ಸಂಗ್ರಹ ಚಿತ್ರ
ರಾಜ್ಯ
ಮೈಸೂರು: ವಿಶ್ವೇಶ್ವರಯ್ಯ ಕಾಲುವೆಯಲ್ಲಿ ಮುಳುಗಿ SSLC ವಿದ್ಯಾರ್ಥಿನಿ ಸೇರಿ ಒಂದೇ ಕುಟುಂಬ ಮೂವರು ಮಕ್ಕಳು ನೀರುಪಾಲು!
ಮೈಸೂರಿನ ವಿಶ್ವೇಶ್ವರಯ್ಯ ಕಾಲುವೆಯಲ್ಲಿ ಓರ್ವ ಬಾಲಕಿ ಸೇರಿದಂತೆ ಒಂದೇ ಕುಟುಂಬದ ಮೂವರು ಮಕ್ಕಳು ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಮಂಡ್ಯ: ಮೈಸೂರಿನ ವಿಶ್ವೇಶ್ವರಯ್ಯ ಕಾಲುವೆಯಲ್ಲಿ ಓರ್ವ ಬಾಲಕಿ ಸೇರಿದಂತೆ ಒಂದೇ ಕುಟುಂಬದ ಮೂವರು ಮಕ್ಕಳು ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಸೋಮವಾರ ಸಂಜೆ ಈ ಘಟನೆ ನಡೆದಿದೆ. ಮೃತರನ್ನು ಪಾಂಡವಪುರ ತಾಲೂಕಿನ ಚಿಕ್ಕಯಾರಹಳ್ಳಿ ಗ್ರಾಮದ 17 ವರ್ಷದ ಸೋನು, 16 ವರ್ಷದ ಸಿಮ್ರನ್ ಮತ್ತು 9 ವರ್ಷದ ಸಿದ್ಧಿಕಿ ಎಂದು ಗುರುತಿಸಲಾಗಿದೆ. ಮೃತರು ಆಟವಾಡಲು ಕಾಲುವೆ ಬಳಿ ಹೋಗಿದ್ದರು. ಈ ವೇಳೆ ಮೂವರ ಪೈಕಿ ಬಾಲಕನೋರ್ವ ಆಕಸ್ಮಿಕವಾಗಿ ಕಾಲುವೆಗೆ ಬಿದ್ದಿದ್ದು ಉಳಿದ ಇಬ್ಬರು ಅವನನ್ನು ರಕ್ಷಿಸಲು ಪ್ರಯತ್ನಿಸುವಾಗ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಓರ್ವ ಬಾಲಕಿ ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಾಳೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