ಮಾಜಿ ಸಂಸದ ಪ್ರತಾಪ್ ಸಿಂಹ
ಮಾಜಿ ಸಂಸದ ಪ್ರತಾಪ್ ಸಿಂಹ

ಈ ಸರ್ಕಾರ ನಿಮ್ಮ ರಕ್ಷಣೆ ಮಾಡುವುದಿಲ್ಲ, ಮೆರವಣಿಗೆ ಹೋಗುವಾಗ ಮುಸ್ಲಿಮರಂತೆಯೇ ನೀವು ಸನ್ನದ್ಧರಾಗಿ ಹೋಗಿ: ಪ್ರತಾಪ್ ಸಿಂಹ ಸಲಹೆ

ಮುಸ್ಲಿಮರು ಸಾಕಷ್ಟು ಪ್ರಚೋದನಾಕಾರಿ ಹೇಳಿಕೆ ನೀಡಿದರೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಅವರು ಆರೋಪಿಸಿದರು.
Published on

ಯಾದಗಿರಿ: ಈ ಸರ್ಕಾರ ನಿಮ್ಮನ್ನು ರಕ್ಷಣೆ ಮಾಡುವುದಿಲ್ಲ. ನಾನು ಹಿಂದೂಗಳಿಗೆ ಎಚ್ಚರಿಕೆ ಹಾಗೂ ಸಲಹೆ ಕೊಡುತ್ತೇನೆ. ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಮುಸ್ಲಿಮರು ಯಾವ ರೀತಿ ಪೆಟ್ರೋಲ್ ಬಾಂಬ್, ತಲವಾರ್‌ ತೋರಿಸುತ್ತಾರೆ. ಕಲ್ಲು ತೂರಾಟ ಮಾಡುತ್ತಾರೆ. ನೀವು ಕೂಡಾ ಸನ್ನದ್ಧರಾಗಿ ಮೆರವಣಿಗೆ ಹೋಗಿ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಶಹಾಪುರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲಿನಿಂದಲೂ ಮುಸ್ಲಿಮರನ್ನು ಓಲೈಕೆ ಮಾಡಿಕೊಂಡು ಬಂದಿದ್ದಾರೆ. ಹಿಂದೂಗಳ ಬಗ್ಗೆ ಅಸಹನೆ ಇಟ್ಟುಕೊಂಡಿದ್ದಾರೆ. ಹಿಂದೂಗಳು ನಿಮಗೆ ಓಟು ಹಾಕಿಲ್ವ?. ವೀರಶೈವ ಸಮಾಜಕ್ಕೆ ಸೇರಿದ 35 ಶಾಸಕರು ನಿಮ್ಮ ಬೆಂಬಲಕ್ಕೆ ಇದ್ದಾರೆ. ಮಾತೆತ್ತಿದರೆ ಹಿಂದುಳಿದವರ ಬಗ್ಗೆ ಭಾಷಣ ಹೊಡೆಯುತ್ತೀರಿ ಹಿಂದುಳಿದ ವರ್ಗದ ಬಗ್ಗೆ ನಿರ್ದಯದ ಭಾವನೆ ಏಕೆ’ ಎಂದು ಪ್ರಶ್ನಿಸಿದ್ದಾರೆ. ಗಣೇಶ ಉತ್ಸವಕ್ಕೆ ನಿರ್ಬಂಧ ಹಾಕುತ್ತೀದ್ದಿರಿ. ಬೆಂಗಳೂರು, ತುಮಕೂರು ಕಲ್ಲು ತೂರಾಟ ಆಗುತ್ತದೆ. ಹಿಂದೂ ಕಾರ್ಯಕರ್ತರು ಎಲ್ಲಾದರೂ ಹೋದರೆ ಮತ್ತು ಹಿಂದೂಪರ ಧ್ವನಿ ಎತ್ತುವರು ಹೋದರೆ ನೀವು ಬ್ಯಾನ್ ಮಾಡಿಬಿಟ್ಟಿವಿ ಅಂತ ಹೇಳಿ ಪೊಲೀಸರನ್ನು ಕರೆದು ಜಿಲ್ಲೆಯಿಂದ ಹೊರ ಹಾಕುವ ಪ್ರವೃತ್ತಿ ಮಾಡುತ್ತಿದ್ದಿರಿ’ ಎಂದು ಶಹಾಪುರಕ್ಕೆ ನಿರ್ಬಂಧ ಹಾಕಿದ ಕ್ರಮ ಬಗ್ಗೆ ಅವರು ಕಿಡಿಕಾರಿದರು.

