Muda Case: ಪಾರ್ವತಿಯವರಿಗೆ ಸೈಟ್ ಕೊಡಿಸಲು ಸಹಾಯ ಮಾಡಿದ್ದು ಸಿದ್ದರಾಮಯ್ಯ ಆಪ್ತ ಸಹಾಯಕ- ED ಆರೋಪ; ಲೋಕಾಯುಕ್ತ ಪೊಲೀಸರು ನಿರಾಕರಣೆ

ಲೋಕಾಯುಕ್ತ ಪೊಲೀಸರೊಂದಿಗೆ ವಿವರಗಳನ್ನು ಹಂಚಿಕೊಂಡ ಇಡಿ ಪ್ರಕಾರ, ಸಿ.ಟಿ ಕುಮಾರ್, ಪರಿಹಾರ ನಿವೇಶನಗಳ ಹಂಚಿಕೆ ಕೋರಿ ಅರ್ಜಿಯಲ್ಲಿ ಪಾರ್ವತಿ ಅವರ ಸಹಿಯನ್ನು ನಕಲಿ ಮಾಡಿದ್ದಾರೆ.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(MUDA)ದಿಂದ ಬದಲಿ 14 ಪರಿಹಾರ ನಿವೇಶನಗಳ ಹಂಚಿಕೆಯಲ್ಲಿ ಹಿಂದಿನ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಆಪ್ತ ಸಹಾಯಕ ಎಸ್.ಜಿ. ದಿನೇಶ್ ಕುಮಾರ್ ಅಲಿಯಾಸ್ ಸಿಟಿ ಕುಮಾರ್ ಅವರ ಪ್ರಭಾವ ಸಾಕಷ್ಟಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದ್ದರೂ, ಲೋಕಾಯುಕ್ತ ಪೊಲೀಸರು ಮುಡಾ ಪ್ರಕರಣದಲ್ಲಿ ಸಲ್ಲಿಸಿದ ಬಿ ರಿಪೋರ್ಟ್ ನಲ್ಲಿ, ಅಂತಹ ಯಾವುದೇ ಪ್ರಭಾವ ಬೀರಿದ್ದು ತಮಗೆ ತನಿಖೆಯ ಸಂದರ್ಭದಲ್ಲಿ ಕಂಡುಬಂದಿಲ್ಲ ಎಂದು ಹೇಳಲಾಗಿದೆ.

ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ ಅಕ್ರಮವಾಗಿ ಮುಡಾದಿಂದ ನಿವೇಶನಗಳ ಹಂಚಿಕೆಯಾಗಿದೆ ಎಂಬುದು ಕೇಸಿನ ತನಿಖೆಯ ಕೇಂದ್ರಬಿಂದುವಾಗಿದ್ದರೂ ಕೂಡ, ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಅಂತಿಮ ವರದಿಯಲ್ಲಿ ಪಾರ್ವತಿಯವರಿಗೆ ನಿವೇಶನ ಹಂಚಿಕೆ ಮಾಡುವ ಮೊದಲು ಮತ್ತು ನಂತರ ರಿಯಲ್ ಎಸ್ಟೇಟ್ ಏಜೆಂಟ್‌ಗಳು ಸೇರಿದಂತೆ ಹಲವಾರು ಜನರಿಗೆ 700 ಕೋಟಿ ರೂಪಾಯಿ ಮೌಲ್ಯದ 1,095 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾದ 134 ಪ್ರಕರಣಗಳ ನಿದರ್ಶನಗಳಂತೆ ಇದೂ ಸಹ ಒಂದು ಹೇಳಲಾಗಿದೆ.

ಲೋಕಾಯುಕ್ತ ಪೊಲೀಸರೊಂದಿಗೆ ವಿವರಗಳನ್ನು ಹಂಚಿಕೊಂಡ ಇಡಿ ಪ್ರಕಾರ, ಸಿ ಟಿ ಕುಮಾರ್, ಪರಿಹಾರ ನಿವೇಶನಗಳ ಹಂಚಿಕೆ ಕೋರಿ ಅರ್ಜಿಯಲ್ಲಿ ಪಾರ್ವತಿ ಅವರ ಸಹಿಯನ್ನು ನಕಲಿ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಕಳೆದ ಬಾರಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದರು. ಅವರ ಮಗ, ಆಗ ವರುಣಾ ಕ್ಷೇತ್ರದ ಶಾಸಕರಾಗಿದ್ದ ಯತೀಂದ್ರ ಸಿದ್ದರಾಮಯ್ಯ, ಈ ವ್ಯವಹಾರ ನಡೆದಾಗ ಮುಡಾದ ಪದನಿಮಿತ್ತ ಸದಸ್ಯರಾಗಿದ್ದರು, ಈ ಸಮಯದಲ್ಲಿ ಪಾರ್ವತಿಯವರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಕುಮಾರ್ ಅವರು ಅನಗತ್ಯ ಪ್ರಭಾವ ಬೀರಿದ್ದನ್ನು ತೋರಿಸುತ್ತದೆ.

