ದಾವಣಗೆರೆ ಗಣೇಶ ವಿಸರ್ಜನೆ ಗಲಾಟೆ: ಖಾಕಿಪಡೆ ಶ್ರಮದಿಂದ ಸಹಜ ಸ್ಥಿತಿಗೆ ಮರಳಿದ ಬೆಣ್ಣೆನಗರಿ

ಹಳೆ ದಾವಣಗೆರೆಯ ಬೇತೂರು ರಸ್ತೆ ಹಾಗೂ ಅರಳಿಮರದ ವೃತ್ತದಲ್ಲಿ ಗುರುವಾರ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು
ಸಹಜ ಸ್ಥಿತಿಗೆ ಮರಳಿದ ದಾವಣಗೆರೆ
ಸಹಜ ಸ್ಥಿತಿಗೆ ಮರಳಿದ ದಾವಣಗೆರೆ
Updated on

ದಾವಣಗೆರೆ: ಗುರುವಾರ ರಾತ್ರಿ ಕೆಲಕಾಲ ಉದ್ವಿಗ್ನಗೊಂಡಿದ್ದ ನಗರ ಪೊಲೀಸರ ಸಕಾಲಿಕ ಕ್ರಮದಿಂದ ಸಹಜ ಸ್ಥಿತಿಗೆ ಮರಳಿದೆ. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಯಾವುದೇ ಸಮಸ್ಯೆಗೆ ಅವಕಾಶ ಕೊಡದೆ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಹೀಗಾಗಿ ಬೆಣ್ಣೆನಗರಿ ದಾವಣಗೆರೆ ಸಹಜ ಸ್ಥಿತಿಗೆ ಮರಳಿದೆ.

ಶಿವಮೊಗ್ಗ ಮತ್ತು ಹಾವೇರಿಯ 15 ಕೆಎಸ್‌ಆರ್‌ಪಿ ತುಕಡಿಗಳು, 8 ಜಿಲ್ಲಾ ಸಶಸ್ತ್ರ ಮೀಸಲು (ಡಿಎಆರ್) ತುಕಡಿಗಳನ್ನು ನಿಯೋಜಿಸಲಾಗಿತ್ತು. ಸ್ಥಳೀಯ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಲ್ಲದೆ, ಶಾಂತಿ ಕಾಪಾಡಿದ್ದಾರೆ.

ದಾವಣಗೆರೆ ನಗರದಲ್ಲಿ ಶಾಂತಿ ನೆಲೆಸುವಲ್ಲಿ ಪೊಲೀಸರ ಕಾರ್ಯವೈಖರಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಹಳೆ ದಾವಣಗೆರೆಯ ಬೇತೂರು ರಸ್ತೆ ಹಾಗೂ ಅರಳಿಮರದ ವೃತ್ತದಲ್ಲಿ ಗುರುವಾರ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಗಣೇಶ ಮೂರ್ತಿಯನ್ನು ಸುಗಮವಾಗಿ ವಿಸರ್ಜನೆ ಮಾಡುವಂತೆ ನೋಡಿಕೊಂಡರು.

ದಾವಣಗೆರೆ ವೆಂಕಾ ಭೋವಿ ಕಾಲೋನಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ನಿಮಜ್ಜನ ಮೆರವಣಿಗೆ ಮೇಲೆ ಗುರುವಾರ ಕಲ್ಲು ತೂರಾಟ ನಡೆದಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಸಮಾಜದಲ್ಲಿ ಶಾಂತಿ ನೆಲೆಸಲು ಸಹಕರಿಸಿದ ನನ್ನ ಸಿಬ್ಬಂದಿ, ಇಲಾಖೆಯ ಉನ್ನತಾಧಿಕಾರಿಗಳು, ಕೆಎಸ್‌ಆರ್‌ಪಿ ತುಕಡಿ, ಡಿಎಆರ್ ತುಕಡಿಗಳು ಹಾಗೂ ಸಾರ್ವಜನಿಕರಿಗೆ ಎಸ್‌ಪಿ ಉಮಾ ಪ್ರಶಾಂತ್ ಧನ್ಯವಾದ ತಿಳಿಸಿದ್ದಾರೆ.

ಸಹಜ ಸ್ಥಿತಿಗೆ ಮರಳಿದ ದಾವಣಗೆರೆ
ದಾವಣಗೆರೆ: ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ; ಪರಿಸ್ಥಿತಿ ಉದ್ವಿಗ್ನ, ಪೊಲೀಸ್ ಸಿಬ್ಬಂದಿಗೂ ಗಾಯ

ನಾವು ಹೆದರಿ ಶುಕ್ರವಾರ ಮಕ್ಕಳನ್ನು ಶಾಲೆಗೆ ಕಳುಹಿಸಲಿಲ್ಲ. ಜೊತೆಗೆ ನಾವು ಮನೆಯಿಂದ ಹೊರಗೆ ಬರಲಿಲ್ಲ, ಆದಾಗ್ಯೂ, ಪೊಲೀಸರ ಕ್ಷಿಪ್ರ ಕ್ರಮವು ನಮಗೆ ಯಾವುದೇ ತೊಂದರೆಯಿಲ್ಲದೆ ದೈನಂದಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಹಾಯವಾಯಿತು. ನಮ್ಮ ಮಕ್ಕಳೂ ನಂತರ ಶಾಲೆಗಳಿಗೆ ಹೋದರು ಎಂದು ಬೇತೂರು ರಸ್ತೆಯ ಗೃಹಿಣಿ ಕಮಲಮ್ಮ ಹೇಳಿದ್ದಾರೆ.

ನನ್ನ ಕುಟುಂಬವು ಹಣ್ಣುಗಳ ಮಾರಾಟದಿಂದ ಬರುವ ಆದಾಯವನ್ನು ಅವಲಂಬಿಸಿದೆ. ಸಕಾಲಿಕ ಕ್ರಮದಿಂದ ದಾವಣಗೆರೆಯನ್ನು ಶಾಂತಿಯುತಗೊಳಿಸಿದ ಪೊಲೀಸರಿಗೆ ಧನ್ಯವಾದಗಳು ಎಂದು ಪಿಬಿ ರಸ್ತೆಯಲ್ಲಿರುವ 50 ವರ್ಷದ ಹಣ್ಣು ಮಾರಾಟಗಾರ ಸಲೀಂ ಅಹ್ಮದ್ ಪೊಲೀಸರಿಗೆ ಅಭಿನಂದನೆ ತಿಳಿಸಿದ್ದಾರೆ. ಸತೀಶ್ ಪೂಜಾರಿ ಅವರ ಪ್ರಚೋದನಕಾರಿ ಭಾಷಣದ ನಂತರ ಸಮಸ್ಯೆ ಪ್ರಾರಂಭವಾಯಿತು, ಬೇತೂರು ರಸ್ತೆಯಲ್ಲಿರುವ ಗಣೇಶ ಮೂರ್ತಿಯನ್ನು ತರುವಂತೆ ಹಿಂದೂಗಳಿಗೆ ಸವಾಲು ಹಾಕಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com