ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಆಕಾಂಕ್ಷಿಗಳು ಮತ್ತು ಶಿಕ್ಷಣ ತಜ್ಞರು ಗೆಜೆಟೆಡ್ ಪ್ರೊಬೇಷನರ್‌ಗಳ ಮರು ಪರೀಕ್ಷೆಗೆ ನಾಲ್ಕು ತಿಂಗಳು ವಿಸ್ತರಣೆ ಕೋರಿದ್ದಾರೆ. ಅವಸರದಲ್ಲಿ ಪರೀಕ್ಷೆಗಳನ್ನು ನಡೆಸಿದ ಸರ್ಕಾರದ ಕೆಟ್ಟ ನಡೆಯ ಬಗ್ಗೆ ಚರ್ಚಿಸಲು ಪಿಡಿಒ, ಗ್ರಾಮ ಆಡಳಿತ ಅಧಿಕಾರಿ, ಗೆಜೆಟ್ ಪ್ರೊಬೇಷನರಿಗಳು ಮತ್ತು ಇತರ 15 ಲಕ್ಷ ಆಕಾಂಕ್ಷಿಗಳು ನಿರ್ಧರಿಸಿದ್ದಾರೆ.
ಟೆಲಿಗ್ರಾಂ, ವಾಟ್ಸ್‌ಆ್ಯಪ್‌ನಂತಹ ವೇದಿಕೆಗಳಲ್ಲಿ ಸ್ಟಡಿ ಸರ್ಕಲ್ ರಚಿಸಿರುವ ಆಕಾಂಕ್ಷಿಗಳು, ಈಗಿನಿಂದಲೇ ತಯಾರಿ ನಡೆಸಲು ನಾಲ್ಕು ತಿಂಗಳ ಕಾಲಾವಕಾಶ ನೀಡದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವು ತಮ್ಮ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯಿಂದ ಬಂದವರಾಗಿದ್ದು, ಪಠ್ಯಕ್ರಮವನ್ನು ಅನುಸರಿಸಲು ಅವರಿಗೆ ಸಮಯ ಬೇಕಾಗುತ್ತದೆ. ಆದರೆ ಇನ್ನು ಕೆಲವೇ ತಿಂಗಳಲ್ಲಿ ನಿವೃತ್ತರಾಗಲಿರುವ ಕೆಲವು ಸದಸ್ಯರು ಪರೀಕ್ಷೆಗಳನ್ನು ನಡೆಸದಿದ್ದರೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಆಗಸ್ಟ್ 27ರಂದು ಸರ್ಕಾರವು ತರಾತುರಿಯಲ್ಲಿ ಪರೀಕ್ಷೆಗಳನ್ನು ನಡೆಸಿತು. ಭಾಷಾಂತರ ಪ್ರಮಾದ ಮತ್ತು ವಿರೋಧದ ಒತ್ತಡದಿಂದ ಸಿಎಂ ಸಿದ್ದರಾಮಯ್ಯ ಮರುಪರೀಕ್ಷೆಗೆ ಸೂಚಿಸಿದ್ದಾರೆ. ಇನ್ನು ರಾಜ್ಯದ ಯುವಜನತೆಯ ಬಗ್ಗೆ ಕಾಳಜಿ ಇದ್ದರೆ ಕನಿಷ್ಠ ನಾಲ್ಕು ತಿಂಗಳಾದರೂ ತಯಾರಿಗೆ ಅವಕಾಶ ನೀಡಬೇಕು. ಸಿದ್ಧತೆಗೆ ಸಮಯ ನೀಡುವುದರಲ್ಲಿ ತಪ್ಪೇನಿಲ್ಲ ಎಂದು ಚಂದ್ರಾ ಲೇಔಟ್‌ನ ಪ್ರತಿಷ್ಠಿತ ಸಂಸ್ಥೆಯೊಂದರ ಕೆಪಿಎಸ್‌ಸಿ ಆಕಾಂಕ್ಷಿಯೊಬ್ಬರು ಹೇಳಿದ್ದಾರೆ.