CM Siddaramaiah
ಮುಡಾ ಹಗರಣ: ಸಿದ್ದರಾಮಯ್ಯ ಸೇರಿ ಎಲ್ಲಾ ಆರೋಪಿಗಳ ಹೇಳಿಕೆಗಳನ್ನು ಸ್ವೀಕರಿಸಿದ ಲೋಕಾಯುಕ್ತ ಪೊಲೀಸರು

ಮೈಸೂರಿನ ವಿಜಯನಗರದಲ್ಲಿ ಪಾರ್ವತಿಯವರಿಗೆ ನಿವೇಶನ ಹಂಚಿಕೆ ಮಾಡುವ ಮೂಲಕ ನಿಯಮ ಉಲ್ಲಂಘನೆ: ಲೋಕಾಯುಕ್ತ ಪೊಲೀಸರು

ಸಿ ಟಿ ಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಫೋರ್ಜರಿ, ಸೋಗು ಹಾಕುವಿಕೆ ಮತ್ತು ಸಾಕ್ಷಿಗಳನ್ನು ತಿರುಚುವ ಆರೋಪಗಳನ್ನು ಸಹ ದಾಖಲಿಸಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣದ ತನಿಖೆ ನಡೆಸಿದ ED, ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡ ಕುಮಾರ್, ಪಾರ್ವತಿಗೆ ಪರಿಹಾರ ನಿವೇಶನ ಹಂಚಿಕೆ ಮಾಡುವಲ್ಲಿ ಅನಗತ್ಯ ಪ್ರಭಾವ ಬೀರಿದ್ದಾರೆ ಎಂದು ವಾದಿಸಿದೆ.

ಇಡಿ ದಾಖಲಿಸಿದ ಹೇಳಿಕೆಯಲ್ಲಿ, ಮಾಜಿ MUDA ಆಯುಕ್ತ ಡಿ ಬಿ ನಟೇಶ್ ಅವರು, ಸಿ ಟಿ ಕುಮಾರ್ ಪಾರ್ವತಿಯನ್ನು ಪ್ರತಿನಿಧಿಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಸೈಟ್ ಹಂಚಿಕೆ ವಿಭಾಗದಲ್ಲಿ ಕೇಸ್ ವರ್ಕರ್ ಆಗಿರುವ ಎನ್ ರವಿ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಪಾರ್ವತಿಗೆ ತಿಳಿಸದೆ ಸಿ ಟಿ ಕುಮಾರ್, ಸೈಟ್‌ಗಳ ಖಾತಾಗಳಿಗೆ ಅವರ ಹೆಸರಿನಲ್ಲಿ ಸಲ್ಲಿಸಲಾದ ಅರ್ಜಿಗೆ ಸಹಿ ಹಾಕಿದ್ದಾರೆ.

ಮುಡಾ ಆಯುಕ್ತರ ಆಪ್ತ ಸಹಾಯಕ ಪ್ರಶಾಂತ್ ರಾಜು, ಪ್ರತಿದಿನ ಅರ್ಜಿ ಸಲ್ಲಿಕೆಯ ಸ್ಥಿತಿಗತಿಯನ್ನು ಕುಮಾರ್‌ಗೆ ಅಪ್ ಡೇಟ್ ಮಾಡುತ್ತಿದ್ದರು. ಇದು ಸಿ ಟಿ ಕುಮಾರ್ ಎಷ್ಟು ಪ್ರಭಾವಿ ಎಂಬುದನ್ನು ತೋರಿಸುತ್ತದೆ ಎಂದು ಇಡಿ ಹೇಳಿಕೊಂಡಿದೆ. ಇದನ್ನು ಪ್ರಶ್ನಿಸಿದ ಲೋಕಾಯುಕ್ತ ಪೊಲೀಸರು, ಪಾರ್ವತಿ ಕೂಡ ತಮ್ಮ ಪರವಾಗಿ ಕುಮಾರ್ ಅವರೇ ತಮ್ಮ ಸಹಿಯನ್ನು ಮಾಡಿದ್ದಾರೆಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದು ಕುಮಾರ್ ಅವರ ಒಪ್ಪಿಗೆಯಿಂದಲೇ ನಿವೇಶನಗಳ ಖಾತಾಗಳಿಗೆ ಅರ್ಜಿಗೆ ಸಹಿ ಹಾಕಿದ್ದಾರೆ ಎಂದು ತೋರಿಸುತ್ತದೆ. ಪಾರ್ವತಿ ತಮ್ಮ ಭೂಮಿಗೆ ಪರಿಹಾರದ ಬಗ್ಗೆ ವಿವರಗಳನ್ನು ಕೇಳಲು ನಟೇಶ್ ಅವರನ್ನು 2-3 ಬಾರಿ ಭೇಟಿಯಾಗಿದ್ದಾಗಿ ಕುಮಾರ್ ಸಹ ಒಪ್ಪಿಕೊಂಡಿದ್ದಾರೆ.

