
ಸೋಮವಾರ ವಿಜಯಪುರ ಜಿಲ್ಲೆಯಲ್ಲಿ ಎರಡು ಕಡಿಮೆ ತೀವ್ರತೆಯ ಕಂಪನಗಳು ದಾಖಲಾಗಿದ್ದು, ರಿಕ್ಟರ್ ಮಾಪಕದಲ್ಲಿ 2.6 ತೀವ್ರತೆಯನ್ನು ಹೊಂದಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ಪ್ರಕಾರ, ಈ ಕಂಪನಗಳು ರಿಕ್ಟರ್ ಮಾಪಕದಲ್ಲಿ 2.6 ತೀವ್ರತೆಯನ್ನು ಹೊಂದಿದ್ದವು.
ಮೊದಲನೆಯದು ಟಿಕೋಟಾ ತಾಲ್ಲೂಕಿನ ಹೊನ್ವಾಡ್ ಗ್ರಾಮ ಪಂಚಾಯತ್‌ನ ಪೂರ್ವ-ಈಶಾನ್ಯ (ENE) 2.9 ಕಿ.ಮೀ ದೂರದಲ್ಲಿ ಬೆಳಿಗ್ಗೆ 11.41 ಕ್ಕೆ ಸಂಭವಿಸಿದೆ ಮತ್ತು ಎರಡನೆಯದು ಬಸವನ ಬಾಗೇವಾಡಿ ತಾಲ್ಲೂಕಿನ ಮಂಗೋಲಿ ಗ್ರಾಮ ಪಂಚಾಯತ್‌ನಲ್ಲಿ ಕೇಂದ್ರೀಕೃತವಾಗಿದೆ.
ಭೂಕಂಪದ ಘಟನೆಯು 10 ಕಿ.ಮೀ ಆಳದಲ್ಲಿ ಸಂಭವಿಸಿದೆ. "ಸೆಸ್ಮಿಕ್ ತೀವ್ರತೆಯ ನಕ್ಷೆಯ ಪ್ರಕಾರ, ಭೂಕಂಪನದ ತೀವ್ರತೆಯು ತುಂಬಾ ಕಡಿಮೆಯಾಗಿದೆ ಮತ್ತು ಭೂಕಂಪ ಕೇಂದ್ರಬಿಂದುವಿನಿಂದ 20-30 ಕಿ.ಮೀ ರೇಡಿಯಲ್ ದೂರದವರೆಗೆ ಅನುಭಕ್ಕೆ ಬರಬಹುದಾಗಿದೆ. ತೀವ್ರತೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಈ ರೀತಿಯ ಭೂಕಂಪಗಳು ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿಯನ್ನುಂಟುಮಾಡುವುದಿಲ್ಲ. ಆದರೂ ಸ್ಥಳೀಯ ಕಂಪನಗಳು ಅನುಭವಿಸಬಹುದು" ಎಂದು KSNDMC ಹೇಳಿಕೆಯಲ್ಲಿ ತಿಳಿಸಿದೆ.
ಭೂಕಂಪನ ಕೇಂದ್ರಬಿಂದು ಭೂಕಂಪ ವಲಯ -3 ರಲ್ಲಿದೆ ಮತ್ತು ಭೂಕಂಪ-ಟೆಕ್ಟೋನಿಕ್ ನಕ್ಷೆಯ ಪ್ರಕಾರ ಈ ಪ್ರದೇಶವು ಯಾವುದೇ ರಚನಾತ್ಮಕ ಸ್ಥಗಿತಗಳಿಂದ ಮುಕ್ತವಾಗಿದೆ ಎಂದು ಅದು ಹೇಳಿದೆ.
"ಗಮನಿಸಲಾದ ಪ್ರಮಾಣ ಮತ್ತು ತೀವ್ರತೆಗಳು ತುಂಬಾ ಕಡಿಮೆ ಇರುವುದರಿಂದ ಸಮುದಾಯವು ಭಯಭೀತರಾಗುವ ಅಗತ್ಯವಿಲ್ಲ" ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.
Advertisement