ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ: ಬೇಲ್ ಸಿಗುತ್ತೆ ಅಂತ ಕಾಯ್ತಿದ್ದ ಅಭಿಮಾನಿಗಳಿಗೆ ನಿರಾಸೆ!

ಬೆಂಗಳೂರು ಸೆಷನ್ ಕೋರ್ಟ್‌ ವಿಚಾರಣೆ ನಡೆಸಿದ್ದು ಇಂದು ಜಾಮೀನು ಸಿಗಲಿದೆ ಎಂದು ಭಾವಿಸಿದ್ದ ನಟ ದರ್ಶನ್‌ಗೆ ಮತ್ತೊಮ್ಮೆ ನಿರಾಸೆಯಾಗಿದೆ.
ನಟ ದರ್ಶನ್ ಬಂಧನ ಬಳಿಕದ ಸಂಗ್ರಹ ಚಿತ್ರ
ನಟ ದರ್ಶನ್ ಬಂಧನ ಬಳಿಕದ ಸಂಗ್ರಹ ಚಿತ್ರ
Updated on

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿ ಮುಂದೂಡಿಕೆಯಾಗಿದ್ದು ಇದೇ ಜಾಮೀನು ಸಿಗುತ್ತದೆ ಎಂದು ಕಾಯ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಬೆಂಗಳೂರು ಸೆಷನ್ ಕೋರ್ಟ್‌ ವಿಚಾರಣೆ ನಡೆಸಿದ್ದು ಇಂದು ಜಾಮೀನು ಸಿಗಲಿದೆ ಎಂದು ಭಾವಿಸಿದ್ದ ನಟ ದರ್ಶನ್‌ಗೆ ಮತ್ತೊಮ್ಮೆ ನಿರಾಸೆಯಾಗಿದೆ. ಜಾಮೀನು ಅರ್ಜಿಯ ವಿಚಾರಣೆಯನ್ನು ಕೋರ್ಟ್ ಸೋಮವಾರಕ್ಕೆ (ಸೆ.30) ಮುಂದೂಡಿದೆ. ಅಲ್ಲದೆ ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡರ ಜಾಮೀನು ಅರ್ಜಿ ವಿಚಾರಣೆ ಮುಂದುವರಿದಿದೆ. ಕೃತ್ಯದಲ್ಲಿ ಎ1 ಆರೋಪಿ ಪವಿತ್ರಾ ಗೌಡ ಪಾತ್ರ ಹೆಚ್ಚು ಇಲ್ಲ. ಈ ಎಲ್ಲಾ ಕಾರಣಕ್ಕಾಗಿ ಜಾಮೀನು ನೀಡಬೇಕು ಎಂದು ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮುಕ್ತಾಯ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಟ ದರ್ಶನ್ ಜಾಮೀನು ಅರ್ಜಿ ವಿರುದ್ಧ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ. ದರ್ಶನ್ ಪರ ವಕೀಲ ಸುನೀಲ್ ಅವರು ಹಿರಿಯ ವಕೀಲಯ ಇಂದು ಇಲ್ಲದಿರುವುದರಿಂದ ವಾದಮಂಡನೆಗೆ ಅವಕಾಶ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ 17 ಜನರ ಪೈಕಿ ಮೂರವರಿಗೆ ಜಾಮೀನು ಸಿಕ್ಕಿದೆ.

ನಟ ದರ್ಶನ್ ಬಂಧನ ಬಳಿಕದ ಸಂಗ್ರಹ ಚಿತ್ರ
ಜಾಮೀನು ಹೋರಾಟ ಮಧ್ಯೆ ನಟ ದರ್ಶನ್ ಗೆ ಮತ್ತಷ್ಟು ಸಂಕಷ್ಟ: ಬಳ್ಳಾರಿ ಜೈಲಿಗೆ IT ಅಧಿಕಾರಿಗಳು ಆಗಮನ

ದರ್ಶನ್ ಗೆ ಇಂದೇ ಜಾಮೀನು ಸಿಗುತ್ತದೆ. ಹೀಗಾಗಿ ರಸ್ತೆ ಮಧ್ಯೆ ಅವರನ್ನು ಕರೆದುಕೊಂಡು ಬಂದರೆ ರಸ್ತೆಗಳಲ್ಲಿ ಅವರ ಅಭಿಮಾನಿಗಳು ಕಾಯುತ್ತಾ, ಕಾರಿಗೆ ಅಡ್ಡಬರಬಹುದು. ಇದರಿಂದ ಸಮಸ್ಯೆಯಾಗುತ್ತದೆ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಹೆಲಿಕಾಫ್ಟರ್ ಬುಕ್ ಮಾಡಿದ್ದಾರೆ ಎಂದು ಅಭಿಮಾನಿಯೊಬ್ಬರು ಯೂಟ್ಯೂಬ್ ವಿಡಿಯೋದಲ್ಲಿ ಹೇಳಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com