ಜುಲೈ 2022 ರಿಂದ ಜುಲೈ 2024 ರ ನಡುವೆ ಮುಡಾ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಅವರ ಪಿಎ ಆಗಿ ಕೆಲಸ ಮಾಡಿದ್ದೇನೆ, ಇತರ ಆಯುಕ್ತರ ಪಿಎ ಅವಧಿಯಲ್ಲಿ ಅವರು ಎಂದಿಗೂ ಕೆಲಸ ಮಾಡಿಲ್ಲ ಎಂದು ಪ್ರಶಾಂತ್ ರಾಜ್ ಹೇಳಿದ್ದಾರೆ. ಕುಮಾರ್ ಅವರ ಅನಗತ್ಯ ಪ್ರಭಾವ ಅಥವಾ ಒತ್ತಡದ ಬಗ್ಗೆ ಮುಡಾದ ಯಾವುದೇ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾಹಿತಿ ಇರಲಿಲ್ಲ, ಇಡಿ ಮಾಡಿದ ಆರೋಪಗಳು ದೃಢಪಟ್ಟಿಲ್ಲ ಎಂದು ಲೋಕಾಯುಕ್ತ ವರದಿ ತಿಳಿಸಿದೆ.

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ (ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರದ ಬದಲಿಗೆ ಸೈಟ್‌ಗಳ ಹಂಚಿಕೆ) ನಿಯಮಗಳು, 2009 ರ ಪ್ರಕಾರ, ಪರಿಹಾರ ನಿವೇಶನಗಳನ್ನು ಮೂಲೆ ಮತ್ತು ವಾಣಿಜ್ಯ ನಿವೇಶನಗಳನ್ನು ಹೊರತುಪಡಿಸಿ, ಲಾಟ್ ಮೂಲಕ ಒಂದೇ ವಿನ್ಯಾಸದಲ್ಲಿ ಹಂಚಿಕೆ ಮಾಡಬೇಕು ಎಂದು ಇಡಿ ಹೇಳಿಕೊಂಡಿದೆ. ಆದರೆ ಅದನ್ನು ಉಲ್ಲಂಘಿಸಲಾಗಿದೆ, ಪಾರ್ವತಿಯವರಿಗೆ ಹಂಚಿಕೆ ಮಾಡಲಾದ ನಿವೇಶನಗಳನ್ನು ನಟೇಶ್ ರ್ಯಾಂಡಮ್ ಆಯ್ಕೆ ಮಾಡಿದ್ದು, ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿದೆ.

ವಿಜಯನಗರ 3 ಮತ್ತು 4 ನೇ ಹಂತಗಳಲ್ಲಿ ಪಾರ್ವತಿಗೆ ನಿವೇಶನಗಳನ್ನು ಮಂಜೂರು ಮಾಡುವ ಮೂಲಕ ನಟೇಶ್ ಅವರು ಈ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಒಪ್ಪಿಕೊಂಡಿದ್ದಾರೆ. 2021 ರ ಅಂತ್ಯದ ವೇಳೆಗೆ ಸುಮಾರು 2,555 ನಿವೇಶನಗಳು ಖಾಲಿ ಇದ್ದವು. ದೇವನೂರು ಲೇಔಟ್‌ನಲ್ಲಿ ವಿವಿಧ ಆಯಾಮಗಳ 369 ನಿವೇಶನಗಳು ಖಾಲಿ ಇದ್ದವು. ಅಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಬೇಕಿತ್ತು.

