ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಯಾವುದೇ ದೃಢವಾದ ಆಧಾರವಿಲ್ಲ: ಪ್ರಲ್ಹಾದ್ ಜೋಶಿ

ಕೇಂದ್ರದಿಂದ ಅನುದಾನ ಹಂಚಿಕೆಯನ್ನು ಕಡಿಮೆ ಮಾಡಲಾಗಿದೆ ಎಂಬ ಕರ್ನಾಟಕದ ಮುಖ್ಯಮಂತ್ರಿಯವರ ಆರೋಪವನ್ನು ಆಧಾರ ರಹಿತ ಎಂದು ಕರೆದಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಿದ್ದರಾಮಯ್ಯ ಅವರು ಕೊಳಕು ರಾಜಕಾರಣ ಮಾಡುತ್ತಿದ್ದಾರೆ ಮತ್ತು ಅವರ ಹೇಳಿಕೆಗಳಿಗೆ ಯಾವುದೇ ದೃಢ ಆಧಾರವಿಲ್ಲ ಎಂದು ಹೇಳಿದ್ದಾರೆ.
ಪ್ರಲ್ಹಾದ್ ಜೋಶಿ, ಸಿಎಂ ಸಿದ್ದರಾಮಯ್ಯ
ಪ್ರಲ್ಹಾದ್ ಜೋಶಿ, ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಕೇಂದ್ರದಿಂದ ಅನುದಾನ ಹಂಚಿಕೆಯನ್ನು ಕಡಿಮೆ ಮಾಡಲಾಗಿದೆ ಎಂಬ ಕರ್ನಾಟಕದ ಮುಖ್ಯಮಂತ್ರಿಯವರ ಆರೋಪವನ್ನು ಆಧಾರ ರಹಿತ ಎಂದು ಕರೆದಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಿದ್ದರಾಮಯ್ಯ ಅವರು ಕೊಳಕು ರಾಜಕಾರಣ ಮಾಡುತ್ತಿದ್ದಾರೆ ಮತ್ತು ಅವರ ಹೇಳಿಕೆಗಳಿಗೆ ಯಾವುದೇ ದೃಢ ಆಧಾರವಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ತೆರಿಗೆ ವಿಕೇಂದ್ರೀಕರಣ ನೀತಿಗಳ ವಿರುದ್ಧ ಬುಧವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರ್ನಾಟಕ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ರಾತ್ರಿ ದೆಹಲಿಗೆ ಆಗಮಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಲ್ಹಾದ್ ಜೋಶಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಕ್ಕೆ ಯಾವುದೇ ದೃಢವಾದ ಆಧಾರವಿಲ್ಲ.  ರಾಜ್ಯಗಳ ಬಜೆಟ್‌ಗಳನ್ನು ಮಂಡಿಸಿರುವ ಸಿದ್ದರಾಮಯ್ಯನವರೇ ಹೀಗೆ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆಂದು ಅವರ ಪಕ್ಷದವರೇ ನಗುತ್ತಿರಬೇಕು. ಅದೇನೇ ಇದ್ದರೂ, ಕರ್ನಾಟಕದ ಮುಖ್ಯಮಂತ್ರಿಗಳ ಆರೋಪಕ್ಕೆ ಯಾವುದೇ ದೃಢವಾದ ಆಧಾರವಿಲ್ಲ. 13 ರಾಜ್ಯಗಳ ಬಜೆಟ್‌ಗಳನ್ನು ಮಂಡಿಸಿರುವ ಸಿದ್ದರಾಮಯ್ಯನವರೇ ಹೀಗೆ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆಂದು ಅವರ ಪಕ್ಷದವರೇ ನಗುತ್ತಿರಬೇಕು. ಅದೇನೇ ಇದ್ದರೂ, ನೆನಪಿಟ್ಟುಕೊಳ್ಳಲಿ ಎಂದಿದ್ದಾರೆ. 

