CTRನಲ್ಲಿ ಮಸಾಲೆ ದೋಸೆ ಸವಿದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಪಂದ್ಯ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯನವರ ಸಹೋದ್ಯೋಗಿ ಹಿರಿಯ ಸಚಿವ ಡಾ ಹೆಚ್ ಸಿ ಮಹದೇವಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರಿಗೆ ಸಾಥ್ ನೀಡಿದ್ದರು.
CM Siddaramaiah and others at CTR
ಸಿಟಿಆರ್ ನಲ್ಲಿ ಮಸಾಲೆ ದೋಸೆ ಸವಿಯುತ್ತಿರುವ ಸಿಎಂ ಸಿದ್ದರಾಮಯ್ಯ ಮತ್ತು ಇತರರು
Updated on

ಬೆಂಗಳೂರು: ಜಾತಿಗಣತಿ ವರದಿ ಬಿಡುಗಡೆಯ ಒತ್ತಡದ ಮಧ್ಯೆ ಬಿಡುವು ಮಾಡಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಒಡನಾಡಿಗಳ ಜೊತೆ ನಿನ್ನೆ ಸಾಯಂಕಾಲ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸೆಂಟ್ರಲ್ ಟಿಫನ್ ರೂಮ್ ಗೆ(CTR) ಹೋಗಿ ಬಿಸಿಬಿಸಿ ಮಸಾಲೆ ದೋಸೆ ಸವಿದು ಎಂಜಾಯ್ ಮಾಡಿದ್ದಾರೆ.

ಅಲ್ಲಿ ಮಸಾಲೆ ದೋಸೆ ತಿಂದು ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ವರ್ಷಗಳ ಹಿಂದೆ ಅಲ್ಲಿ ದೋಸೆ ತಿಂದಿದ್ದೆ. ದೋಸೆಯ ರುಚಿಯ ಗುಣಮಟ್ಟವನ್ನು ಈಗಲೂ ಸಿಟಿಆರ್ ನಲ್ಲಿ ಕಾಯ್ದುಕೊಂಡು ಬಂದಿದ್ದಾರೆ ಎಂದು ಇಂದು ಮಸಾಲೆ ದೋಸೆ ತಿಂದ ಮೇಲೆ ಅನುಭವವಾಯಿತು ಎಂದು ಬರೆದುಕೊಂಡಿದ್ದಾರೆ.

ಸಿದ್ದರಾಮಯ್ಯನವರ ಸಹೋದ್ಯೋಗಿ ಹಿರಿಯ ಸಚಿವ ಡಾ ಹೆಚ್ ಸಿ ಮಹದೇವಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರಿಗೆ ಸಾಥ್ ನೀಡಿದ್ದರು.

ನಂತರ ಮುಖ್ಯಮಂತ್ರಿಗಳು ಅಲ್ಲಿಂದ ನೇರವಾಗಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿ ರಾಯಲ್ ಚಾಲೆಂಜರ್ಸ್ ವರ್ಸಸ್ ಪಂಜಾಬ್ ಕಿಂಗ್ಸ್ ಐಪಿಎಲ್ ಪಂದ್ಯವನ್ನು ವೀಕ್ಷಿಸಿದರು.

ಬೆಂಗಳೂರು ನಗರದ ದೋಸೆ ಪ್ರಿಯರ ಅಚ್ಚುಮೆಚ್ಚಿನ ಹೊಟೇಲ್, ನಗರದ ಪುರಾತನ ದೋಸೆ ಹೋಟೆಲ್ ಎಂದೇ ಸಿಟಿಆರ್ ಫೇಮಸ್ಸ್. 1920ರಲ್ಲಿ ಮಲ್ಲೇಶ್ವರದಲ್ಲಿ ಆರಂಭವಾದ ಸಿಟಿಆರ್‌, ಬೆಣ್ಣೆ ಮಸಾಲೆ ದೋಸೆ, ಫಿಲ್ಟರ್ ಕಾಫಿಗೆ ಅತ್ಯಂತ ಜನಪ್ರಿಯವಾಗಿದೆ. ಸಿನಿಮಾ ತಾರೆಯರು, ಕ್ರಿಕೆಟ್ ಆಟಗಾರರು, ರಾಜಕಾರಣಿಗಳು ಇಲ್ಲಿಗೆ ಬಂದು ಬಿಸಿ ಬಿಸಿ ದೋಸೆ ಸವಿದು ಹೋಗುತ್ತಿರುತ್ತಾರೆ. ವಾರಾಂತ್ಯದಲ್ಲಿ ಈಗಲೂ ಸಿಟಿಆರ್‌ಗೆ ಹೋದರೆ ದೋಸೆ ಸವಿಯಲು ಕ್ಯೂ ನಿಲ್ಲುವುದು ಅನಿವಾರ್ಯವಾಗಿದೆ.

IPL 2025, ಇಂಡಿಯನ್ ಪ್ರೀಮಿಯರ್ ಲೀಗ್​ನ 34ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸೋಲನುಭವಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com