ಈ ವರ್ಷಾಂತ್ಯಕ್ಕೆ ಭೂ ಕಂದಾಯ ದಾಖಲೆಗಳ ಡಿಜಿಟಲೀಕರಣ ಪೂರ್ಣ: ಸಚಿವ ಕೃಷ್ಣ ಬೈರೇಗೌಡ

ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಗುರಿಯನ್ನು ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಸಚಿವರು ಹೇಳಿದರು.
Revenue Minister Krishna Byre Gowda inspects documents after launching the ‘Bhoo Suraksha’ scheme in Bengaluru on Tuesday
ಬೆಂಗಳೂರಿನಲ್ಲಿ 'ಭೂ ಸುರಕ್ಷಾ' ಯೋಜನೆಗೆ ಚಾಲನೆ ನೀಡಿದ ನಂತರ ಕಂದಾಯ ಸಚಿವ ಕೃಷ್ಣ ಬೈರೇಗೌಡ ದಾಖಲೆಗಳನ್ನು ಪರಿಶೀಲಿಸಿದರು.
Updated on

ಬೆಂಗಳೂರು: ರಾಜ್ಯದಲ್ಲಿರುವ 100 ಕೋಟಿ ಭೂಕಂದಾಯ ದಾಖಲೆಗಳಲ್ಲಿ 35.36 ಕೋಟಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಡಿಸೆಂಬರ್ ಅಂತ್ಯದ ವೇಳೆಗೆ ಉಳಿದ 65 ಕೋಟಿ ಪುಟಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದು ಅವರು ಹೇಳಿದರು.

ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಗುರಿಯನ್ನು ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಸಚಿವರು ಹೇಳಿದರು.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ 'ಭೂ ಸುರಕ್ಷಾ' ಯೋಜನೆಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಸಚಿವರು, ಇಂದಿನಿಂದ ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಕಚೇರಿಗಳು ಸಹ ದಾಖಲೆಗಳನ್ನು ಸ್ಕ್ಯಾನ್ ಮಾಡಲು ಪ್ರಾರಂಭಿಸುತ್ತವೆ ಎಂದು ಹೇಳಿದರು.

246 ತಾಲ್ಲೂಕುಗಳ ತಹಶೀಲ್ದಾರ್ ಕಚೇರಿಯಲ್ಲಿ, 'ಎ' ಮತ್ತು 'ಬಿ' ಖಾತಾಗಳನ್ನು ಸ್ಕ್ಯಾನ್ ಮಾಡಲಾಗಿದೆ. ಭೂ ಮಾಲೀಕರು ಡಿಜಿಟಲೀಕರಣಕ್ಕಾಗಿ 'ಭೂ ಸುರಕ್ಷಾ' ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕೆಂದು ತಿಳಿದಿಲ್ಲದಿದ್ದರೆ ನಾಡ ಕಚೇರಿಗೆ ಬಂದು ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

Revenue Minister Krishna Byre Gowda inspects documents after launching the ‘Bhoo Suraksha’ scheme in Bengaluru on Tuesday
ರಾಜ್ಯದಲ್ಲಿ 11.8 ಲಕ್ಷ ನಕಲಿ ಸಾಮಾಜಿಕ ಭದ್ರತಾ ಪಿಂಚಣಿ ಫಲಾನುಭವಿಗಳ ಪತ್ತೆ: ಕಂದಾಯ ಸಚಿವ ಕೃಷ್ಣ ಭೈರೇಗೌಡ

ರಾಜ್ಯದ ಕಂದಾಯ ಇಲಾಖೆಯು ಕಳೆದ ವರ್ಷದಿಂದ ಎಲ್ಲಾ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡುವ ಕೆಲಸ ಮಾಡುತ್ತಿದೆ. 246 ತಾಲ್ಲೂಕುಗಳಲ್ಲಿ 26 ತಾಲ್ಲೂಕುಗಳಲ್ಲಿ ತಹಶೀಲ್ದಾರರು ಎ ಮತ್ತು ಬಿ ಖಾತಾಗಳ ಸ್ಕ್ಯಾನಿಂಗ್ ನ್ನು ಪೂರ್ಣಗೊಳಿಸಿದ್ದಾರೆ.

ದಾಖಲೆ ಕೊಠಡಿಯನ್ನು ಸ್ಕ್ಯಾನ್ ಮಾಡಿ ಆಧುನೀಕರಿಸುವ ಮೂಲಕ ದಾಖಲೆಗಳ ರಕ್ಷಣೆಗಾಗಿ ಕಂದಾಯ ಇಲಾಖೆಯು 5 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಜನರು ಮಧ್ಯವರ್ತಿಗಳ ಹಾವಳಿಯನ್ನು ತಡೆಯುವುದು ಮತ್ತು ಭಾಮಾಲೀಕರ ಭೂ ದಾಖಲೆಗಳು ಅವರ ಬೆರಳ ತುದಿಯಲ್ಲಿ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.

ಭೂ ರಕ್ಷಣಾ ಯೋಜನೆ

10 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಭೂ ಮಾಲೀಕತ್ವಕ್ಕೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಎ ಮತ್ತು ಬಿ ವರ್ಗದ ದಾಖಲೆಗಳಾಗಿ ಸಂರಕ್ಷಿಸಲಾಗಿದೆ. ನಾವು ಭೂ ರಕ್ಷಣಾ ಯೋಜನೆಯನ್ನು ತರುತ್ತಿದ್ದೇವೆ.

ಜನರು ಅಗತ್ಯ ದಾಖಲೆಗಳಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ, ಅಂತಹ ದಾಖಲೆಗಳನ್ನು ಸ್ಕ್ಯಾನ್ ಮಾಡಿ ವಿತರಿಸುತ್ತೇವೆ. ಪ್ರಮಾಣೀಕೃತ ದಾಖಲೆಗಳನ್ನು ಮಾತ್ರ ಆನ್‌ಲೈನ್‌ನಲ್ಲಿ ವಿತರಿಸಲಾಗುತ್ತದೆ. ದಾಖಲೆಗಳ ನಕಲಿ ನಮೂದು ಮತ್ತು ಸಲ್ಲಿಕೆ ಎಲ್ಲವನ್ನೂ ಪತ್ತೆಹಚ್ಚಲಾಗುತ್ತದೆ. ಭೂ ಸುರಕ್ಷಾ ಯೋಜನೆ ಜಾರಿಯಲ್ಲಿರುವುದರಿಂದ ನಕಲಿ ದಾಖಲೆಗಳ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com