ನಂದಿನಿ ಇಡ್ಲಿ-ದೋಸೆ ಹಿಟ್ಟಿಗೆ ಭಾರೀ ಬೇಡಿಕೆ: ಪೂರೈಸಲು KMF ವಿಫಲ; ಗ್ರಾಹಕರಿಗೆ ನಿರಾಸೆ

ಹಿಟ್ಟನ್ನು ಮಾರುಕಟ್ಟೆ ಬಿಡುಗಡೆ ಮಾಡಿದ್ದ ಕೆಎಂಎಫ್ ಸಂಕ್ರಾಂತಿಯ ನಂತರ ಬೇಡಿಕೆಯ ಆಧಾರದ ಮೇಲೆ ಪೂರೈಕೆಯನ್ನು ಸುವ್ಯವಸ್ಥಿತಗೊಳಿಸಲಾಗುವುದು ಎಂದು ಹೇಳಿಕೊಂಡಿತ್ತು
Nandini’s whey-based idli-dosa batter
ನಂದಿನಿ ಇಡ್ಲಿ-ದೋಸೆ ಹಿಟ್ಟು
Updated on

ಬೆಂಗಳೂರು: ವೇ ಪ್ರೋಟೀನ್ ಆಧಾರಿತ ಉತ್ಕೃಷ್ಟ ಗುಣಮಟ್ಟದ ನಂದಿನಿ ಇಡ್ಲಿ ಹಾಗೂ ದೋಸೆ ಹಿಟ್ಟನ್ನು ಗ್ರಾಹಕರು ಖುಷಿಯಿಂದ ಮುಗಿಬಿದ್ದು ಖರೀದಿಸುತ್ತಿದ್ದರು. ಆದರೆ ಇದೀಗ ಇಡ್ಲಿ ಮತ್ತು ದೋಸೆ ಇಟ್ಟಿಗೆ ಭಾರೀ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಎಂಎಫ್ ಅನಿಯಮಿತವಾಗಿ ಪೂರೈಸುತ್ತಿದೆ.

ಅನೇಕ ನಂದಿನಿ ಪಾರ್ಲರ್‌ಗಳ ಸಿಬ್ಬಂದಿ ಪದೇ ಪದೇ ವಿನಂತಿ ಮಾಡಿದರೂ ಹಿಟ್ಟಿನ ಸ್ಟಾಕ್ ನಿರಂತರವಾಗಿ ಪೂರೈಕೆ ಮಾಡಲಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹಿಟ್ಟನ್ನು ಮಾರುಕಟ್ಟೆ ಬಿಡುಗಡೆ ಮಾಡಿದ್ದ ಕೆಎಂಎಫ್ ಸಂಕ್ರಾಂತಿಯ ನಂತರ ಬೇಡಿಕೆಯ ಆಧಾರದ ಮೇಲೆ ಪೂರೈಕೆಯನ್ನು ಸುವ್ಯವಸ್ಥಿತಗೊಳಿಸಲಾಗುವುದು ಎಂದು ಹೇಳಿಕೊಂಡಿತ್ತು. ಆದಾಗ್ಯೂ, ಮೂರು ತಿಂಗಳ ನಂತರವೂ ಬ್ಯಾಟರ್‌ನ ಸ್ಥಿರ ಹರಿವು ಇಲ್ಲ ಎಂದು ನಂದಿನಿ ಮಾರಾಟಗಾರರೊಬ್ಬರು ಹೇಳಿದರು.

ನಗರ ಗ್ರಾಹಕರು, ವಿಶೇಷವಾಗಿ ಟೈಟ್ ಶೆಡ್ಯೂಲ್ ನಲ್ಲಿ ಕೆಲಸ ಮಾಡುವ ವೃತ್ತಿಪರರು, ಹೆಚ್ಚಾಗಿ ರೆಡಿ-ಟು-ಕುಕ್ ಊಟದ ಆಯ್ಕೆಗಳತ್ತ ಮುಖ ಮಾಡುತ್ತಿರುವುದರಿಂದ, ಪ್ರೋಟೀನ್-ಪ್ಯಾಕ್ಡ್ ಉಪಹಾರ ಆಯ್ಕೆಯು ನಂದಿನಿಯ ಬೆಸ್ಟ್ ಸೆಲ್ಲರ್‌ಗಳಲ್ಲಿ ಒಂದಾಗುವ ನಿರೀಕ್ಷೆಯಿತ್ತು. ಆದರೆ ಕಂಪನಿಯು ಬೇಡಿಕೆಯನ್ನು ಉಳಿಸಿಕೊಳ್ಳಲು ವಿಫಲವಾಗಿದೆ ಎಂದು ಗ್ರಾಹಕರು ಬೇಸರ ವ್ಯಕ್ತ ಪಡಿಸಿದ್ದಾರೆ,

