ರಾಹುಲ್ ಗಾಂಧಿ ಪ್ರತಿಭಟನೆಗೆ ಮರ ಕತ್ತರಿಸಿದ ಆರೋಪ: ಪೊಲೀಸ್ ಅಧಿಕಾರಿ ವಿರುದ್ಧ ಬಿಬಿಎಂಪಿ ಕೇಸು ದಾಖಲು

ಬಿಬಿಎಂಪಿ ಅರಣ್ಯ ವಿಭಾಗದ ಪ್ರಕಾರ, ಅರಣ್ಯ ಸಂಬಂಧಿತ ಅಪರಾಧಕ್ಕಾಗಿ ಎಫ್‌ಐಆರ್ ದಾಖಲಿಸಿರುವ ಅಧಿಕಾರಿಯನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ನಿಯೋಜಿಸಲಾದ ಮುಖ್ಯ ಕಾನ್‌ಸ್ಟೆಬಲ್ ಮಹಾದೇವ ಸ್ವಾಮಿ ಎಂದು ಗುರುತಿಸಲಾಗಿದೆ.
A section of Freedom Park’s compound wall was demolished to create a larger entrance for the Congress protest
ಕಾಂಗ್ರೆಸ್ ಪ್ರತಿಭಟನೆಗೆ ದೊಡ್ಡ ಪ್ರವೇಶ ದ್ವಾರವನ್ನು ರಚಿಸಲು ಫ್ರೀಡಂ ಪಾರ್ಕ್‌ನ ಕಾಂಪೌಂಡ್ ಗೋಡೆಯ ಒಂದು ಭಾಗವನ್ನು ಕೆಡವಲಾಯಿತು.
Updated on

ಬೆಂಗಳೂರು: ಆಗಸ್ಟ್ 5 ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಕಾಂಗ್ರೆಸ್ ಪ್ರತಿಭಟನೆಯ ಸಂದರ್ಭದಲ್ಲಿ ಉತ್ತಮ ಕಣ್ಗಾವಲಿಗೆಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಆವರಣದಿಂದ ಮರವನ್ನು ಕಡಿದು ಹಾಕಿದ್ದಕ್ಕೆ ಪೊಲೀಸ್ ಕಾನ್‌ಸ್ಟೆಬಲ್ ವಿರುದ್ಧ ಬಿಬಿಎಂಪಿ ದೂರು ದಾಖಲಿಸಿದೆ.

ಬಿಬಿಎಂಪಿ ಅರಣ್ಯ ವಿಭಾಗದ ಪ್ರಕಾರ, ಅರಣ್ಯ ಸಂಬಂಧಿತ ಅಪರಾಧಕ್ಕಾಗಿ ಎಫ್‌ಐಆರ್ ದಾಖಲಿಸಿರುವ ಅಧಿಕಾರಿಯನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ನಿಯೋಜಿಸಲಾದ ಮುಖ್ಯ ಕಾನ್‌ಸ್ಟೆಬಲ್ ಮಹಾದೇವ ಸ್ವಾಮಿ ಎಂದು ಗುರುತಿಸಲಾಗಿದೆ.

ಪ್ರತಿಭಟನೆ ಸಮಯದಲ್ಲಿ ಭದ್ರತೆ ಮತ್ತು ಇತರ ವ್ಯವಸ್ಥೆಗಳಿಗೆ ಪೊಲೀಸ್ ಅಧಿಕಾರಿಗಳು ಜವಾಬ್ದಾರರಾಗಿರುತ್ತಾರೆ, ಪ್ರದೇಶವನ್ನು ಪ್ರತಿಭಟನೆಗೆ ತೆರವು ಮಾಡಿಕೊಡಲು ಇಂಡಿಯನ್ ಬರ್ಡ್ ಚೆರ್ರಿ ಮರವನ್ನು ಕತ್ತರಿಸಲಾಯಿತು, ಅಧಿಕಾರಿಗಳು ಕಾರ್ಮಿಕರಿಗೆ ಮರಗಳನ್ನು ಕತ್ತರಿಸಲು ನಿರ್ದೇಶಿಸುತ್ತಿರುವುದು ಕಂಡುಬಂದಿದೆ.

ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976 ರ ಸೆಕ್ಷನ್ 8 ರ ಅಡಿಯಲ್ಲಿ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ. ಇದು ಇಲಾಖೆಯು ದಂಡ ವಿಧಿಸಬಹುದಾದ ಅಪರಾಧವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

A section of Freedom Park’s compound wall was demolished to create a larger entrance for the Congress protest
ಚುನಾವಣಾ ಅಕ್ರಮ ಆರೋಪ: ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ; ಸೋಲು ಮರೆಮಾಚಲು ನಡೆಸುತ್ತಿರುವ ಹತಾಶ ಯತ್ನ- BJP ಟೀಕೆ

ನಿಯಮಗಳ ಪ್ರಕಾರ, ಮರ ಕಡಿಯುವ ಮೊದಲು ಅಧಿಕಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಪೂರ್ವಾನುಮತಿ ಪಡೆಯಬೇಕಿತ್ತು. ನಮ್ಮ ರೇಂಜ್ ಫಾರೆಸ್ಟ್ ಆಫೀಸರ್ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ, ವರದಿ ಸಲ್ಲಿಸಿದ್ದರು, ಠಾಣಾಧಿಕಾರಿಗೂ ಘಟನೆಯ ಬಗ್ಗೆ ತಿಳಿಸಲಾಗಿತ್ತು. ಕಾನ್‌ಸ್ಟೆಬಲ್‌ಗೆ ಎಚ್ಚರಿಕೆ ನೀಡಿ, ಈ ಅರಣ್ಯ ಅಧಿಕಾರಿಗಳ ಸಲಹೆಯನ್ನು ಅನುಸರಿಸುವಂತೆ ಕೇಳಲಾಯಿತು.

ಆಗಸ್ಟ್ 5 ರಂದು ಭಾರಿ ಜನಸಮೂಹ ಸೇರುವುದರಿಂದ ಮತ್ತು ವಿವಿಐಪಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವುದರಿಂದ, ಪ್ರತಿಭಟನಾ ಸ್ಥಳದ ಗೋಚರತೆ ಮತ್ತು ಕ್ಯಾಮೆರಾ ಚಿತ್ರೀಕರಣಕ್ಕಾಗಿ ಮರವನ್ನು ತೆಗೆದುಹಾಕಲು ಅಧಿಕಾರಿ ನಿರ್ಧರಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸ್ ತಂಡಕ್ಕೆ ವಿಸ್ತೃತ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳುವಂತೆಯೂ ಕೇಳಲಾಗಿದೆ.

ಬೆಳಗಾವಿಯಲ್ಲಿ ಬಿಜೆಪಿ ಪ್ರತಿಭಟನಾಕಾರರು ಕಾಂಗ್ರೆಸ್ ಸಭೆಗೆ ನುಗ್ಗಿದ ಹಿಂದಿನ ಘಟನೆ ಮತ್ತು ಬೆಂಗಳೂರಿನಲ್ಲಿ ಆರ್ ಸಿಬಿ ಆಚರಣೆಯ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ಕಾಲ್ತುಳಿತ ಘಟನೆಯನ್ನು ಪರಿಗಣಿಸಲಾಗಿದ್ದು, ರಾಹುಲ್ ಗಾಂಧಿ ಭೇಟಿಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com