ಬೆಂಗಳೂರು: ಬಿರುಬೇಸಿಗೆಯ ಬಿಸಿಲಿಗೆ ತತ್ತರ; BBMP ವ್ಯಾಪ್ತಿಯ 53 ಕೆರೆಗಳು ಬರಿದು, ನೀರಿನ ಮಟ್ಟ ಶೇ.35ಕ್ಕೆ ಇಳಿಕೆ

ಬಿಬಿಎಂಪಿಯ ಅಧಿಕೃತ ಮೂಲಗಳ ಪ್ರಕಾರ, ಏಪ್ರಿಲ್ 5 ರ ಹೊತ್ತಿಗೆ, ಈ ಕೆರೆಗಳ ಒಟ್ಟು ನೀರು ಸಂಗ್ರಹ ಸಾಮರ್ಥ್ಯವು 31,505.48 ಮಿಲಿಯನ್ ಲೀಟರ್ ಆಗಿರಬೇಕು.
Ullal lake
ಉಲ್ಲಾಳ ಕೆರೆ
Updated on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 183 ಕೆರೆಗಳಲ್ಲಿ, ಬೇಸಿಗೆಯ ತೀವ್ರ ಬಿಸಿಲಿನಿಂದ 53 ಕೆರೆಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ.

ಉಳಿದ ಕೆರೆಗಳಲ್ಲಿನ ನೀರಿನ ಮಟ್ಟವು ತೀವ್ರ ಕುಸಿತ ಕಂಡಿದ್ದು, ಒಟ್ಟು ಸಂಗ್ರಹವು ಕೇವಲ ಶೇಕಡಾ 40 ಕ್ಕೆ ಇಳಿದಿದೆ. ಬಿಬಿಎಂಪಿಯ ಅಧಿಕೃತ ಮೂಲಗಳ ಪ್ರಕಾರ, ಏಪ್ರಿಲ್ 5 ರ ಹೊತ್ತಿಗೆ, ಈ ಕೆರೆಗಳ ಒಟ್ಟು ನೀರು ಸಂಗ್ರಹ ಸಾಮರ್ಥ್ಯವು 31,505.48 ಮಿಲಿಯನ್ ಲೀಟರ್ ಆಗಿರಬೇಕು. ಆದರೆ ಸದ್ಯ ಕೇವಲ 10,980.01 ಮಿಲಿಯನ್ ಲೀಟರ್ ಮಾತ್ರ ಸಂಗ್ರಹವಾಗಿದೆ, ಇದು ನಿರೀಕ್ಷಿತ ಸಾಮರ್ಥ್ಯದ ಕೇವಲ 35 ಪ್ರತಿಶತದಷ್ಟಿದೆ.

ಈ ಸವಕಳಿಯು ನಗರದ ಅಂತರ್ಜಲ ಮಟ್ಟದ ಮೇಲೆ, ವಿಶೇಷವಾಗಿ ಕೆರೆಗಳಿಗೆ ಹತ್ತಿರವಿರುವ ಪ್ರದೇಶಗಳಲ್ಲಿ ಗಮನಾರ್ಹ ಪರಿಣಾಮ ಬೀರಿದೆ. ಮಹದೇವಪುರ ವಲಯದಲ್ಲಿ, 50 ಕೆರೆಗಳಲ್ಲಿ 19 ಕೆರೆಗಳು ಬತ್ತಿ ಹೋಗಿವೆ. ಈ ಕೆರೆಗಳ ಒಟ್ಟು ಸಂಗ್ರಹ ಸಾಮರ್ಥ್ಯ 9493.35 ಮಿಲಿಯನ್ ಲೀಟರ್ ಆಗಿದ್ದರೂ, ಕೇವಲ 2110.43 ಮಿಲಿಯನ್ ಲೀಟರ್ ನೀರು ಮಾತ್ರ ಉಳಿದಿದೆ.

ಅದೇ ರೀತಿ, ಯಲಹಂಕ ವಲಯದಲ್ಲಿ, 27 ಕೆರೆಗಳಲ್ಲಿ 12 ಕೆರೆಗಳು ಒಣಗಿವೆ. ಒಟ್ಟು 9214.08 ಮಿಲಿಯನ್ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಈ ಕೆರೆಗಳು ಪ್ರಸ್ತುತ ಕೇವಲ 4276.61 ಮಿಲಿಯನ್ ಲೀಟರ್ ನೀರನ್ನು ಮಾತ್ರ ಹೊಂದಿವೆ ಎಂದು ಮಹಾದೇವಪುರದ ಪರಿಸ್ಥಿತಿಯ ಬಗ್ಗೆ ಬಿಬಿಎಂಪಿಯ ಎಂಜಿನಿಯರ್ ಒಬ್ಬರು ವಿವರಿಸಿದ್ದಾರೆ.

