ರೇಣುಕಾಸ್ವಾಮಿ ಹತ್ಯೆ ಕೇಸ್: ನಟ Darshan ಕೋರ್ಟ್ ಗೆ ಹಾಜರು, ವಿಚಾರಣೆ ಸೆಪ್ಟೆಂಬರ್ 9ಕ್ಕೆ ಮುಂದೂಡಿಕೆ

ಆ ದಿನ ಪ್ರಕರಣದ ಎಲ್ಲಾ ಆರೋಪಿಗಳು ಕಡ್ಡಾಯವಾಗಿ ಹಾಜರು ಇರಬೇಕು ಎಂದು ನಿರ್ದೇಶಿಸಿದೆ.
Darshan and Pavitra Gowda
ದರ್ಶನ್ , ಪವಿತ್ರಾ ಗೌಡ ವಿಚಾರಣೆಗೆ ಹಾಜರು
Updated on: 

ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಇಂದು ದರ್ಶನ್, ಪವಿತ್ರಾ ಗೌಡ ಹಾಗೂ ಇತರರನ್ನು 64ನೇ ಸೆಷನ್ಸ್ ಕೋರ್ಟ್​ನಲ್ಲಿ ವಿಚಾರಣೆ ನಡೆಸಲಾಗಿದೆ.

ಆದರೆ ಕೇಸಿನಲ್ಲಿ ಎ10 ವಿನಯ್ , ಎ15 ,ಕಾರ್ತಿಕ್ ಹಾಗೂ ಎ 16 ಕೇಶವಮೂರ್ತಿ ಮತ್ತು ಎ17 ನಿಖಿಲ್ ಕೋರ್ಟ್​​ಗೆ ಹಾಜಾರಾಗಿಲ್ಲ ಹೀಗಾಗಿ, ಸೆಪ್ಟೆಂಬರ್9 ಕ್ಕೆ ಮುಂದಿನ ದಿನಾಂಕ ವಿಚಾರಣೆಯನ್ನು ನಿಗದಿಪಡಿಸಲಾಗಿದೆ.

ಆ ದಿನ ಪ್ರಕರಣದ ಎಲ್ಲಾ ಆರೋಪಿಗಳು ಕಡ್ಡಾಯವಾಗಿ ಹಾಜರು ಇರಬೇಕು ಎಂದು ನಿರ್ದೇಶಿಸಿದೆ.

ಹೈಕೋರ್ಟ್ ಜಾಮೀನು ಆದೇಶ ರೀತಿಯ ಬಗ್ಗೆ ಆಕ್ಷೇಪಿಸಿದ್ದ ನ್ಯಾಯಪೀಠ ಲಿಖಿತ ವಾದಮಂಡನೆಗಳನ್ನು ಸಲ್ಲಿಸುವಂತೆ ಎರಡೂ ಕಡೆ ವಕೀಲರಿಗೆ ಸೂಚಿಸಿತ್ತು. ದರ್ಶನ್ ವಿರುದ್ಧದ ಹಳೆಯ ಕೇಸ್ ಗಳ ಬಗ್ಗೆಯೂ ದಾಖಲೆ ಸಲ್ಲಿಕೆ ಮಾಡುವಂತೆ ಕೇಳಿತ್ತು. ಪ್ರಾಸಿಕ್ಯೂಷನ್ ಪರ ವಕೀಲರಿಂದ ಸುಪ್ರೀಂಕೋರ್ಟ್ ಗೆ ಸಲ್ಲಿಕೆಯಾಗಿದೆ.

ಚಾರ್ಜ್ ಫ್ರೇಮ್

ಚಾರ್ಜ್ ಫ್ರೇಮ್ ಸಲುವಾಗ ಕೋರ್ಟ್ ಎರಡು ಕಡೆಯ ವಾದ ಆಲಿಸಲಿದೆ. ಚಾರ್ಜ್ ಫ್ರೇಮ್ ಎಂದರೆ ದೋಷಾರೋಪ ಹೊರಿಸುವುದು‌. ಯಾವ ಯಾವ ಸೆಕ್ಷನ್​ಗಳಡಿ ಆರೋಪ ಇದೆ ಎಂದು ಕೋರ್ಟ್​ನಲ್ಲಿ ಜಡ್ಜ್ ಆರೋಪ ಹೊರಿಸುತ್ತಾರೆ. ಆ ಸೆಕ್ಷನ್​​ಗಳ ಬಗ್ಗೆ ಕೋರ್ಟ್​ನಲ್ಲಿ ಇನ್ನೂ ಮುಂದೆ ವಾದ ನಡೆಯುತ್ತೆ. ಹೀಗಾಗಿ ಆರೋಪಿಗಳಿಗೆ ಆತಂಕ ಎದುರಾಗಿದೆ.

Darshan and Pavitra Gowda
ದರ್ಶನ್ ಅಭಿಮಾನಿಗಳಿಗೆ ಸಿಹಿಸುದ್ದಿ; 'ಡೆವಿಲ್' ಚಿತ್ರದ ಹಾಡು 'ಇದ್ರೆ ನೆಮ್ದಿಯಾಗ್ ಇರ್ಬೇಕ್' ಕೊನೆಗೂ ಬಿಡುಗಡೆಗೆ ಸಿದ್ಧ

ಈಗಾಗಲೇ ಸುಪ್ರೀಂ ಕೋರ್ಟ್ ಜಾಮೀನು ಮೇಲ್ಮನವಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದೆ. ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಟ್ರಯಲ್ ಬಗ್ಗೆ ಪ್ರಶ್ನಿಸಿತ್ತು. ವಿಚಾರಣೆ ವೇಳೆ ಎಷ್ಟು ದಿನದಲ್ಲಿ ಟ್ರಯಲ್ ಆರಂಭ ಮಾಡ್ತೀರಾ ಎಂದು ಪ್ರಶ್ನೆ ಮಾಡಿತ್ತು. ಆಗ ಸರ್ಕಾರದ ಪರ ವಕೀಲರು ಆರು ತಿಂಗಳಲ್ಲಿ ವಿಚಾರಣೆ ಮುಗಿಸುತ್ತೇವೆ ಎಂದು ಉತ್ತರಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಟ್ರಯಲ್ ದಿನಾಂಕ ನಿಗದಿ ಆಗುವ ಸಾಧ್ಯತೆ ಇತ್ತು. 64ನೇ ಸೆಷನ್ಸ್ ಕೋರ್ಟ್​ನಲ್ಲಿ ನ್ಯಾಯಾಧೀಶರಾದ ಐ.ಪಿ.ನಾಯ್ಕ್ ಅವರು ವಿಚಾರಣೆಯನ್ನು ಸೆಪ್ಟೆಂಬರ್‌ 9ಕ್ಕೆ ಮುಂದೂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com