ರಾಜ್ಯಗಳು ತಮ್ಮ SGST ಯ 100% ಅನ್ನು ಪಡೆಯುತ್ತವೆ ಮತ್ತು ರಾಜ್ಯದೊಳಗೆ ಸಂಗ್ರಹಿಸಲಾದ IGST ಯ ಅಂದಾಜು 50% ರಷ್ಟು ಪಡೆಯುತ್ತಾರೆ. 15ನೇ ಆರ್ಥಿಕ ಸಮಿತಿಯು ಯಾವುದೇ ರಾಜ್ಯಕ್ಕೆ ವಿಶೇಷ ಅನುದಾನವನ್ನು ಶಿಫಾರಸ್ಸು
ಮಾಡಿಲ್ಲ. ಹೀಗಾಗಿ ಶಿಫಾರಸ್ಸು ಸ್ವೀಕರಿಸದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆರ್ಥಿಕ ವರ್ಷ 2020-21 ರಿಂದ, ಕರ್ನಾಟಕಕ್ಕೆ ಬಂಡವಾಳ ವೆಚ್ಚ ಯೋಜನೆಗಳಿಗೆ ಸಹಾಯ ಮಾಡಲು 50 ವರ್ಷಗಳ ಬಡ್ಡಿ-ರಹಿತ ಸಾಲವಾಗಿ ರೂ 6279.94 ಕೋಟಿ ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ಯುಪಿಎ ಆಡಳಿತದ 10 ವರ್ಷಗಳಿಗೆ ಹೋಲಿಸಿದರೆ ಕರ್ನಾಟಕಕ್ಕೆ ನೀಡಲಾದ ಅನುದಾನ ಗಣನೀಯವಾಗಿ ಹೆಚ್ಚಿದೆ. ಎನ್‌ಡಿಎಯ 9 ವರ್ಷಗಳಲ್ಲಿ ಈಗಾಗಲೇ 2.08 ಲಕ್ಷ ಕೋಟಿ ರೂಪಾಯಿ ಬಿಡುಗಡೆ ಮಾಡಿದೆ, ಇದು ಯುಪಿಎ ಅನುದಾನಕ್ಕಿಂತ 243% ಹೆಚ್ಚಾಗಿದೆ. ಈ ಆರ್ಥಿಕ ವರ್ಷದ ಬಜೆಟ್ ನಲ್ಲಿ ರೂ. 18,005 ಕೋಟಿ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಲು ನಿರ್ಧಾರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿಗಳಿಗೆ ಇದೆಲ್ಲ ಅರ್ಥವಾಗಿದ್ದರೂ ರಾಜ್ಯದಲ್ಲಿ ಕೊಳಕು ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟ. ಕಾಂಗ್ರೆಸ್ ಪಕ್ಷವು ರಾಜ್ಯದ ರೈತರು ಮತ್ತು ಜನರ ಅಗತ್ಯಗಳನ್ನು ಪೂರೈಸಬೇಕು, ಆದರೆ ಅವರು ರಾಜ್ಯ ಚುನಾವಣೆಯಲ್ಲಿ ಪೂರೈಸಲಾಗದ ಭರವಸೆಗಳನ್ನು ನೀಡಿ,  ಈಗ ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದ್ದಾರೆ. ಜುಲೈ'23 ರಲ್ಲಿ ಉಪಮುಖ್ಯಮಂತ್ರಿಗಳು ಈ ವರ್ಷ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಐದು ಗ್ಯಾರಂಟಿಗಳು (ಅವರ) ಸರ್ಕಾರಕ್ಕೆ ದೊಡ್ಡ ಆರ್ಥಿಕ ಹೊರೆಯಾಗಿ ಮಾರ್ಪಟ್ಟಿವೆ" ಎಂದು ಮುಖ್ಯಮಂತ್ರಿಗಳ ಸ್ವಂತ ಆರ್ಥಿಕ ಸಲಹೆಗಾರ ಹೇಳಿದ್ದಾರೆ.

ಆದ್ದರಿಂದ, ಈ ಆರೋಪಗಳು ತಮ್ಮ ಆಡಳಿತದ ವೈಫಲ್ಯಗಳನ್ನು ಸಾರ್ವಜನಿಕರಿಂದ ಮರೆಮಾಚಲು ಕರ್ನಾಟಕ ಸರ್ಕಾರದ ಮತ್ತೊಂದು ವಿಫಲ ಪ್ರಯತ್ನವಾಗಿದೆ. ಆದರೆ ಈ ಚೇಷ್ಟೆಗಳು ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂಬುದನ್ನು ಮುಖ್ಯಮಂತ್ರಿಗಳು ಅರಿಯಬೇಕು ಎಂದು ಅವರು ಟೀಕಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com