
ಬೆಳಗಾವಿ: ಮಿರಜ್ ಕಡೆಗೆ ಹೊರಟಿದ್ದ ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿ ಉರುಳಿಬಿದ್ದ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಜಿಂದಾಲ್ ಕಾರ್ಖಾನೆಗೆ ಕಬ್ಬಿಣದ ಅದಿರು ತುಂಬಿಕೊಂಡು ಮಿರಜ್ ಕಡೆಗೆ ಹೊರಟಿದ್ದ ಗೂಡ್ಸ್ ರೈಲು ಬೆಳಗಾವಿ ನಗರ ಹೊರವಲಯದಲ್ಲಿ ಹಳಿ ತಪ್ಪಿತು. ಒಂದು ಹಳಿಯಿಂದ ಇನ್ನೊಂದು ಹಳಿಗೆ ರೈಲನ್ನು ಬದಲಾಯಿಸುವ ಸಂದರ್ಭದಲ್ಲಿ ಈ ವ್ಯತ್ಯಾಸವಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದ ರೈಲು ಸಂಚಾರದಲ್ಲಿಯೂ ಅಡಚಣೆ ಉಂಟಾಗಿದೆ. ಸುಮಾರು 4 ತಾಸು ದುರಸ್ತಿ ಕಾರ್ಯ ನಡೆಯಲಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ದುರಸ್ತಿ ಕಾರ್ಯ ಮುಗಿದ ಬಳಿಕ ಆರಂಭಗೊಳ್ಳಲಿವೆ. ಈಗಾಗಲೇ ಮಿರಾಜ್ ನಿಂದ ಬರುತ್ತಿದ್ದ ಚಾಲುಕ್ಯ ಶರಾವತಿ ಎಕ್ಸ್ ಪ್ರೆಸ್, ಎಲ್ ಟಿಟಿ ದಾದರ್, ಅಜ್ಮೇರ್ ಎಕ್ಸ್‌ಪ್ರೆಸ್ ಮಾರ್ಗ ಮಧ್ಯದಲ್ಲಿಯೇ ನಿಂತುಕೊಂಡಿವೆ.
ಬೆಳಗಾವಿಯಿಂದ ಹೊರಟಿದ್ದ ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್, ಬೆಂಗಳೂರು ಜೋದ್ಪುರ್ ಎಕ್ಸ್ ಪ್ರೆಸ್, ಬೆಂಗಳೂರಿಂದ ಭಗತ್ ಕೋಟಿ, ಕ್ಯಾಸಲ್ ರಾಕ್- ಮಿರಜ್ ಪ್ಯಾಸೆಂಜರ್, ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.
Advertisement