ಒಣದ್ರಾಕ್ಷಿ ಬೆಲೆ ಏರಿಕೆ: ನಾಲ್ಕು ವರ್ಷಗಳ ತರುವಾಯ ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರರ ಮೊಗದಲ್ಲಿ ಮಂದಹಾಸ

ಕೋವಿಡ್ ಸಾಂಕ್ರಾಮಿಕದ ಕಾಲದಲ್ಲಿ, ಒಣದ್ರಾಕ್ಷಿ ಬೆಲೆ ಕೆಜಿಗೆ 60 ರಿಂದ 150 ರೂ.ಗಳವರೆಗೆ ಇತ್ತು, ಇದರಿಂದ ಉತ್ಪಾದನಾ ವೆಚ್ಚವನ್ನು ಸಹ ಭರಿಸಲಾಗದೆ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದರು.
Raisins cleaning process
ಒಣದ್ರಾಕ್ಷಿ ಸ್ವಚ್ಛತಾ ಕಾರ್ಯ
Updated on

ವಿಜಯಪುರ: ನಾಲ್ಕು ವರ್ಷಗಳ ನಿರಂತರ ನಷ್ಟ ಮತ್ತು ಬೆಲೆ ಕುಸಿತದ ನಂತರ, ಒಣದ್ರಾಕ್ಷಿಗೆ ಉತ್ತಮ ಬೆಲೆ ಪಡೆದಿದ್ದರಿಂದ ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರರ ಮೊಗದಲ್ಲಿ ಅಂತಿಮವಾಗಿ ಮಂದಹಾಸ ಮೂಡಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಬೆಳೆಗಾರರಿಗೆ ಈ ವರ್ಷ ಸ್ವಲ್ವ ರಿಲೀಫ್ ಸಿಕ್ಕಿದೆ.

ಕೋವಿಡ್ ಸಾಂಕ್ರಾಮಿಕದ ಕಾಲದಲ್ಲಿ, ಒಣದ್ರಾಕ್ಷಿ ಬೆಲೆ ಕೆಜಿಗೆ 60 ರಿಂದ 150 ರೂ.ಗಳವರೆಗೆ ಇತ್ತು, ಇದರಿಂದ ಉತ್ಪಾದನಾ ವೆಚ್ಚವನ್ನು ಸಹ ಭರಿಸಲಾಗದೆ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದರು. ಇದೀಗ ಕೆಜಿಗೆ 180ರಿಂದ 380 ರೂ.ವರೆಗೆ ಬೆಲೆ ಏರಿಕೆಯಾಗಿದ್ದು, ರೈತರು ಗಣನೀಯ ಚೇತರಿಕೆ ಕಾಣುತ್ತಿದ್ದಾರೆ. ಕೆಲವು ರೈತರು ದಾಖಲೆಯ-ಹೆಚ್ಚಿನ ದರಗಳನ್ನು ಪಡೆದುಕೊಂಡಿರುವುದು ಭರವಸೆ ಮೂಡಿಸಿದೆ.

ಉತ್ಪಾದನೆಯ ಕುಸಿತದ ನಡುವೆ ಸುಧಾರಿತ ಬೆಲೆಗಳು ಬರುತ್ತವೆ. "ಅತಿಯಾದ ಮುಂಗಾರು ಮಳೆ, ಅಕ್ಟೋಬರ್ ಮತ್ತು ಡಿಸೆಂಬರ್ ನಡುವಿನ ತೀವ್ರ ಚಳಿ, ಮತ್ತು ಭಾರೀ ಇಬ್ಬನಿಯಿಂದ ದ್ರಾಕ್ಷಿತೋಟಗಳಲ್ಲಿ ವ್ಯಾಪಕ ರೋಗ ಮತ್ತು ಕಾಂಡ ಉದುರುವಿಕೆಗೆ ಕಾರಣವಾಯಿತು. ಇದರ ಪರಿಣಾಮವಾಗಿ, ಒಟ್ಟಾರೆ ಇಳುವರಿ ಶೇಕಡಾ 65 ರಷ್ಟು ಕುಸಿದಿದೆ" ಎಂದು ದ್ರಾಕ್ಷಿ ಬೆಳೆಗಾರರ ​​ಸಂಘದ ರಾಜ್ಯ ಅಧ್ಯಕ್ಷ ಅಭಿಕುಮಾರ್ ನಾಂದ್ರೇಕರ್ ಹೇಳಿದರು.