ಆದರೆ ಪ್ರತಿಸ್ಪರ್ಧಿ ಬ್ರ್ಯಾಂಡ್ ನ ಇಡ್ಲಿ-ದೋಸೆ ಬ್ಯಾಟರ್ ಗಳು ಮಾರುಕಟ್ಟೆಯಲ್ಲಿ ಸ್ಥಾನ ಪಡೆಯುತ್ತಿವೆ, ಸಮಯವನ್ನು ಸದುಪಯೋಗ ಪಡಿಸಿಕೊಂಡ ಕಂಪನಿಗಳು ರಾಗಿ-ಆಧಾರಿತ ಬ್ಯಾಟರ್ ಮತ್ತು ಇತರ ಪ್ರೋಟೀನ್-ಭರಿತ ಹೊಸ ರೂಪಾಂತರಗಳನ್ನು ಪರಿಚಯಿಸುವ ಮೂಲಕ ಪ್ರಸಿದ್ಧವಾಗುತ್ತಿವೆ.

Nandini’s whey-based idli-dosa batter
ನಂದಿನಿ ಉತ್ಪನ್ನಗಳಿಗೆ ಹೊಸ ಸೇರ್ಪಡೆ: ವೇ ಪ್ರೋಟೀನ್ ಆಧಾರಿತ ದೋಸೆ, ಇಡ್ಲಿ ಹಿಟ್ಟು ಮಾರುಕಟ್ಟೆಗೆ ಲಗ್ಗೆ!

ವೇ ಪ್ರೋಟೀನ್ ಭರಿತ ಬ್ಯಾಟರ್ ಅನುಕೂಲಕರ ಮತ್ತು ಆರೋಗ್ಯಕರ ಆಯ್ಕೆಯಂತೆ ಕಾಣುತ್ತಿದ್ದರಿಂದ ನಾವು ಅದನ್ನು ಖರೀದಿಸಲು ಉತ್ಸುಕರಾಗಿದ್ದೆವು. ನಾವು ಅದನ್ನು ಒಮ್ಮೆ ಖರೀದಿಸುವಲ್ಲಿ ಯಶಸ್ವಿಯಾಗಿದ್ದೇವೆ, ಆದರೆ ನಂತರ ಅದು ಮತ್ತೆ ಎಂದಿಗೂ ಮತ್ತೆ ಸಿಗಲಿಲ್ಲ ಎಂದು ಆರ್‌ಟಿ ನಗರದ ನಿವಾಸಿ ಜಾನಕಿ ಹೇಳಿದರು.

ಹಾಲೊಡಕು ಆಧಾರಿತ ಇಡ್ಲಿ ಮತ್ತು ದೋಸೆ ಬ್ಯಾಟರ್ ಅನ್ನು ಡಿಸೆಂಬರ್ 25 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಇದು 5% ಹಾಲೊಡಕು ಪ್ರೋಟೀನ್ ಅನ್ನು ಹೊಂದಿರುತ್ತದೆ ಮತ್ತು ಎರಡು ಪ್ಯಾಕ್ ಗಾತ್ರಗಳಲ್ಲಿ ಲಭ್ಯವಿದೆ - 450 ಗ್ರಾಂ ಬೆಲೆ ರೂ. 40 ಮತ್ತು 900 ಗ್ರಾಂ ಬೆಲೆ ರೂ. 80 ರು ನಿಗದಿ ಪಡಿಸಲಾಗಿತ್ತು.

ಪ್ರಸ್ತುತ, ಈ ಬ್ಯಾಟರ್ ಅನ್ನು ಜಯನಗರ, ಪದ್ಮನಾಭನಗರ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂನ ಆಯ್ದ ನಂದಿನಿ ಪಾರ್ಲರ್‌ಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ಮತ್ತು ಪಾರ್ಲರ್ ಸಿಬ್ಬಂದಿ ಇಬ್ಬರೂ ಸ್ಥಿರವಾದ ಪೂರೈಕೆಯ ಕೊರತೆಯ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ.

"ನಂದಿನಿ ಬ್ರಾಂಡ್ ನಾವು ದಿನನಿತ್ಯದ ಹಾಲು ಮತ್ತು ಮೊಸರಿನಂತಹ ಅಗತ್ಯ ವಸ್ತುಗಳಿಗೆ ಹೆಚ್ಚಾಗಿ ಅವಲಂಬಿಸಿರುವುದರಿಂದ, ಬಿಡುಗಡೆಯಾದಾಗಿನಿಂದ ನಾವು ಈ ಉತ್ಪನ್ನವನ್ನು ಪ್ರಯತ್ನಿಸಲು ಉತ್ಸುಕರಾಗಿದ್ದೆವು, ಆದರೆ ಒಮ್ಮೆಯೂ ಸಹ ನಮಗೆ ಬ್ಯಾಟರ್ ಸ್ಟಾಕ್‌ನಲ್ಲಿ ಸಿಗಲಿಲ್ಲ" ಎಂದು ಮಲ್ಲೇಶ್ವರಂ ನಿವಾಸಿ ಮಾಲಿನಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com