ಚಿತ್ರದುರ್ಗ: ಈದ್ ಮಿಲಾದ್ ಮೆರವಣಿಗೆ ವೇಳೆ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಕೆಲವರು ಪ್ಯಾಲೆಸ್ತೇನ್ ಪರವಾಗಿ ಘೋಷಣೆಗಳನ್ನು ಕೂಗಿ ಪ್ಯಾಲೆಸ್ತೇನ್ ಧ್ವಜಗಳನ್ನು ಹಾರಿಸಿದ ಘಟನೆ ಚಿತ್ರದುರ್ಗದಲ್ಲಿ ವರದಿಯಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಧ್ವಜಗಳನ್ನು ವಶಕ್ಕೆ ಪಡೆದಿದ್ದು ಮಾತ್ರವಲ್ಲದೇ, ಸಂಭಾವ್ಯ ಘರ್ಷಣೆಯೊಂದನ್ನು ತಡೆದಿದ್ದಾರೆ.
ಗಾಂಧಿ ವೃತ್ತದಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಮೆರವಣಿಗೆ ಸಾಗುತ್ತಿದ್ದಾಗ ಗುಂಪಿನಲ್ಲಿದ್ದ ಕೆಲವರು ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿ ಧ್ವಜಗಳನ್ನು ಬೀಸಲು ಪ್ರಾರಂಭಿಸಿದರು.
ಮೆರವಣಿಗೆಯ ಕಾವಲು ಕಾಯುತ್ತಿದ್ದ ಪೊಲೀಸರು ತಕ್ಷಣವೇ ಧ್ವಜಗಳನ್ನು ಕಸಿದುಕೊಂಡರು, ತಕ್ಷಣವೇ ಯುವಕರು ಪ್ಯಾಲೆಸ್ತೀನ್ ಪರವಾಗಿ ಧ್ವನಿ ಎತ್ತಿದರು.
ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾಧ್ಯಮಗಳಿಗೆ ಹೇಳಿಕೆ ನೀಡಿ, "ಗಾಂಧಿ ವೃತ್ತದಲ್ಲಿ ಕೆಲವು ಯುವಕರು ಪ್ಯಾಲೆಸ್ತೀನ್ ಧ್ವಜವನ್ನು ಹೊಂದಿದ್ದು, ಅದನ್ನು ನಮ್ಮವರು ವಶಪಡಿಸಿಕೊಂಡಾಗ, ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಮಾಡಲಾಗಿದ್ದು, ಪ್ರಕರಣ ದಾಖಲಿಸಿ ವಿವರಗಳನ್ನು ಹಂಚಿಕೊಳ್ಳಲಾಗುವುದು" ಎಂದು ಹೇಳಿದ್ದಾರೆ.
Advertisement