ಸಾಮಾನ್ಯವಾಗಿ ಪ್ರತಿ ಎಕರೆ ಭೂಮಿಯಲ್ಲಿ ಸುಮಾರು 20 ಟನ್ ದ್ರಾಕ್ಷಿ ಉತ್ಪಾದನೆಯಾಗುತ್ತಿದ್ದು, ಇದರಿಂದ ಪ್ರತಿ ಹಂಗಾಮಿನಲ್ಲಿ 4.5 ಟನ್ ಒಣದ್ರಾಕ್ಷಿ ತಯಾರಿಸಲು ಸಹಾಯ ಮಾಡುತ್ತದೆ, ಆದರೆ ಈ ವರ್ಷ ಪ್ರಕೃತಿಯ ವೈಪರೀತ್ಯದಿಂದ ದ್ರಾಕ್ಷಿ ಉತ್ಪಾದನೆಯು ಎಕರೆಗೆ ಸುಮಾರು 12 ಟನ್‌ಗೆ ಇಳಿದಿದೆ ಎಂದು ಹೇಳಿದರು.

Raisins cleaning process
ಲಾಭವಿಲ್ಲದೆ ಕೈ ಸುಟ್ಟುಕೊಂಡ ರೈತರು: ಶುಂಠಿ ಕೃಷಿಗಾಗಿ ಕೇರಳ ಬೆಳೆಗಾರರಿಗೆ ಭೂಮಿ ಗುತ್ತಿಗೆ ನೀಡಲು ಧಾರವಾಡ ರೈತರು ಮುಂದು!

ಇಳುವರಿ ಕಡಿಮೆಯಾಗಿದ್ದರೂ, ಹೆಚ್ಚಿನ ಬೆಲೆ ಕೊರತೆಯನ್ನು ಸರಿದೂಗಿಸಿದೆ. ನಷ್ಟದ ಹಿನ್ನೆಲೆಯಲ್ಲಿ ದ್ರಾಕ್ಷಿಯನ್ನು ಕಿತ್ತು ಹಾಕಿದ್ದ ಹಲವು ರೈತರು ಇದೀಗ ಮತ್ತೆ ದ್ರಾಕ್ಷಿ ಕೃಷಿಯತ್ತ ಆಸಕ್ತಿ ತೋರುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸುಮಾರು 37,000 ಹೆಕ್ಟೇರ್‌ನಲ್ಲಿ ದ್ರಾಕ್ಷಿ ಬೆಳೆಯಲಾಗಿದ್ದು, ವಿಜಯಪುರ ಜಿಲ್ಲೆಯು ಮೊದಲ ಸ್ಥಾನದಲ್ಲಿದ್ದು, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳು ನಂತರದ ಸ್ಥಾನದಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆ ಒಣದ್ರಾಕ್ಷಿ ಉತ್ಪಾದನೆಗೆ ಸಂಬಂಧಿಸಿದಂತೆ, ಮೂರು ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಸುಮಾರು 2.30 ಲಕ್ಷ ಟನ್ ಒಣದ್ರಾಕ್ಷಿ ಉತ್ಪಾದನೆಯಾಗುತ್ತದೆ, ಆದರೆ ಈ ವರ್ಷ ನಷ್ಟದಿಂದಾಗಿ ಒಟ್ಟು ಉತ್ಪಾದನೆಯು ಸುಮಾರು 65,000 ಟನ್‌ಗೆ ಕುಸಿದಿದೆ, ದ್ರಾಕ್ಷಿ ಬೆಳೆಗಾರರು ಇನ್ನೂ ಎರಡು ವರ್ಷಗಳವರೆಗೆ ಉತ್ತಮ ಬೆಲೆಯನ್ನು ಪಡೆದರೆ, ಅವರು ಹಿಂದಿನ ನಷ್ಟದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಹವಾಮಾನ ವೈಪರೀತ್ಯದಿಂದ ಶೇ.65 ರಷ್ಟು ಬೆಳೆ ಹಾನಿಯಾಗಿ ರೈತರು ಭಾರೀ ನಷ್ಟವನ್ನು ಎದುರಿಸಿದ್ದಾರೆ. ಸರಕಾರ ಪರಿಹಾರ ನೀಡಬೇಕು ಮತ್ತು ಸರಿಯಾದ ಬೆಳೆ ವಿಮೆ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com