
ಚಿಕ್ಕಮಗಳೂರು: ಅಕ್ರಮವಾಗಿ ಖರೀದಿಸಿದ್ದ 32 ಎಕರೆ ಜಮೀನನ್ನು ವಶಕ್ಕೆ ಪಡೆಯುವ ಮೂಲಕ ಕಾಂಗ್ರೆಸ್‌ನ ಮಾಜಿ ಸಚಿವ ಸಗೀರ್ ಅಹ್ಮದ್ ಕುಟುಂಬಕ್ಕೆ ಸರ್ಕಾರ ಬಿಗ್ ಶಾಕ್ ನೀಡಿದೆ.
ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲಿನ ಶೋಲಾ ಅರಣ್ಯದಲ್ಲಿ ಸಗೀರ್ ಅಹ್ಮದ್ ಪತ್ನಿ ಫಾತಿಮಾಭಿ ಹೆಸರನಲ್ಲಿದ್ದ 32.21 ಎಕರೆ ಭೂಮಿಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು, ಆಸ್ತಿಯ ಮೇಲಿದ್ದ ಸಗೀರ್ ಕುಟುಂಬದ ಹಕ್ಕನ್ನು ರದ್ದುಪಡಿಸಿ, ಸರ್ಕಾರಿ ಜಮೀನು ಎಂದು ಆದೇಶ ಹೊರಡಿಸಿದ್ದಾರೆ.
ಇನಾಂ ದತ್ತಾತ್ರೇಯ ಪೀಠ ಗ್ರಾಮದ ಸರ್ವೆ ನಂಬರ್ 5ರಲ್ಲಿ ಫಾತಿಮಾಭಿ ಅವರ ಹೆಸರಿನಲ್ಲಿದ್ದ ಬಂಡಿದಾರಿ, ಕಾಲುದಾರಿ ಮೇಲಿನ ಹಕ್ಕನ್ನು ಜಿಲ್ಲಾಡಳಿತ ರದ್ದು ಮಾಡಿದೆ. ಈ ಜಮೀನು ಬೇರೆಯವರಿಗೆ ಮಂಜೂರಾಗಿತ್ತು. ಆದರೆ 1978ರಲ್ಲಿ ಸಗೀರ್ ತಮ್ಮ ಪತ್ನಿ ಫಾತಿಮಾಭಿ ಹೆಸರಿನಲ್ಲಿ ಅಕ್ರಮವಾಗಿ ಖರೀದಿಸಲಾದ್ದರು. ಆದರೆ ಈ ಮಂಜೂರಾತಿಯೇ ಅಕ್ರಮ ಎಂದು ಜಿಲ್ಲಾಡಳಿತ ಘೋಷಿಸಿದೆ. ಅಲ್ಲದೆ ಭೂಮಿ ವಶಪಡಿಸಿಕೊಂಡಿರುವುದಾಗಿ ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದ ಬಳಿಯಿರುವ ಸಗೀರ್ ಅಹ್ಮದ್ ಮನೆಯ ಬಾಗಿಲಿಗೆ ಜಿಲ್ಲಾಡಳಿತ ನೋಟಿಸ್ ಅಂಟಿಸಿದೆ.
Advertisement