Ullal lake
ಚೂಡಸಂದ್ರ ಕೆರೆ ಪುನಶ್ಚೇತನ: ಜಲ ಸಂಗ್ರಹ ಹೆಚ್ಚಳ

ಈ ವಲಯದ ಅನೇಕ ನಿವಾಸಿಗಳು ಬೋರ್‌ವೆಲ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಮಳೆಗಾಲದಲ್ಲಿ ಭಾರಿ ಮಳೆಯಾದರೆ ಮಾತ್ರ ಕೆರೆಗಳು ತುಂಬುತ್ತವೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಬಹುದು ಎಂದು ಎಂಜಿನಿಯರ್ ಗಮನಿಸಿದರು. ಬೊಮ್ಮನಹಳ್ಳಿ ವಲಯದಲ್ಲಿ, 44 ಕೆರೆಗಳಲ್ಲಿ ಎರಡು ಬತ್ತಿಹೋಗಿವೆ. ಒಟ್ಟು 4,882 ಮಿಲಿಯನ್ ಲೀಟರ್‌ಗಳ ಸಾಮರ್ಥ್ಯದಲ್ಲಿ, ಕೇವಲ 2725.10 ಮಿಲಿಯನ್ ಲೀಟರ್ ನೀರು ಲಭ್ಯವಿದೆ.

ಆರ್‌ಆರ್ ನಗರ ವಲಯವು ಸಹ ತೀವ್ರವಾಗಿ ಹಾನಿಗೊಳಗಾಗಿದ್ದು, 33 ರಲ್ಲಿ 12 ಕೆರೆಗಳು ಒಣಗಿವೆ. ಈ ವಲಯದಲ್ಲಿರುವ ಕೆರೆಗಳು 3032.31 ಮಿಲಿಯನ್ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳಬಹುದಾದರೂ, ಅವು ಸದ್ಯ 393.59 ಮಿಲಿಯನ್ ಲೀಟರ್‌ಗಳನ್ನು ಮಾತ್ರ ಹೊಂದಿವೆ. ದಾಸರಹಳ್ಳಿ ವಲಯದಲ್ಲಿ, 12 ಕೆರೆಗಳಲ್ಲಿ 6 ಕೆರೆಗಳು ಬತ್ತಿ ಹೋಗಿವೆ. ಇಲ್ಲಿನ ಒಟ್ಟು ಸಾಮರ್ಥ್ಯ 1740.31 ಮಿಲಿಯನ್ ಲೀಟರ್ ಆಗಿದ್ದರೂ, ಲಭ್ಯವಿರುವ ನೀರು ಕೇವಲ 140.62 ಮಿಲಿಯನ್ ಲೀಟರ್. ದಕ್ಷಿಣ ವಲಯದಲ್ಲಿ, ಒಟ್ಟು 7 ಕೆರೆಗಳಿದ್ದು, ಕೆರೆಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ 1339.26 ಮಿಲಿಯನ್ ಲೀಟರ್ ಆಗಿದ್ದು, ಅವುಗಳಲ್ಲಿ ಕೇವಲ 911.56 ಮಿಲಿಯನ್ ಲೀಟರ್ ಮಾತ್ರ ಲಭ್ಯವಿದೆ.

ಪೂರ್ವ ವಲಯದಲ್ಲಿ, ಐದು ಕೆರೆಗಳಲ್ಲಿ ಎರಡು ಕೆರೆಗಳು ಒಣಗಿವೆ, ಉಳಿದ ಕೆರೆಗಳ 4,882 ಮಿಲಿಯನ್ ಲೀಟರ್‌ಗಳಲ್ಲಿ 2,725.10 ಮಿಲಿಯನ್ ಲೀಟರ್‌ಗಳನ್ನು ಸಂಗ್ರಹಿಸಿವೆ. ಏತನ್ಮಧ್ಯೆ, ಕೇವಲ ಎರಡು ಕೆರೆಗಳನ್ನು ಹೊಂದಿರುವ ಪಶ್ಚಿಮ ವಲಯದಲ್ಲಿ, ಒಟ್ಟು 453.12 ಮಿಲಿಯನ್ ಲೀಟರ್‌ಗಳಲ್ಲಿ 351.07 ಮಿಲಿಯನ್ ಲೀಟರ್ ನೀರು ಲಭ್ಯವಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com