Free Trade Agreement: ಶೀಘ್ರದಲ್ಲೇ ಇಂಗ್ಲೆಂಡ್ ನಲ್ಲಿ ಘಮಘಮಿಸಲಿದೆ ಮೈಸೂರು ಸ್ಯಾಂಡಲ್ ಸೋಪ್- ಹಟ್ಟಿ ಕಾಪಿ!

ಒಂದು ವೇಳೆ ಒಪ್ಪಂದ ಫಲಪ್ರದವಾದರೆ ಶೀಘ್ರದಲ್ಲೇ ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಸಿಲ್ಕ್ ಮತ್ತು ಚಿಕ್ಕಮಗಳೂರು ಕಾಫಿ ಯುನೈಟೆಡ್ ಕಿಂಗ್‌ಡಮ್ ತಲುಪಲಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಸಂಬಂಧ ಯುಕೆ ಮತ್ತು ಕರ್ನಾಟಕ ಕೈಗಾರಿಕಾ ಅಧಿಕಾರಿಗಳ ನಡುವೆ ಚರ್ಚೆಗಳು ನಡೆಯುತ್ತಿವೆ ಎಂದು ಕರ್ನಾಟಕ -ಕೇರಳದ ಬ್ರಿಟಿಷ್ ಉಪ ಹೈಕಮಿಷನರ್ ಮತ್ತು ದಕ್ಷಿಣ ಏಷ್ಯಾದ ಉಪ ವ್ಯಾಪಾರ ಆಯುಕ್ತ (ಹೂಡಿಕೆ) ಚಂದ್ರು ಅಯ್ಯರ್ ಮಂಗಳವಾರ ತಿಳಿಸಿದ್ದಾರೆ.

ಒಂದು ವೇಳೆ ಒಪ್ಪಂದ ಫಲಪ್ರದವಾದರೆ ಶೀಘ್ರದಲ್ಲೇ ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಸಿಲ್ಕ್ ಮತ್ತು ಚಿಕ್ಕಮಗಳೂರು ಕಾಫಿ ಯುನೈಟೆಡ್ ಕಿಂಗ್‌ಡಮ್ ತಲುಪಲಿದೆ.

ಬೆಂಗಳೂರು ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ (ಬಿಸಿಐಸಿ) ಆಯೋಜಿಸಿದ್ದ ಎಫ್‌ಟಿಎ ಕುರಿತು ನಡೆದ ಅಧಿವೇಶನದಲ್ಲಿ ಅಯ್ಯರ್ ಮಾತನಾಡುತ್ತಿದ್ದರು. ದಕ್ಷಿಣ ಏಷ್ಯಾದ ವ್ಯಾಪಾರ ಆಯುಕ್ತ ಮತ್ತು ಪಶ್ಚಿಮ ಭಾರತದ ಬ್ರಿಟಿಷ್ ಉಪ ಹೈಕಮಿಷನರ್ ಹರ್ಜಿಂದರ್ ಕಾಂಗ್ ಕೂಡ ಅಧಿವೇಶನದಲ್ಲಿ ಹಾಜರಿದ್ದರು.

ಹೊಸ ಆಧುನಿಕ ಭಾರತದ ಕಥೆಯ ಭಾಗವಾಗಲು ಯುಕೆ ಬಯಸುತ್ತದೆ ಎಂದು ಅಯ್ಯರ್ ಹೇಳಿದರು, ಇದನ್ನು ಪ್ರಧಾನಿ ಮೋದಿ ತಮ್ಮ ಇತ್ತೀಚಿನ ಬೆಂಗಳೂರು ಭೇಟಿಯ ಸಮಯದಲ್ಲಿ ಸಹ ಪ್ರತಿಬಿಂಬಿಸಿದರು, ಅದಕ್ಕಾಗಿಯೇ ಹಲವಾರು ಬ್ರಿಟಿಷ್ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಿವೆ. ಭಾರತವು ಆರು ವರ್ಷಗಳಿಂದ ಯುಕೆಯಲ್ಲಿ ಎರಡನೇ ಅತಿದೊಡ್ಡ ಹೂಡಿಕೆದಾರ ಆಗಿದೆ ಎಂದು ಅವರು ಹೇಳಿದರು.