ಲೋಕಾಯುಕ್ತ ಪೊಲೀಸರು, ಮುಡಾಗೆ ನಿವೇಶನಗಳನ್ನು ಒಪ್ಪಿಸುವುದಷ್ಟೇ ಸಾಕು, ಪಾರ್ವತಿ ತಪ್ಪಿತಸ್ಥರೆಂದು ಹೇಳಲು ಸಾಧ್ಯವಿಲ್ಲ ಎಂಬ ಇಡಿ ಹೇಳಿಕೆಯನ್ನು ವಿರೋಧಿಸಿ, ನಿವೇಶನ ಹಂಚಿಕೆ ನಿಯಮಗಳ ಅಡಿಯಲ್ಲಿ ಅನುಮತಿಸಲಾಗಿರುವುದರಿಂದ ಪಾರ್ವತಿ ತಪ್ಪಿತಸ್ಥರೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಲೋಕಾಯುಕ್ತ ಪೊಲೀಸರು: ಮುಡಾದಲ್ಲಿ ಈ ಅಕ್ರಮಗಳನ್ನು ಬಯಲು ಮಾಡಲು ತನಿಖೆ ಅಗತ್ಯ

  • ಲಾಟ್ ವ್ಯವಸ್ಥೆಯನ್ನು ಅನುಸರಿಸದೆ 1,095 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ.

  • ಬೇನಾಮಿಗಳಿಗೆ ನಿವೇಶನಗಳ ಹಂಚಿಕೆ.

  • ಅಕ್ಟೋಬರ್ 2023 ರಿಂದ ನಿಷೇಧದ ನಂತರವೂ 252 ನಿವೇಶನಗಳ ಹಂಚಿಕೆ ಆಗಿನ ಮುಡಾ ಅಧ್ಯಕ್ಷ ಕೆ. ಮರಿಗೌಡ ಮತ್ತು ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಅವರ ಸೂಚನೆಯ ಮೇರೆಗೆ ಆಗಿದೆ

  • ಮುಡಾದಲ್ಲಿ ರಿಯಲ್ ಎಸ್ಟೇಟ್ ಏಜೆಂಟ್‌ಗಳು, ಖಾಸಗಿ ವ್ಯಕ್ತಿಗಳು ಮತ್ತು ಏಜೆಂಟ್‌ಗಳ ನಡುವಿನ ನಂಟು, ಅಕ್ರಮವಾಗಿ ನಿವೇಶನಗಳ ಹಂಚಿಕೆಗೆ ಕಾರಣವಾಗಿದೆ

  • ಕೆಲವು ಸಿಬ್ಬಂದಿಗಳ ವಾಟ್ಸಾಪ್ ಸಂದೇಶಗಳಿಂದ ಬಹಿರಂಗಗೊಂಡಂತೆ ಲಂಚ ಪಡೆದ ನಂತರ ನಿವೇಶನಗಳ ಹಂಚಿಕೆ ಮತ್ತು ಲೇಔಟ್‌ಗಳಿಗೆ ಅನುಮೋದನೆ ನೀಡುವಲ್ಲಿ ಜಿ.ಟಿ. ದಿನೇಶ್ ಕುಮಾರ್ ಅವರ ಪಾತ್ರ.

  • ನಿವೇಶನಗಳ ಹಂಚಿಕೆಗಾಗಿ ರಿಯಾಲ್ಟರ್ ಜಯರಾಮು ನೇತೃತ್ವದ ಸಹಕಾರಿ ಸಂಘದಿಂದ ದಿನೇಶ್ ಕುಮಾರ್ ಹಣ ಪಡೆಯುತ್ತಿದ್ದಾರೆ

  • ಮಾಜಿ ಮುಡಾ ಅಧ್ಯಕ್ಷ ಕೆ. ಮರಿಗೌಡ ಅವರು ರಿಯಾಲ್ಟರ್ ಜಯರಾಮು ಅವರಿಂದ ತಮ್ಮ ಪತ್ನಿಗೆ ಮಂಜೂರು ಮಾಡಿದ ನಿವೇಶನವನ್ನು ಮರಳಿ ಪಡೆಯುತ್ತಿದ್ದಾರೆ.

  • ಸ್ವಾಧೀನಪಡಿಸಿಕೊಂಡ ಭೂಮಿಗೆ ಸಂಬಂಧಿಸದವರಿಗೆ ನಿವೇಶನಗಳ ಹಂಚಿಕೆ.

  • ವಿಜಯನಗರ 3 ನೇ ಹಂತದಲ್ಲಿ 17 ನಿವೇಶನಗಳನ್ನು ಎಂ. ರವಿಕುಮಾರ್ ಅವರಿಗೆ ಮಾಲೀಕತ್ವದ ಅನುಪಸ್ಥಿತಿಯಲ್ಲಿ 5 ಎಕರೆ 09 ಗುಂಟೆ ಭೂಮಿಯನ್ನು ಕಳೆದುಕೊಂಡಿದ್ದಕ್ಕಾಗಿ ಮಂಜೂರು ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com