪುರದ ಪ್ರಾಂಶುಪಾಲ ಬಿಜಿ ರಾಮಕೃಷ್ಣ
ಹಿಜಾಬ್ ವಿವಾದ: ಸುಪ್ರೀಂ ಕೋರ್ಟ್ ನ ಭಿನ್ನ ತೀರ್ಪಿನಿಂದ ಉಡುಪಿ ವಿದ್ಯಾರ್ಥಿನಿಯರಲ್ಲಿ ಭರವಸೆಯ ಆಶಾಕಿರಣ

ವಿಎಚ್‌ಪಿ ಉತ್ತರ ಕರ್ನಾಟಕದ ಉಪಾಧ್ಯಕ್ಷ ಗೋವರ್ಧನ್‌ ರಾವ್‌ ಮಾತನಾಡಿ, ‘ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗುತ್ತದೆ. ಬೇರೆ ಕಾರಣಕ್ಕೆ ಪ್ರಶಸ್ತಿ ನೀಡದಿರುವುದ ಖಂಡನೀಯ. ಆ ತಡೆಯನ್ನು ತಕ್ಷಣವೇ ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.

ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸಿದ್ದಾರೆ. ಅತ್ಯುತ್ತಮ ಶಿಕ್ಷಕ ಎಂದು ಪ್ರಾಂಶುಪಾಲರನ್ನು ಆಯ್ಕೆ ಮಾಡಿ, ನಂತರ ಹಿಜಾಬ್ ನಿಷೇಧದ ಹಿನ್ನೆಲೆಯಲ್ಲಿ ಅವರಿಗೆ ಪ್ರಶಸ್ತಿ ನಿರಾಕರಿಸಲಾಗಿದ್ದು, ನಾಚಿಕೆಗೇಡಿನ ತುಷ್ಟಿಕರಣ ರಾಜಕಾರಣವಾಗಿದೆ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com