ಮಂಗಳೂರು: ಸಾಂಪ್ರದಾಯಿಕ ಶಾಯಿ ಬಳಸಿ 302 ದಿನಗಳಲ್ಲಿ ಕುರಾನ್ ಬರೆದ ಕ್ಯಾಲಿಗ್ರಫಿಸ್ಟ್!

ಅರೇಬಿಕ್ ಕ್ಯಾಲಿಗ್ರಾಫರ್ ಆಗಿರುವ ಸಜಿಲಾ, ಕುಟುಂಬ ಸದಸ್ಯರಿಗೆ ಉಡುಗೊರೆಯಾಗಿ ನೀಡಲು ಕ್ಯಾಲಿಗ್ರಫಿ ಕಲಾಕೃತಿಗಳನ್ನು ರಚಿಸುತ್ತಿದ್ದರು.
For the entire project, Sajila used 15 bottles of ink
302 ದಿನಗಳಲ್ಲಿ ಕುರಾನ್ ಬರೆದ ಕ್ಯಾಲಿಗ್ರಫಿಸ್ಟ್
Updated on

ಮಂಗಳೂರು: 22 ವರ್ಷದ ಫಾತಿಮಾ ಸಜಿಲಾ ಅವರಿಗೆ ಈ ಕೆಲಸ ಒಂದು ಆಧ್ಯಾತ್ಮಿಕ ಧ್ಯೇಯವಾಗಿತ್ತು. ಪುತ್ತೂರಿನ ಬೈತಡ್ಕದ ಬಿ.ಕಾಂ ಪದವೀಧರೆ, ಸಾಂಪ್ರದಾಯಿಕ ಶಾಯಿ ಮತ್ತು ಕಲಾಮ್ (ಕ್ಯಾಲಿಗ್ರಫಿ ಪೆನ್) ಬಳಸಿ 302 ದಿನಗಳ ಅವಧಿಯಲ್ಲಿ ಸಂಪೂರ್ಣ ಕುರಾನ್ ಅನ್ನು ಕೈಬರಹದಲ್ಲಿ ಬರೆದಿದ್ದಾರೆ.

22x14 ಅಳತೆ ಮತ್ತು 13.8 ಕೆಜಿ ತೂಕದ ಅಂತಿಮ ಹಸ್ತಪ್ರತಿ ಅವರ ಬದ್ಧತೆ ಮತ್ತು ಶಿಸ್ತಿಗೆ ಸಾಕ್ಷಿಯಾಗಿದೆ. ಸಜಿಲಾ ಜನವರಿ 2021 ರಲ್ಲಿ ಈ ಕೆಲಸ ಪ್ರಾರಂಭಿಸಿದರು, ಆರಂಭದಲ್ಲಿ ಅವರು ಒಟ್ಟು 30 ಜುಜ್‌ಗಳಲ್ಲಿ ಮೂರು ಜುಜ್‌ಗಳನ್ನು ಅಥವಾ ಕುರಾನ್‌ನ ಕೆಲವು ಭಾಗಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾದರು. ಅದಾದ ನಂತರ ಆರೋಗ್ಯ ಸಮಸ್ಯೆಗಳಿಂದಾಗಿ, ಅವರು ತಮ್ಮ ಪ್ರಯತ್ನಗಳಿಗೆ ವಿರಾಮ ನೀಡಿದರು.

ಅಕ್ಟೋಬರ್ 2024 ರಲ್ಲಿ ಅವರು ಮತ್ತೆ ತಮ್ಮ ಪ್ರಾಜೆಕ್ಟ್ ಗೆ ಮರಳಿದಾಗ, ಈ ಹಿಂದೆ ಬರೆದಿದ್ದ ಪುಟಗಳು ಹಾನಿಗೊಳಗಾಗಿರುವುದು ಕಂಡುಬಂತು, ಶಾಯಿಯಿಂದಾಗಿ ಅವು ಒಂದಕ್ಕೊಂದು ಅಂಟಿಕೊಂಡಿದ್ದವು ಹೀಗಾಗಿ ಅವು ನಿರುಪಯುಕ್ತವಾದವು. ಆದರೆ ತಾವು ಅಂದುಕೊಂಡದ್ದನ್ನು ಬಿಟ್ಟುಕೊಡದಿರಲು ನಿರ್ಧರಿಸಿದ ಅವರು, ಮೊದಲಿನಿಂದ ಪ್ರಾರಂಭಿಸುವ ನಿರ್ಧಾರವನ್ನು ತೆಗೆದುಕೊಂಡರು.

ಈ ಬಾರಿ, ಸಜಿಲಾ ತನ್ನ ಗುರಿಗೆ ಸಂಪೂರ್ಣವಾಗಿ ಬದ್ಧರಾಗಿದ್ದರು ಮತ್ತು ಶೈಕ್ಷಣಿಕ ಮತ್ತು ಇತರ ಎಲ್ಲಾ ಗೊಂದಲಗಳಿಂದ ಸಂಪೂರ್ಣ ವಿರಾಮ ತೆಗೆದುಕೊಂಡು ಕೇವಲ ತಮ್ಮ ಕನಸಿನ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿದರು. ನನ್ನ ಸುತ್ತಮುತ್ತಲಿನ ಜನರು ನನ್ನ ಗುರಿಯ ಬಗ್ಗೆ ತಿಳಿದುಕೊಂಡ ನಂತರ, ಅವರಲ್ಲಿ ಅನೇಕರು ನನ್ನನ್ನು ಭೇಟಿ ಮಾಡಿದ್ದರು. ಅವರ ಭೇಟಿ ಹಾಗೂ ಮಾತುಕತೆಯಿಂದ ನಾನು ಮತ್ತಷ್ಟು ಪ್ರೇರೇಪಿತಳಾದೆ ಎಂದು ನೆನಪಿಸಿಕೊಳ್ಳುತ್ತಾರೆ. ಅವರ ಕಾಲೇಜಿನ ಮರ್ಕಜುಲ್ ಹುದಾ ಆಡಳಿತ ಮಂಡಳಿಯೂ ಸಹ ಅವರ ಆಸೆಗೆ ಪ್ರೋತ್ಸಾಹ ನೀಡಿತು.

