ಬೆಂಗಳೂರು: ಹೆಚ್ಚು ಹೆಚ್ಚು ಜನರು ಸಾಂಪ್ರದಾಯಿಕ ಡೀಸೆಲ್ ಬಸ್‌ಗಳಿಗಿಂತ ಎಲೆಕ್ಟ್ರಿಕ್ ಬಸ್‌ಗಳತ್ತ ತಮ್ಮ ಆದ್ಯತೆಯನ್ನು ಬದಲಾಯಿಸುತ್ತಿದ್ದಾರೆ. ಡೀಸೆಲ್ ಬಸ್‌ಗಳಿಗೆ ಹೋಲಿಸಿದರೆ ಬೆಲೆಯ ಅನುಕೂಲಗಳು ಹಾಗೂ ಕಡಿಮೆ ಶಬ್ದ ಪ್ರಯಾಣಿಕರನ್ನು ಎಲೆಕ್ಟ್ರಿಕ್ ವಾಹನಗಳನ್ನು ಆಯ್ಕೆ ಮಾಡುವಂತೆ ಮಾಡುತ್ತಿವೆ. ಇವಿ ತಂತ್ರಜ್ಞಾನ ಜೊತೆಗೆ ಕಡಿಮೆ ನಿರ್ವಹಣಾ ವೆಚ್ಚದಿಂದಾಗಿ ಖಾಸಗಿ ಬಸ್ ನಿರ್ವಾಹಕರು ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ಉತ್ಸುಕರಾಗುತ್ತಿದ್ದಾರೆ.
ಖಾಸಗಿ ಬಸ್ ಮಾಲೀಕರು ಎಲೆಕ್ಟ್ರಿಕ್ ಬಸ್‌ಗಳಿಗೆ ಹೆಚ್ಚಿನ ಉತ್ಸಾಹವನ್ನು ತೋರಿಸುತ್ತಿದ್ದಾರೆ, ಪ್ರಾಥಮಿಕವಾಗಿ EV ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಡಿಮೆ ನಿರ್ವಹಣಾ ವೆಚ್ಚಗಳು ಮತ್ತು ಪರಿಸರ ಸ್ನೇಹಿಯಾಗಿರುವುದರಿಂದ ಬೇಡಿಕೆ ಹೆಚ್ಚುತ್ತಿದೆ. ನ್ಯೂಗೊ ಮತ್ತು ಫ್ರೆಶ್ ಬಸ್ ಸಂಸ್ಥೆಗಳು ತಮ್ಮ ಫ್ಲೀಟ್‌ಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಸಕ್ರಿಯವಾಗಿ ಸಂಯೋಜಿಸುತ್ತಿದ್ದು AbhiBus ಅಪ್ಲಿಕೇಶನ್‌ನಲ್ಲಿ ಬುಕಿಂಗ್‌ಗೆ ಲಭ್ಯವಿದೆ. ಇಂಗಾಲದ ಹೊರಸೂಸುವಿಕೆ ಕಡಿಮೆ ಇರುವುದರಿಂದ ಎಲೆಕ್ಟ್ರಿಕ್ ಬಸ್ ಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಅಭಿಬಸ್‌ನ ಸಿಒಒ ರೋಹಿತ್ ಶರ್ಮಾ ಹೇಳಿದ್ದಾರೆ. ಆದಾಗ್ಯೂ, ಮೂಲಸೌಕರ್ಯ ಅಭಿವೃದ್ಧಿ ಮಹತ್ತರ ಸವಾಲಾಗಿದೆ.
ಸಾಂಪ್ರದಾಯಿಕ ಡೀಸೆಲ್ ಬಸ್‌ಗಳಿಗಿಂತ EV ಬಸ್‌ಗಳಲ್ಲಿ ಪ್ರಯಾಣಿಸಲು ಜನರು ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದ ವರ್ಷದಲ್ಲಿ EV ಬಸ್‌ಗಳ ಬುಕಿಂಗ್ 173% ಹೆಚ್ಚಾಗಿದೆ. ಈ ಹಿಂದೆ ಎಲೆಕ್ಟ್ರಿಕ್ ಬಸ್‌ಗಳಲ್ಲಿ ಪ್ರಯಾಣಿಸಿದ ಶೇ.70ಱಷ್ಟು ಪ್ರಯಾಣಿಕರು ಮತ್ತೆ ಅದೇ ಬಸ್ ಗಳಲ್ಲಿ ಪ್ರಯಾಣಿಸಲು ಆಯ್ಕೆ ಮಾಡಿಕೊಂಡಿದ್ದಾರೆ, ಬಸ್‌ಗಳ ಲಭ್ಯತೆ, ಕಡಿಮೆ ಶಬ್ದ ಮಟ್ಟಗಳು ಮತ್ತು ಬೆಲೆಯ ಪ್ರಯೋಜನ (40% ವರೆಗೆ) ಮುಂತಾದ ಅಂಶಗಳು ಪ್ರಮುಖ ಕಾರಣವಾಗಿವೆ ಎಂದು ಅವರು ಹೇಳಿದರು. (ಡೀಸೆಲ್ ಬಸ್‌ಗಳಿಗೆ ಹೋಲಿಸಿದರೆ ದರ ಅಗ್ಗವಾಗಿದೆ). ಎಲೆಕ್ಟ್ರಿಕ್ ಬಸ್ ಗಳು ಸಾಂಪ್ರದಾಯಿಕ ಆಂತರಿಕ ದಹನಕಾರಿ ಎಂಜಿನ್‌ಗೆ ವಿರುದ್ಧವಾಗಿ ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಬಳಸಿ ಚಲಿಸುತ್ತದೆ. ಡೀಸೆಲ್ ಬಸ್ ಗಳಿಗೆ ಹೋಲಿಸಿದರೆ ಶಬ್ದ, ಕಂಪನ ಮತ್ತು ಹಮ್ಮಿಂಗ್ (ಎನ್‌ವಿಹೆಚ್) ಮಟ್ಟ ಶೇಕಡಾ 50 ರಷ್ಟು ಕಡಿಮೆ ಮತ್ತು ಇದು ಇವಿಗೆ ಬದಲಾಗಲು ಗಮನಾರ್ಹ ಕಾರಣವಾಗಿದೆ" ಎಂದು ಶರ್ಮಾ ಹೇಳಿದರು. ಎಲೆಕ್ಟ್ರಿಕ್ ಬಸ್‌ಗಳು ಹೈದರಾಬಾದ್-ವಿಜಯವಾಡ, ಇಂದೋರ್-ಭೋಪಾಲ್ ಮತ್ತು ದೆಹಲಿ-ಚಂಡೀಗಢ ಮಾರ್ಗದಲ್ಲಿ ಅತ್ಯಂತ ಜನಪ್ರಿಯವಾಗಿದ್ದು, ಅಲ್ಲಿ ನಮಗೆ ಅತಿ ಹೆಚ್ಚು ಬೇಡಿಕೆಯಿದೆ ಎಂದು ಶರ್ಮಾ ತಿಳಿಸಿದ್ದಾರೆ.
Advertisement