
ಬೆಂಗಳೂರು: ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಇಲ್ಲಿನ ಶ್ರೀ ಶಿವಪುತ್ರ ಗೆಳೆಯರ ಬಳಗದ ವತಿಯಿಂದ ಏರ್ಪಡಿಸಲಾಗಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಯಲಹಂಕ ಉಪನಗರದ ಸೋಮೇಶ್ವರ ನಗರದಲ್ಲಿರುವ ಈ ಬಳಗವು 3ನೇ ವರ್ಷಗಳಿಂದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದೆ.
ಯಲಹಂಕ ವಾರ್ಡ್ ನಂ.4ರ ಮಾಜಿ ಕಾರ್ಪೊರೇಟರ್ ಎಂ.ಸತೀಶ್ ಸಹ ಗಣೇಶೋತ್ಸವದಲ್ಲಿ ಪಾಲ್ಗೊಂಡಿದ್ದರು.
Advertisement