
ಬೆಂಗಳೂರು: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ನೀಡಿದ್ದ ಹೇಳಿಕೆಯ ವಿಷಯವಾಗಿ ಬಿಜೆಪಿ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾಂಗ್ರೆಸ್ ಡಿಜಿಪಿಗೆ ದೂರು ನೀಡಿದೆ. ಪಾಟೀಲ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಅಮೇರಿಕಾಗೆ ಭೇಟಿ ನೀಡಿದ್ದ ವೇಳೆ ರಾಹುಲ್ ಗಾಂಧಿ ಜಾತಿಯ ಕುರಿತು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಖಂಡಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್, "ತಾನು ಯಾವ ಜಾತಿಯಲ್ಲಿ ಹುಟ್ಟಿದ್ದೇನೆ ಎಂಬುದು ರಾಹುಲ್ ಗಾಂಧಿಗೆ ಗೊತ್ತಿಲ್ಲ. ಮುಸಲ್ನಾಮರಿಗೆ ಹುಟ್ಟಿದ್ದಾನೋ? ಕ್ರೈಸ್ತರಿಗೆ ಹುಟ್ಟಿದ್ದಾನೋ ತನಿಖೆ ಆಗಬೇಕಿದೆ" ಎಂದು ಹೇಳಿಕೆ ನೀಡಿದ್ದರು.
"ರಾಹುಲ್ ಗಾಂಧಿ ಇಂದು ಅಮೇರಿಕಾ ಪ್ರವಾಸ ಕೈಗೊಂಡು ದೇಶವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಅವರು ಯಾವ ಜಾತಿಯಲ್ಲಿ ಜನಿಸಿದರು ಎಂಬುದು ಅವರಿಗೇ ತಿಳಿದಿಲ್ಲ, ಆದರೆ ಅವರು ಜಾತಿ ಸಮೀಕ್ಷೆಯನ್ನು ಕೈಗೊಳ್ಳಲು ಬಯಸುತ್ತಾರೆ" ಎಂದು ಯತ್ನಾಳ್ ಹೇಳಿದ್ದರು. ರಾಹುಲ್ ಗಾಂಧಿ ಅಮೇರಿಕಾ ಪ್ರವಾಸದ ಬಗ್ಗೆ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ನ ಮೊಹಬ್ಬತ್ ಕಿ ದುಕಾನ್ ಎಂಬ ಸೋಗಿನ ಮುಖವಾಡ ಬಯಲಾಗಿದೆ ಎಂದು ಹೇಳಿದ್ದರು.
ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂ ಶೋಷಣೆಯ ಬಗ್ಗೆ ಕಾನೂನುಬದ್ಧ ಪ್ರಶ್ನೆಗಳನ್ನು ಮೌನಗೊಳಿಸುವ ಅವರ ಪ್ರಯತ್ನವು ಅವರ ಬೂಟಾಟಿಕೆಯನ್ನು ಬಹಿರಂಗಪಡಿಸುತ್ತದೆ. ಅವರು ಇತರರನ್ನು ಪತ್ರಿಕಾ ಸ್ವಾತಂತ್ರ್ಯವನ್ನು ನಿಗ್ರಹಿಸುತ್ತಿದ್ದಾರೆಂದು ಆರೋಪಿಸುತ್ತಾರೆ, ಅವರ ಸ್ವಂತ ಕ್ರಮಗಳು ಅವರ ಹೇಳಿಕೆಗಳಿಗೆ ತದ್ವಿರುದ್ಧವಾಗಿದೆ.
ಅವರು ಎಂದಾದರೂ ಅಧಿಕಾರಕ್ಕೆ ಬಂದರೆ ಅವರ ಸರ್ವಾಧಿಕಾರವನ್ನು ಊಹಿಸಿ - ತುರ್ತು ಪರಿಸ್ಥಿತಿಯ ಪ್ರತಿಧ್ವನಿಗಳು ತಪ್ಪಾಗಲಾರವು. ಕಾಂಗ್ರೆಸ್ ಹೈಕಮಾಂಡ್ ಅಂತಹ ಮೌಲ್ಯಗಳನ್ನು ಬೋಧಿಸುವಾಗ, ಕರ್ನಾಟಕದಲ್ಲಿ ಅವರ ಆಡಳಿತವು ಈ ಅಪಾಯಕಾರಿ ವಿಧಾನವನ್ನು ಪ್ರತಿಬಿಂಬಿಸುವುದರಲ್ಲಿ ಆಶ್ಚರ್ಯವಿಲ್ಲ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
Advertisement