ರಾಷ್ಟ್ರದ ಭದ್ರತೆಗೆ ಬೆದರಿಕೆ: ಭಾರತದಲ್ಲಿ ಸ್ವಿಟ್ಜರ್ಲೆಂಡ್ ಮೂಲದ Proton Mail ನಿರ್ಬಂಧಕ್ಕೆ ಹೈಕೋರ್ಟ್ ಆದೇಶ

ಪ್ರೋಟಾನ್ ಮೇಲ್ ಬಳಸುವ ತನ್ನ ಉದ್ಯೋಗಿಗಳು ಮತ್ತು ಗ್ರಾಹಕರಿಗೆ ಅಶ್ಲೀಲ ಇಮೇಲ್ ಸಂದೇಶಗಳನ್ನು ಕಳುಹಿಸಿದ ನಂತರ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು.
High COURT
ಹೈಕೋರ್ಟ್
Updated on

ಬೆಂಗಳೂರು: ಭಾರತದಲ್ಲಿ ಸ್ವಿಟ್ಜರ್ಲೆಂಡ್ ಮೂಲದ ಪ್ರೋಟಾನ್ ಮೇಲ್ ಕಾರ್ಯಾಚರಣೆಯನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಹೈಕೋರ್ಟ್ ಮಂಗಳವಾರ ಕೇಂದ್ರಕ್ಕೆ ಸೂಚಿಸಿದೆ.ಈ ಸಂಬಂಧ ಎಂ.ಮೋಸರ್‌ ಡಿಸೈನ್‌ ಅಸೋಸಿಯೇಟ್ಸ್‌ ಆಫ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ಪೀಠ ಈ ಆದೇಶ ನೀಡಿತು.

ಪ್ರೋಟಾನ್ ಮೇಲ್ ಬಳಸುವ ತನ್ನ ಉದ್ಯೋಗಿಗಳು ಮತ್ತು ಗ್ರಾಹಕರಿಗೆ ಅಶ್ಲೀಲ ಇಮೇಲ್ ಸಂದೇಶಗಳನ್ನು ಕಳುಹಿಸಿದ ನಂತರ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿದಾರರು ಪ್ರೋಟಾನ್ ಮೇಲ್ ನ ಮುಂದುವರಿದ ಕಾರ್ಯಾಚರಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ದೇಶದಲ್ಲಿ ಅದನ್ನು ನಿರ್ಬಂಧಿಸಲು ನ್ಯಾಯಾಲಯದ ಮುಂದೆ ಮನವಿ ಮಾಡಿದರು.

ಆಕ್ಷೇಪಾರ್ಹ ಮೇಲ್‌ಗಳನ್ನು ಕಳುಹಿಸುವವರ ಬಗ್ಗೆ ಪೊಲೀಸ್ ಇಲಾಖೆಗೆ ವಿವರಗಳನ್ನು ನೀಡಲು ಪ್ರೋಟಾನ್ ಮೇಲ್ ನಿರಾಕರಿಸುತ್ತಿದೆ ಈ ಹಿನ್ನೆಲೆಯಲ್ಲಿ ಪೊಲೀಸ್ ತನಿಖೆಯು ನಿಷ್ಪರಿಣಾಮಕಾರಿಯಾಗಿದೆ ಎಂದು ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದರು.

ಪ್ರೋಟಾನ್ ಮೇಲ್ ತನ್ನ ಸರ್ವರ್‌ಗಳನ್ನು ಭಾರತದಿಂದ ತೆಗೆದುಹಾಕಿದ್ದು, ಇತ್ತೀಚಿನ ಪ್ರೋಟಾನ್ ಮೇಲ್ ಖಾತೆಗಳಿಂದ ಶಾಲೆಗಳಿಗೆ ಬಾಂಬ್ ಬೆದರಿಕೆಗಳನ್ನು ಕಳುಹಿಸಲಾಗಿದ್ದು, ಇದು ರಾಷ್ಟ್ರದ ಭದ್ರತೆಗೆ ಬೆದರಿಕೆ ಎಂದು ವಕೀಲರು ಒತ್ತಿ ಹೇಳಿದರು.

ಭಾರತೀಯ ಏಜೆನ್ಸಿಗಳ ಮೇಲ್ವಿಚಾರಣೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಪ್ರೋಟಾನ್ ಮೇಲ್ ಬಳಕೆದಾರರಿಗೆ ಸೂಚನೆಗಳನ್ನು ನೀಡುತ್ತದೆ ಮತ್ತು ಪ್ರೋಟಾನ್ ಇ-ಮೇಲ್ ಐಡಿಯನ್ನು ರಚಿಸಲು ಕೇವಲ 30 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಯಾವುದೇ ರೀತಿಯ ಪರಿಶೀಲನೆಗಳಿಲ್ಲದೆ ಇದನ್ನು ಮಾಡಲಾಗುತ್ತದೆ ಎಂದು ವಕೀಲರು ನ್ಯಾಯಪೀಠದ ಮುಂದೆ ಹೇಳಿದರು.

High COURT
ನಿಮ್ಮನ್ನು ಪೀಸ್​ ಪೀಸ್ ಮಾಡಿ ಫ್ರಿಡ್ಜ್ ಮತ್ತು ಟ್ರ್ಯಾಲಿ ಬ್ಯಾಗ್‌ಗೆ ತುಂಬ್ತಿನಿ: CM, DCM ಗೆ ಬೆದರಿಕೆ ಸಂದೇಶ

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಪ್ರೋಟಾನ್ ಮೇಲ್ ಅನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರದ ಏಜೆನ್ಸಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com