For the entire project, Sajila used 15 bottles of ink
ಸಂವಿಧಾನವೇ ನಮಗೆ ಗೀತೆ, ಬೈಬಲ್, ಕುರಾನ್ ಇದ್ದಂತೆ; ಅಂಬೇಡ್ಕರ್ ಕೂಡ ಈಗ ಅದನ್ನು ಬದಲಾಯಿಸಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

ಇಡೀ ಯೋಜನೆಗಾಗಿ, ಸಜಿಲಾ ಕೈಬರಹದ ಹಸ್ತಪ್ರತಿಯನ್ನು ಪೂರ್ಣಗೊಳಿಸಲು 15 ಬಾಟಲಿಗಳ ಶಾಯಿ, 152 ಬಣ್ಣದ ಚಾರ್ಟ್ ಹಾಳೆಗಳು ಹಾಗೂ 100 ಕ್ಕೂ ಹೆಚ್ಚು ಎರೇಸರ್‌ಗಳನ್ನು ಬಳಸಿದರು. ವಿಶೇಷವಾಗಿ ಕುರಾನ್‌ ಸಿದ್ಧವಾಯಿತು. ಅಂತಿಮ ಬೈಂಡಿಂಗ್‌ಗೆ ಸಹಾಯ ಮಾಡುವಲ್ಲಿ ಬೆಂಬಲಕ್ಕೆ ನಿಂತ ತಂದೆ ಇಸ್ಮಾಯಿಲ್ ಹಾಜಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಅರೇಬಿಕ್ ಕ್ಯಾಲಿಗ್ರಾಫರ್ ಆಗಿರುವ ಸಜಿಲಾ, ಕುಟುಂಬ ಸದಸ್ಯರಿಗೆ ಉಡುಗೊರೆಯಾಗಿ ನೀಡಲು ಕ್ಯಾಲಿಗ್ರಫಿ ಕಲಾಕೃತಿಗಳನ್ನು ರಚಿಸುತ್ತಿದ್ದರು, ಅವರ ತಂದೆ ಪವಿತ್ರ ಕುರಾನ್ ಬರೆಯುವ ಮಹತ್ವದ ಕೆಲಸವನ್ನು ತೆಗೆದುಕೊಳ್ಳಲು ಸೂಚಿಸಿದಾಗ ಸಹಜವಾಗಿಯೇ ಒತ್ತಡವಿತ್ತು ಎಂದು ಅವರು ಒಪ್ಪಿಕೊಳ್ಳುತ್ತಾರೆ. ಏಕೆಂದರೆ ಜನರು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು ಮತ್ತು ಅದು ಪೂರ್ಣಗೊಳ್ಳುವ ಮೊದಲೇ ತಮ್ಮ ಕೆಲಸವನ್ನು ನೋಡಲು ಬರುತ್ತಿದ್ದರು ಎಂದು ತಿಳಿಸಿದ್ದಾರೆ.

ಈಗ ಅವರ ಧ್ಯೇಯ ಪೂರ್ಣಗೊಂಡ ನಂತರ, ಸಜಿಲಾ ಫ್ಯಾಷನ್ ವಿನ್ಯಾಸ ತರಗತಿಗಳಿಗೆ ಸೇರಿಕೊಂಡಿದ್ದಾರೆ. ತನ್ನ ಗುರುಗಳ ಸಲಹೆಯ ಮೇರೆಗೆ, ಪ್ರಸಿದ್ಧ ಹದೀಸ್ ಸಂಗ್ರಹ (ಪ್ರವಾದಿ ಮುಹಮ್ಮದ್ ಅವರ ಮಾತುಗಳು ಮತ್ತು ಸಂಪ್ರದಾಯಗಳು) 'ಸಾಹಿಹ್ ಅಲ್-ಬುಖಾರಿ'ಯನ್ನು ಕೈಯಿಂದ ಬರೆಯುವ ಪ್ಲಾನ್ ಮಾಡಿದ್ದಾರೆ.

ಶಾಯಿ-ಅದ್ದುವ ತಂತ್ರವನ್ನು ಬಳಸಿಕೊಂಡು ಸಂಪೂರ್ಣ ಕುರಾನ್ ಅನ್ನು ಕೈಯಿಂದ ಬರೆದಿರುವ ತನ್ನ ಮಗಳು ಭಾರತದಲ್ಲಿ ಮೂರನೇ ವ್ಯಕ್ತಿಯಾಗಬಹುದು ಎಂದು ಅವರ ತಂದೆ ಹೇಳುತ್ತಾರೆ. ಆಕೆಯ ಸಮರ್ಪಣೆಯ ಬಗ್ಗೆ ನಮಗೆ ಅಪಾರ ಹೆಮ್ಮೆ ಇದೆ" ಎಂದು ಇಸ್ಮಾಯಿಲ್ ಹಾಜಿ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com