
ಬೆಂಗಳೂರು: ಬಹಳಷ್ಟು ವಿಳಂಬಂದ ನಂತರ ಬಿಡಿಎ ಮಾಸ್ಟರ್ ಪ್ಲಾನ್ (BDA Master Plan) ಯೋಜನೆಯಲ್ಲಿ ಪ್ರಗತಿ ಕಂಡುಬಂದಿದೆ. ಈ ಯೋಜನೆಯ ಗುತ್ತಿಗೆಯನ್ನು ದೆಹಲಿ ಮೂಲದ, ಡಿಜಿಸಿಎ ಪ್ರಮಾಣೀಕೃತ ಡ್ರೋನ್ ಡೆಸ್ಟಿನೇಷನ್ ಎಂಬ ಸಂಸ್ಥೆಗೆ ನೀಡಲಾಗಿದ್ದು ಶೀಘ್ರವೇ ವರ್ಕ್ ಆರ್ಡರ್ ನೀಡಲಾಗುತ್ತದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.
ಭವಿಷ್ಯದ ದೃಷ್ಟಿಯಿಂದ ನಗರಕ್ಕೆ ನೀಲನಕ್ಷೆ ರೂಪಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ಯೋಜನೆ ವಿಳಂಬವಾದ ಹಿನ್ನೆಲೆಯಲ್ಲಿ ಯೋಜನೆಯ ವ್ಯಾಪ್ತಿಯನ್ನು 2031 ರಿಂದ 2041 ಕ್ಕೆ ವಿಸ್ತರಿಸಲಾಗಿದೆ.
ಮಾಸ್ಟರ್ ಪ್ಲಾನ್ 2041 ಗಾಗಿ ನಗರದ ಚಿತ್ರಗಳನ್ನು ಸೆರೆಹಿಡಿಯಲು ಡ್ರೋನ್‌ಗಳನ್ನು ಬಳಸುವ ಒಪ್ಪಂದಕ್ಕೆ ಮೂರು ಸಂಸ್ಥೆಗಳು ಬಿಡ್ ಮಾಡಿದ್ದವು. “ತಾಂತ್ರಿಕ ಮತ್ತು ಆರ್ಥಿಕ ಬಿಡ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಕಾರಣ ನಾವು ಡ್ರೋನ್ ಡೆಸ್ಟಿನೇಷನ್ ನ್ನು ಅಂತಿಮಗೊಳಿಸಿದ್ದೇವೆ. ಸಂಸ್ಥೆ 2.55 ಕೋಟಿ ರೂ ಯು ಪ್ರಸ್ತಾಪಿಸಿದ್ದು, ಅದಕ್ಕೆ ಪೂರಕವಾಗಿ ಯೋಜನೆಯನ್ನು ಕಾರ್ಯಗತಗೊಳಿಸುವ ತಾಂತ್ರಿಕ ಸಾಮರ್ಥ್ಯವನ್ನೂ ಹೊಂದಿತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲೆಟರ್ ಆಫ್ ಇಂಟೆಂಟ್ ನ್ನು ಹಸ್ತಾಂತರಿಸಲಾಗಿದ್ದು, ಮುಂದಿನ ವಾರದ ಆರಂಭದಲ್ಲಿ ವರ್ಕ್ ಆರ್ಡರ್ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಮತ್ತೊಬ್ಬ ಅಧಿಕಾರಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು "ನಗರದ ಒಟ್ಟು 1227 ಚದರ ಕಿ.ಮೀ ಪ್ರದೇಶದಲ್ಲಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುತ್ತಿದ್ದು, 427 ಚದರ ಕಿ.ಮೀ ಬಿಡಿಎ ಅಧಿಕಾರ ವ್ಯಾಪ್ತಿಗೆ ಬರುತ್ತದೆ" ಎಂದು ಹೇಳಿದ್ದಾರೆ.
ಸಂಸ್ಥೆ ಆಬ್ಲಿಕ್ (ಓರೆಯಾದ) ಕ್ಯಾಮರಾವನ್ನು ಬಳಸುತ್ತದೆ ಅದು ಮೂರು ಆಯಾಮದ ರೂಪದಲ್ಲಿ ಐದು ಕೋನಗಳಿಂದ ಚಿತ್ರಗಳನ್ನು ಸೆರೆಹಿಡಿಯುತ್ತದೆ. "ಅವರು ಚಿತ್ರಗಳಿಂದ ಡೇಟಾವನ್ನು ಪಡೆದುಕೊಳ್ಳುತ್ತಾರೆ ಮತ್ತು ಅದನ್ನು ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಕೇಂದ್ರಕ್ಕೆ (KSRSAC) ಹಸ್ತಾಂತರಿಸುವ ನಿರೀಕ್ಷೆಯಿದೆ. ನಾಲ್ಕು ತಿಂಗಳು ಗಡುವು ಇದೆ’ ಎಂದು ಮತ್ತೊಬ್ಬ ಅಧಿಕಾರಿ ವಿವರಿಸಿದ್ದಾರೆ. ಅದು ನೀಡಬಹುದಾದ ಉತ್ತಮ ಸ್ಪಷ್ಟತೆಯಿಂದಾಗಿ ಡ್ರೋನ್ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಬಿಡಿಎ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.
Advertisement