ವಿಜಯಪುರ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಶಿರನಾಳ್ ಆರೋಗ್ಯ ಕೇಂದ್ರದಲ್ಲಿ ಮದ್ಯ ಸೇವಿಸಿ ಆಸ್ಪತ್ರೆಗೆ ಆಗಮಿಸಿ ಅವಾಂತರ ಸೃಷ್ಟಿಸಿದ್ದ ವೈದ್ಯ ನಾರಾಯಣ ರಾಥೋಡ್ ಆಯುಷ್ ವೈದ್ಯನಲ್ಲ, ಆತ ಆರೋಗ್ಯ ನಿರೀಕ್ಷಣಾಧಿಕಾರಿ ಎಂದು ಆಯುಷ್ ಇಲಾಖೆ ಸ್ಪಷ್ಟಪಡಿಸಿದೆ.
ನಾರಾಯಣ ರಾಠೋಡ ಕುಡಿದ ಮತ್ತಿನಲ್ಲಿ ದಾಂಧಲೆ ನಡೆಸಿದ್ದು, ಆಸ್ಪತ್ರೆಯ ಕಿಟಕಿಗಳನ್ನು ಒಡೆದು, ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಅಪಾರ ಆಸ್ತಿಪಾಸ್ತಿ ಹಾನಿ ಮಾಡಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ನಾರಾಯಣ ರಾಥೋಡ್ ರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಅಮಾನತ್ತುಗೊಳಿಸಿದ್ದಾರೆ.
ಇಂತಹ ಘಟನೆಗಳು ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕರ್ತವ್ಯದ ವೇಳೆ ಮದ್ಯ ಸೇವಿಸಿ ನಾರಾಯಣ ಗಲಾಟೆ ಮಾಡಿದ್ದರು. ಆತನ ಮೇಲೆ ಮಹಿಳಾ ರೋಗಿಗಳಿಗೆ ಮೌಖಿಕವಾಗಿ ನಿಂದಿಸಿದ ಮಾಡಿದ ಆರೋಪಗಳಿವೆ. ಇತ್ತೀಚಿನ ಘಟನೆಯ ನಂತರ, ಡಾ. ರಾಥೋಡ್ ರನ್ನು ಅಮಾನತುಗೊಳಿಸುವಂತೆ ಸಾರ್ವಜನಿಕರಿಂದ ಮತ್ತು ಆಸ್ಪತ್ರೆಯ ಸಿಬ್ಬಂದಿಯಿಂದ ಒತ್ತಾಯ ಹೆಚ್ಚಾಗಿತ್ತು.
Advertisement