
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚುತ್ತಿದ್ದು, ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ತೀವ್ರ ರೀತಿಯ ಕೆಟ್ಟ ಪರಿಣಾಮವನ್ನುಂಟು ಮಾಡುತ್ತಿದೆ.
ಆಧುನಿಕ ಒತ್ತಡದ ಬದುಕಿನಲ್ಲಿ ಕೆಲವು ಪೋಷಕರು ಬಾಟಲಿ ಹಾಲು, ಜಂಕ್ ಫುಡ್ ಮೊರೆ ಹೋಗಿದ್ದು, ಮಕ್ಕಳಲ್ಲಿ ನಾನಾ ರೀತಿಯ ಅನಾರೋಗ್ಯಕ್ಕೂ ಕಾರಣವಾಗುತ್ತಿದೆ. ಹೀಗಾಗಿ ಮಕ್ಕಳ ಸುರಕ್ಷತೆ, ಆರೈಕೆ ಕುರಿತು ನಗರದ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್ ನ BGS GIMS (BGS Global Institute of Medical Sciences) ಆಸ್ಪತ್ರೆಯ ಮಕ್ಕಳ ವಿಭಾಗದ ತಜ್ಞ ವೈದ್ಯರು ಅರ್ಥಪೂರ್ಣ ರೀಲ್ಸ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. 'ಈ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿದೆ.
ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ 'ರೀಲ್ಸ್ ಸ್ಪರ್ಧೆಯಲ್ಲಿ ತಮಿಳು ಸಾಂಗ್ ವೊಂದಕ್ಕೆ ರೀಲ್ಸ್ ಮಾಡಿರುವ ವೈದ್ಯರು, ಮಕ್ಕಳು ಮೊಬೈಲ್ ಗೀಳು ಅಂಟಿಸಿಕೊಳ್ಳದೆ, ಚಿತ್ರಕಲೆ, ಹಾಡು ಕೇಳುವಂತಹ ಹವ್ಯಾಸ ರೂಡಿಸುವಂತೆ, ಜಂಕ್ ಫುಡ್ ಬದಲಿಗೆ ಪೌಷ್ಟಿಕಯುಕ್ತ ಬಾಳೇ ಹಣ್ಣು ಸೇವಿಸುವಂತೆ, ಬಾಟಲಿ ಹಾಲು ಬದಲಿಗೆ ಎದೆ ಹಾಲು, ಕೂಕ್ ಬದಲಿಗೆ ಒಆರ್ ಎಸ್ ಪಾನೀಯದಂತಹ ಆರೋಗ್ಯಯುತ ಚಟುವಟಿಕೆ ಕೈಗೊಳ್ಳುವಂತೆ ಮನಮೋಹಕ ಅಭಿನಯದ ಮೂಲಕ ಜನರಲ್ಲಿ ಅರಿವು ಮೂಡಿಸಿದ್ದಾರೆ.
ಪೆಡಿಯಾಟ್ರಿಕ್ ವಿಭಾಗದ ಮುಖ್ಯಸ್ಥರಾದ ಡಾ. ರಮೇಶ್ ಹಾಗೂ ಯೂನಿಟ್ 2 ಮುಖ್ಯಸ್ಥರಾದ ಡಾ. ಪೂರ್ಣಿಮಾ, ಡಾ.ರೋಹಿತ್, ಡಾ.ವಿನೋದ್, ಡಾ. ನಾಗಜ್ಯೋತಿ, ಡಾ.ಚಿರಂತ್, ಡಾ. ಧನುಷ್, ಡಾ. ಮಧು ಕಿರಣ್,ಡಾ. ಅಶಿಶ್ ರೀಲ್ಸ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆಧುನಿಕ ಜಂಜಾಟದ ಬದುಕಿನಲ್ಲಿ ಮಕ್ಕಳ ಸುರಕ್ಷತೆ, ಆರೈಕೆ ನಿಟ್ಟಿನಲ್ಲಿ ಇದೊಂದು ಅತ್ಯುತ್ತಮ ವಿಭಿನ್ನ ಪ್ರಯತ್ನವಾಗಿದೆ.
Advertisement