ಇತ್ತೀಚೆಗೆ ಲಂಡನ್‌ನಲ್ಲಿ ಎಂಟಿಆರ್ ಮತ್ತು ಹಟ್ಟಿ ಕಾಪಿ ತನ್ನ ಮೊದಲ ಔಟ್‌ಲೆಟ್ ತೆರೆದಿದೆ ಎಂದು ಕರ್ನಾಟಕದ ಬ್ರ್ಯಾಂಡ್‌ಗಳ ಬಗ್ಗೆ ಗಮನಸೆಳೆದರು. ಕರ್ನಾಟಕದಿಂದ ಮೊದಲ ಬಾರಿಗೆ ಜಂಬೂ ನೇರಳೆ ಹಣ್ಣು ಯುಕೆಗೆ ಹೋಗಿದೆ ಎಂದು ನಮಗೆ ತಿಳಿದಿದೆ. ತೋಟಗಾರಿಕೆ ಉತ್ಪನ್ನಗಳಿಗೆ ಅಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಅಯ್ಯರ್ ಹೇಳಿದರು.

Representational image
ಪಾಕ್ ಜೊತೆಗೆ ಯುದ್ಧದ ಕಾರ್ಮೋಡ ನಡುವೆ ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ ಅಂತಿಮ!

ರತ್ನಗಳು ಮತ್ತು ಆಭರಣಗಳು, ಜವಳಿ ಮತ್ತು ಸಾಂಪ್ರದಾಯಿಕ ಕರಕುಶಲ ವಸ್ತುಗಳಂತಹ ಕ್ಷೇತ್ರಗಳಲ್ಲಿ ಕರ್ನಾಟಕವು ಬಲವಾದ ಸಾಮರ್ಥ್ಯವನ್ನು ಹೊಂದಿದೆ. "ಚನ್ನಪಟ್ಟಣದ ಆಟಿಕೆಗಳು ಮತ್ತು ಚಿಕ್ಕಮಗಳೂರು ಕಾಫಿ ಯುಕೆಯಲ್ಲಿ ಮಾರಾಟವಾಗುವುದನ್ನು ನೋಡಲು ನಾನು ಇಷ್ಟಪಡುತ್ತೇನೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಯುಕೆ ಮೂಲದ ತಂತ್ರಜ್ಞಾನ ಹೂಡಿಕೆಗಳ ಕುರಿತು ಮಾತನಾಡಿದ ಅಯ್ಯರ್ ವಿವರಗಳು ಗೌಪ್ಯವಾಗಿರುತ್ತವೆ ಆದರೆ ವ್ಯಾಪಾರ ಮಾರ್ಗ ತುಂಬಾ ಪ್ರಬಲವಾಗಿದೆ. ಗಮನಾರ್ಹ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುತ್ತದೆ ಎಂದು ಹೇಳಿದರು.

ಪ್ರಸ್ತಾವಿತ ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದದಿಂದ (ಎಫ್‌ಟಿಎ) 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸಬಹುದು, ಯುಕೆ ಮಾರುಕಟ್ಟೆ ಭಾರತೀಯ ಸರಕುಗಳಿಗೆ ಶೇ. 99 ಸುಂಕ-ಮುಕ್ತ ಪ್ರವೇಶವನ್ನು ನೀಡುತ್ತದೆ ಮತ್ತು ಭಾರತಕ್ಕೆ ಬ್ರಿಟಿಷ್ ಉತ್ಪನ್ನಗಳ ಮೇಲೆ ಗಣನೀಯ ಸುಂಕ ಕಡಿತ ಇರುತ್ತದೆ ಎಂದು ಅಧಿಕಾರಿಗಳು ವಿವರಿಸಿದರು.

ಒಪ್ಪಂದವು ಎರಡೂ ಕಡೆಯ ಪ್ರಮುಖ ವಲಯಗಳಿಗೆ ಪ್ರಯೋಜನವನ್ನು ನೀಡುತ್ತದೆ. "ಜವಳಿ, ಚರ್ಮ, ಪಾದರಕ್ಷೆಗಳು, ಸಮುದ್ರ ಉತ್ಪನ್ನಗಳು ಮತ್ತು ಎಂಜಿನಿಯರಿಂಗ್ ಸರಕುಗಳಂತಹ ಭಾರತೀಯ ರಫ್ತುಗಳು ಯುಕೆ ಮಾರುಕಟ್ಟೆಯನ್ನು ಶೂನ್ಯ ಸುಂಕದಲ್ಲಿ ಪ್ರವೇಶಿಸುತ್ತವೆ, ಆದರೆ ಭಾರತವು ವಿಸ್ಕಿ, ಜಿನ್, ಸೌಂದರ್ಯವರ್ಧಕಗಳು ಮತ್ತು ಆಟೋಮೋಟಿವ್ ಭಾಗ ಸೇರಿದಂತೆ ಬ್ರಿಟಿಷ್ ಉತ್ಪನ್ನಗಳ ಮೇಲಿನ ಸುಂಕವನ್ನು ಶೇ, 90 ರಷ್ಟು ಕಡಿಮೆ ಮಾಡುತ್ತದೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com