ಮುಸ್ಲಿಮರು ಸಾಕಷ್ಟು ಪ್ರಚೋದನಾಕಾರಿ ಹೇಳಿಕೆ ನೀಡಿದರೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಅವರು ಆರೋಪಿಸಿದರು. ನಾಗಮಂಗಲದಲ್ಲಿ ಒಂದು ವಾರದ ಹಿಂದೆ ನಡೆದ ಘಟನೆ ನೋಡಿದರೆ ರಾಜ್ಯ ಸರ್ಕಾರಕ್ಕೆ ಗಣೇಶ ಮೆರವಣಿಗೆ, ಹಿಂದೂಗಳ ಹಬ್ಬ ಹರಿದಿನ ನಡೆಯುವುದು ಇಷ್ಟವಿಲ್ಲ ಎಂಬ ಸಂದೇಶವನ್ನ ನಾಗಮಂಗಲ ಘಟನೆ ‌ಮೂಲಕ ಹೊರ ಹಾಕಿದೆ. ಕಳೆದ ವರ್ಷ ನಾಗಮಂಗಲದ ಮೈಸೂರು ರಸ್ತೆ ಬಳಿ ದರ್ಗಾ ಎದುರು ಗಲಾಟೆ ಆಗಿತ್ತು. ಅನಗತ್ಯವಾಗಿ ಮುಸಲ್ಮಾನರು ಕಲ್ಲು ತೂರಾಟ ಮಾಡಿದ್ದರು. ಈ ವರ್ಷ ಅದೇ ರಸ್ತೆಯಲ್ಲಿ ಗಣೇಶ ಮೆರವಣಿಗೆ ಹೋಗುತ್ತದೆ ಎಂದು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಬೇಕಿತ್ತು. ಆದ್ರೆ, ಅದೇ ರಸ್ತೆಯಲ್ಲಿ ಈ ಬಾರಿ ಮೆರವಣಿಗೆ ಹೋಗಬೇಕಾದರೆ ಕಲ್ಲು ತೂರಾಟ ಮಾತ್ರವಲ್ಲ, ಪೆಟ್ರೋಲ್ ಬಾಂಬ್ ಹಾಕಿ ಕಲ್ಲು, ಚಪ್ಪಲಿ ಬಿಸಾಡಿ ತಲ್ವಾರ್ ತೋರಿಸಿದರು. ಹಾಗೇ ಹಿಂದೂಗಳ ಅಂಗಡಿ ಟಾರ್ಗೆಟ್ ‌ಮಾಡಿ ಸುಟ್ಟು ಹಾಕಿದರು. ಇಷ್ಟಾದರೂ ಸಹ ಅದೇನೂ ಆಕಸ್ಮಿಕ ಘಟನೆ ಎನ್ನುವ ರೀತಿ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಇತ್ತು ಎಂದಿದ್ದಾರೆ.

ಮಾಜಿ ಸಂಸದ ಪ್ರತಾಪ್ ಸಿಂಹ
ಮುಸ್ಲಿಮರ ಬಳಿ ತಲ್ವಾರ್, ಪೆಟ್ರೋಲ್ ಬಾಂಬ್ ಕಿತ್ತುಕೊಳ್ಳಿ, ಇಲ್ಲದಿದ್ದರೆ ನಾವೂ ಹಿಡಿಯಬೇಕಾಗುತ್ತೆ: ಪ್ರತಾಪ್ ಸಿಂಹ

X

Advertisement

X
Kannada Prabha
www.kannadaprabha.com