ಮತ್ತೊಬ್ಬ ಆಕಾಂಕ್ಷಿ ವಿನೋದ್ ಎಂಎಸ್ ಕೂಡ ಇದೇ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಆಕಾಂಕ್ಷಿಗಳು ಮಾತ್ರವಲ್ಲ, ಅವರ ಕುಟುಂಬಗಳು ಸಹ ಸರ್ಕಾರದ ಕೆಟ್ಟ ನಡೆಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತವೆ ಎಂದು ಹೇಳಿದರು. ಆಕಾಂಕ್ಷಿಗಳು ಮತ್ತು ಅವರ ಕುಟುಂಬಗಳನ್ನು ಒಟ್ಟುಗೂಡಿಸಿದರೆ ಸುಮಾರು 50 ರಿಂದ 60 ಲಕ್ಷ ಮತದಾರ ಜನಸಂಖ್ಯೆ ಇರುತ್ತದೆ. ಅವರು ಅಚಲ ನಿರ್ಧಾರ ಕೈಗೊಂಡರೆ ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ಬರುವುದು ಅಸಾಧ್ಯ ಎಂದು ಹೇಳಿದರು.
ಪ್ರಶ್ನೆಪತ್ರಿಕೆಯನ್ನು ಹೊಂದಿಸುವುದರ ಹಿಂದೆ ಬಹಳಷ್ಟು ಸಂಶೋಧನೆಗಳು ನಡೆಯುತ್ತವೆ. ಸಮಯ ತೆಗೆದುಕೊಳ್ಳುತ್ತದೆ. ತರಾತುರಿಯಲ್ಲಿ ಮತ್ತು ಎರಡು ತಿಂಗಳೊಳಗೆ ಪರೀಕ್ಷೆಗಳನ್ನು ನಡೆಸುವುದು ಪರೀಕ್ಷೆಯ ಗುಣಮಟ್ಟದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅನುಮಾನ ಉಂಟುಮಾಡುತ್ತದೆ. ಅಲ್ಲದೆ ಆತಂಕವನ್ನು ಉಂಟುಮಾಡುತ್ತದೆ. ಇನ್ನು ಕನ್ನಡದ ಹಿನ್ನೆಲೆಯ ವಿದ್ಯಾರ್ಥಿಗಳ ಮನೋಸ್ಥೈರ್ಯವನ್ನು ಕುಗ್ಗಿಸುತ್ತದೆ. ಹೀಗಾಗಿ ಕೆಪಿಎಸ್‌ಸಿಯನ್ನು ಸುಧಾರಿಸುವ ಅಭಿಯಾನವನ್ನು ನಡೆಸುವುದಾಗಿ ಮತ್ತು ಕೇಂದ್ರ ಲೋಕಸೇವಾ ಆಯೋಗದಂತೆ ಅಧಿಸೂಚನೆ, ಪರೀಕ್ಷಾ ದಿನಾಂಕ, ಸಂದರ್ಶನ ಮತ್ತು ಇತರ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಮುಂಚಿತವಾಗಿ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುವುದಾಗಿ ವಿನಯ್ ಕುಮಾರ್ ಹೇಳಿದರು.
ಸರ್ಕಾರ ಈಗಾಗಲೇ ತರಾತುರಿಯಲ್ಲಿ ಪರೀಕ್ಷೆ ನಡೆಸುವ ಮೂಲಕ ಸಮಯ ವ್ಯರ್ಥ ಮಾಡಿದೆ ಎಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘದ ಕಾಂತಕುಮಾರ್ ಅಭಿಪ್ರಾಯಪಟ್ಟಿದ್ದಾರೆ. KSPC ಅಂತಹ ಪರೀಕ್ಷೆಗಳು ಭಾನುವಾರದಂದು ನಡೆಯುತ್ತವೆ. ಆದರೆ ಮುಂದಿನ ಮೂರು ತಿಂಗಳವರೆಗೆ, ಬಹುತೇಕ ಎಲ್ಲಾ ಭಾನುವಾರಗಳು ಇತರ ಸರ್ಕಾರಿ ಪರೀಕ್ಷೆಗಳು ನಡೆಯುತ್ತಿರುತ್ತವೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಜನರು ಸರ್ಕಾರದ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಅವರಿಗೆ ಉತ್ತಮ ತರಬೇತಿ ನೀಡಿದರೆ, ಅವರು ಅದನ್ನು ಮಾಡಬಹುದು. ಪ್ರತಿ ಅಭ್ಯರ್ಥಿಯು ದಿನಕ್ಕೆ ಕನಿಷ್ಠ 15 ಗಂಟೆಗಳ ತಯಾರಿ ನಡೆಸುತ್ತಾರೆ. ಸರ್ಕಾರವು ನಾಲ್ಕು ತಿಂಗಳ ಕಾಲಾವಕಾಶ ನೀಡಬೇಕು ಎಂದು ಕಾಂತ ಕುಮಾರ್ ಹೇಳಿದರು.
Advertisement