ಮೈಸೂರು: ಕಲುಷಿತ ನೀರು ಸೇವಿಸಿ ಓರ್ವ ಸಾವು; ವಾಂತಿ ಭೇದಿಯಿಂದ 12 ಮಂದಿ ಅಸ್ವಸ್ಥ

ಗ್ರಾಮದ ಟ್ಯಾಂಕ್‌ನಿಂದ ಸರಬರಾಜಾಗಿದ್ದ ನೀರನ್ನು ಸೇವಿಸಿ ಕೆಲವರಿಗೆ ವಾಂತಿ ಭೇದಿ ಆಗಿದೆ ಎಂದು ಶಂಕಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೈಸೂರು: ಕಲುಷಿತ ನೀರು ಸೇವನೆಯಿಂದ ಓರ್ವ ಸಾವನ್ನಪ್ಪಿದ್ದು, 12 ಜನ ವಾಂತಿಭೇದಿಯಿಂದ ಅಸ್ವಸ್ಥಗೊಂಡಿರುವ ಘಟನೆ ಸಾಲಿಗ್ರಾಮ ತಾಲೂಕಿನ ಗಡಿ ಗ್ರಾಮ ಬೆಟ್ಟಹಳ್ಳಿಯಲ್ಲಿ ನಡೆದಿದೆ.

ಗೋವಿಂದೇಗೌಡ (65) ಸಾವಿಗೀಡಾದ ವ್ಯಕ್ತಿ. ಗ್ರಾಮದ ಟ್ಯಾಂಕ್‌ನಿಂದ ಸರಬರಾಜಾಗಿದ್ದ ನೀರನ್ನು ಸೇವಿಸಿ ಕೆಲವರಿಗೆ ವಾಂತಿ ಭೇದಿ ಆಗಿದೆ ಎಂದು ಶಂಕಿಸಲಾಗಿದೆ. ಅಸ್ವಸ್ಥರನ್ನು ತಕ್ಷಣವೇ ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಗೋವಿಂದೇಗೌಡ ಎಂಬುವವರು ತೀವ್ರ ಅಸ್ವಸ್ಥಗೊಂಡ ಹಿನ್ನೆಲೆ ಹಾಸನ ಜಿಲ್ಲೆಯ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ತಾಲೂಕು ಆಸ್ಪತ್ರೆಯ ವೈದ್ಯರು ಬೆಟ್ಟಹಳ್ಳಿ ಗ್ರಾಮಕ್ಕೆ ಭೇಟಿ ಜನರ ಆರೋಗ್ಯ ಪರೀಕ್ಷೆ ನಡೆಸಿದರು.

ಸಾಂದರ್ಭಿಕ ಚಿತ್ರ
ಮಹಾರಾಷ್ಟ್ರ: ಕಲುಷಿತ ನೀರು ಸೇವಿಸಿ 90ಕ್ಕೂ ಹೆಚ್ಚು ಮಂದಿ ಅಸ್ವಸ್ಥ!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com