2028 ರ ವೇಳೆಗೆ 110 ಹಳ್ಳಿಗಳ ಎಲ್ಲಾ 3.5 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ: BWSSB

ಬೊಮ್ಮನಹಳ್ಳಿ ಬಿಬಿಎಂಪಿ ವಲಯಕ್ಕೆ ಒಳಪಡುವ ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಮಂಡಳಿಯು ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಕುಡ್ಲುವಿನಲ್ಲಿ ನೆಲಮಟ್ಟದ ಜಲಾಶಯ (GLR) ನಿರ್ಮಿಸಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: 2028 ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಿತಿಯೊಳಗೆ ತಂದಿರುವ 110 ಹೊಸ ಹಳ್ಳಿಗಳ 3.5 ಲಕ್ಷ ಮನೆಗಳಲ್ಲಿ ಒಂದು ಲಕ್ಷ ಮನೆಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನೈರ್ಮಲ್ಯ ಮತ್ತು ನೀರು ಸರಬರಾಜು ಸಂಪರ್ಕಗಳನ್ನು ಒದಗಿಸಲಾಗಿತ್ತು ಎಂದು ಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ತಿಳಿಸಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಡಿಯಲ್ಲಿರುವ ವಾರ್ಡ್‌ಗಳ ಗಡಿ ನಿರ್ಣಯವು ಈ ಹಳ್ಳಿಗಳಲ್ಲಿನ ಬಿಡಬ್ಲ್ಯುಎಸ್ಎಸ್ಬಿ ಸೇವೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗೆ ತಿಳಿಸಿದ್ದಾರೆ.

ಬಿಡಬ್ಲ್ಯುಎಸ್ಎಸ್ಬಿ 110 ಹಳ್ಳಿಗಳ 3.5 ಲಕ್ಷ ಮನೆಗಳಿಗೆ ನೀರು ಮತ್ತು ನೈರ್ಮಲ್ಯ ಸಂಪರ್ಕಗಳನ್ನು ಒದಗಿಸಬೇಕು. 2028 ರ ವೇಳೆಗೆ, ಎಲ್ಲಾ 3.5 ಲಕ್ಷ ಮನೆಗಳು ನೈರ್ಮಲ್ಯ ಮತ್ತು ನೀರಿನ ಸಂಪರ್ಕಗಳನ್ನು ಹೊಂದಿರುತ್ತವೆ ಎಂದು ಹೇಳಿದರು.

ಈ ಗ್ರಾಮಗಳು ಕಾವೇರಿ ನೀರು ಸರಬರಾಜು ಯೋಜನೆಯಡಿಯಲ್ಲಿ ಸುರಕ್ಷಿತ ಕುಡಿಯುವ ನೀರನ್ನು ಪಡೆಯುತ್ತವೆ. ಈ ಯೋಜನೆಯು 110 ಹಳ್ಳಿಗಳಲ್ಲಿನ ನೀರಿನ ಕೊರತೆಯನ್ನು ನೀಗಿಸುತ್ತದೆ. ಈ ಯೋಜನೆಯಿಂದ ಸುಮಾರು 1.7 ಮಿಲಿಯನ್ ಜನರು ಪ್ರಯೋಜನ ಪಡೆಯುತ್ತಾರೆ ಎಂದು ಕಾವೇರಿ ಹಂತ 5ರ ಹಿರಿಯ ಬಿಡಬ್ಲ್ಯುಎಸ್ಎಸ್ಬಿ ಎಂಜಿನಿಯರ್ ಹೇಳಿದ್ದಾರೆ.

ಬೊಮ್ಮನಹಳ್ಳಿ ಬಿಬಿಎಂಪಿ ವಲಯಕ್ಕೆ ಒಳಪಡುವ ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಮಂಡಳಿಯು ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಕುಡ್ಲುವಿನಲ್ಲಿ ನೆಲಮಟ್ಟದ ಜಲಾಶಯ (GLR) ನಿರ್ಮಿಸಿದೆ. ಆರ್‌ಆರ್ ನಗರ ವಲಯಕ್ಕೆ ಒಳಪಡುವ ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಎಚ್‌ಎಸ್‌ಆರ್ ಲೇಔಟ್‌ನ ಜಂಬು ಸವಾರಿ ಗುಡ್ಡದಲ್ಲಿ ಅಂತಹ ಮತ್ತೊಂದು ಜಲಾಶಯವನ್ನು ನಿರ್ಮಿಸಲಾಗಿದೆ. ಯಲಹಂಕ ವಲಯಕ್ಕೆ ಒಳಪಡುವ ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಮಂಡಳಿಯು ಜಿಕೆವಿಕೆಯಲ್ಲಿ ನೆಲಮಟ್ಟದ ಜಲಾಶಯವನ್ನು ನಿರ್ಮಿಸಿದೆ.

Representational image
ಅಕ್ರಮ ಸಂಪರ್ಕ ಹೊಂದಿದ್ದ 338 ಮನೆಗಳಿಗೆ BWSSB ನೋಟಿಸ್

ಮಹದೇವಪುರ ವಲಯಕ್ಕೆ ಒಳಪಡುವ ಹೊರಮಾವು, ಹೆಣ್ಣೂರು, ಕೆಆರ್ ಪುರಂ ಮತ್ತು ಕಾಡುಗೋಡಿ ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಮಂಡಳಿಯು ಬಿ ನಾರಾಯಣಪುರದಲ್ಲಿ ಜಲಾಶಯ ಮತ್ತು ಬೂಸ್ಟರ್ ಪಂಪಿಂಗ್ ಸ್ಟೇಷನ್ ಮತ್ತು ಒಎಂಬಿಆರ್ ಲೇಔಟ್‌ನಲ್ಲಿ ಮತ್ತೊಂದು ಜಲಾಶಯವನ್ನು ನಿರ್ಮಿಸಿದೆ.

ಬಾಬುಸಾ ಪಾಳ್ಯ, ಪ್ರಶಾಂತ್ ಲೇಔಟ್ ಮತ್ತು ರಾಮಮೂರ್ತಿ ನಗರದ ನಿವಾಸಿಗಳಿಂದ ನೀರು ಸರಬರಾಜಿನಲ್ಲಿ ಆಗಾಗ್ಗೆ ಅಡಚಣೆ ಮತ್ತು ನೀರು ಕಲುಷಿತಗೊಳ್ಳುತ್ತಿದೆ ಎಂಬ ದೂರುಗಳ ಮೇರೆಗೆ, ಮಂಡಳಿಯ ಅಧಿಕಾರಿಗಳು ಈ ಸಮಸ್ಯೆಗಳಿಗೆ ಬೆಸ್ಕಾಮ್ ಮತ್ತು ಟೆಲಿಕಾಂ ಸೇವಾ ಪೂರೈಕೆದಾರರನ್ನು ದೂಷಿಸಿದರು. ಈ ಸೇವಾ ಪೂರೈಕೆದಾರರಿಂದ ಬಿಡಬ್ಲ್ಯುಎಸ್‌ಎಸ್‌ಬಿ ಪೈಪ್ ಲೈನ್ ಗಳು ಹಾನಿಗೀಡಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com